Breaking News

ನಟಿ ರಾಗಿಣಿ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ

ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ನಿರ್ದೇಶಕ ನಂದ ಕಿಶೋರ್ ಕಾಂಬಿನೇಷನ್ ನ ಪ್ಯಾನ್ ಇಂಡಿಯಾ ವೃಷಭ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮೋಹಲ್ ಲಾಲ್ ಜೊತೆ ಕನ್ನಡದ ನಟಿ, ತುಪ್ಪದ ಹುಡುಗಿ ರಾಗಿಣಿ ನಟಿಸುತ್ತಿದ್ದು, ಚಿತ್ರತಂಡದ ಜೊತೆಗಿನ ಫೋಟೋವನ್ನ ರಾಗಿಣಿ ಹಂಚಿಕೊಂಡಿದ್ದಾರೆ.

ವೃಷಭ ಸಿನಿಮಾದ ಚಿತ್ರೀಕರಣ ಕಳೆದ ಭಾನುವಾರದಿಂದ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಡಿಫರೆಂಟ್ ಆಗಿರೋ ಕಥೆಯನ್ನ ಹೇಳೋಕೆ ನಿರ್ದೇಶಕ ನಂದ ಕಿಶೋರ್ ಮುಂದಾಗಿದ್ದು, ‘ಕಾಂದಹಾರ್’ ಬಳಿಕ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ಮತ್ತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ ನಟಿ ರಾಗಿಣಿ. ಸಿನಿಮಾದ ಭಾಗವಾಗಿರೋದಕ್ಕೆ ಚಿತ್ರತಂಡಕ್ಕೆ ನಟಿ ಧನ್ಯವಾದಗಳನ್ನ ತಿಳಿಸಿದ್ದಾರೆ.

ನಟಿ ರಾಗಿಣಿ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. ತುಪ್ಪದ ಬೆಡಗಿಗೆ ಡಿಮ್ಯಾಂಡ್‌ ಜಾಸ್ತಿಯಾಗಿದ್ದು, ಒಟ್ಟು 8ಕ್ಕೂ ಹೆಚ್ಚು ಸಿನಿಮಾಗಳಿಗೆ ರಾಗಿಣಿ ನಾಯಕಿಯಾಗಿದ್ದಾರೆ. ‘ವೃಷಭ’ ಚಿತ್ರದಲ್ಲಿ ಮೈ ಜುಂ ಎನಿಸುವಂತಹ ಸಾಹಸ ಮತ್ತು ರೋಚಕ ದೃಶ್ಯಗಳು ಇರಲಿದ್ದು, ನಟ ಮೋಹನ್ ಲಾಲ್ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ.

Share News

About BigTv News

Check Also

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ …

Leave a Reply

Your email address will not be published. Required fields are marked *