Breaking News

Fake Fake ID ತೋರಿಸಿ ವಿಧಾನಸೌಧ ಸುತ್ತಾಟ: ಆರೋಪಿ ಸೆರೆ..

ನಕಲಿ ಐಡಿಕಾರ್ಡ್‌ ತೋರಿಸಿ ಪ್ರವೇಶ ಸಚಿವಾಲಯದಲ್ಲಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿ ವಿಧಾನಸೌಧದಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕು ಮೂಲದ ಬೆಂಗಳೂರಿನ ಜಯನಗರ ನಿವಾಸಿ ಶ್ರೀಶೈಲ ಜಕ್ಕಣ್ಣನವರ್‌ ಬಂಧಿತ..ಎಂ.ಎ.ಪಧವೀದರನಾಗಿರುವ ಶ್ರೀಶೈಲ ಜಕ್ಕಣ್ಣನವರ್‌ ವೃತ್ತಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ಆರೋಪಿಯು ಗುತ್ತಿಗೆ ಸಂಬಂಧಿತ ಕೆಲಸದ ಬಗ್ಗೆ ಆಗಾಗ ವಿಧಾನಸೌಧಕ್ಕೆ ತೆರಳುತ್ತಿದ್ದ. ಪಾಸ್‌ ಇಲ್ಲದೆ ವಿಧಾನಸೌಧದೊಳಗೆ ಪ್ರವೇಶ ಪಡೆಯಲು ಪರದಾಡುತ್ತಿದ್ದ. ಹೀಗಾಗಿ ಸಚಿವಾಲಯದಲ್ಲಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವ ಬಗ್ಗೆ ನಕಲಿ ಐಡಿಕಾರ್ಡ್‌ ತೋರಿಸಿ ಪ್ರವೇಶ ಪಡೆಯುತ್ತಿದ್ದ.ಆ.5 ರಂದು ಎಂದಿನಂತೆ ನಕಲಿ ಗುರುತಿನ ಚೀಟಿ ತೋರಿಸಿ ತೆರಳುತ್ತಿದ್ದಾಗ ಭದ್ರತಾ ಸಿಬ್ಬಂದಿ ಅನುಮಾನದ ಮೇರೆಗೆ ಪರಿಶೀಲಿಸಿದ್ದು ನಕಲಿ ಎಂಬುದು ಗೊತ್ತಾಗಿದ್ದು, ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *