Breaking News

ಅಭಿಮಾನಿಗಳಿಗೆ ಗುಡ್ ನ್ಯೂಸ್ : ಇದೀಗ ವರುಣ್-ಆಲಿಯಾ ಭಟ್ಮೇ ಮೇನಿಯಾ ಶುರುವಾಗಲಿದೆ.

ಬಾಲಿವುಡ್‌ನ ತೆರೆ ಮೇಲಿನ ಬೆಸ್ಟ್ ಜೋಡಿ ಅಂದರೆ ವರುಣ್ ಧವನ್-ಆಲಿಯಾ ಭಟ್. ಮತ್ತೆ ವರುಣ್-ಆಲಿಯಾ ಭಟ್ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
2012ರಲ್ಲಿ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ವರುಣ್ ಧವನ್ ಆಲಿಯಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇಬ್ಬರ ಕೆಮಿಸ್ಟ್ರಿ ಈ ಸಿನಿಮಾದಲ್ಲಿ ಮೋಡಿ ಮಾಡಿತ್ತು. ಬಳಿಕ ಕಳಂಕ್, ಬದ್ರಿನಾಥ್ ಕಿ ದುಲ್ಹನಿಯಾ, ಹಮ್ಟಿ ಶರ್ಮಾ ಕಿ ದುಲ್ಹನಿಯಾ ಸಿನಿಮಾಗಳಲ್ಲಿ ವರುಣ್-ಆಲಿಯಾ ಜೊತೆಯಾಗಿ ಮಿಂಚಿದ್ದಾರೆ. ತೆರೆ ಮೇಲಿನ ಸಕ್ಸಸ್‌ಫುಲ್ ಜೋಡಿ ಅಂದರೆ ತಪ್ಪಾಗಲಾರದು.

ಇದೀಗ ವರುಣ್-ಆಲಿಯಾ ಮೇನಿಯಾ ಶುರುವಾಗಲಿದೆ. ಬವಾಲ್ ಚಿತ್ರದ ನಂತರ ವರುಣ್ ಧವನ್ ಆಲಿಯಾ ಭಟ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಯಾ ಪ್ರೇಮಕಥೆಯ ಜೊತೆ ವರುಣ್-ಆಲಿಯಾ ಫುಲ್ ಮನರಂಜನೆ ಕೊಡೋದು ಗ್ಯಾರೆಂಟಿ.

ಶಶಾಂಕ್ ಖೈತಾನ್ ನಿರ್ದೇಶನದ ‘ದುಲ್ಹನಿಯಾ ಪಾರ್ಟ್ 3’ವರುಣ್-ಆಲಿಯಾ ರೊಮ್ಯಾನ್ಸ್ ಮಾಡಲಿದ್ದಾರೆ. ಭಿನ್ನ ಕಥೆ-ಪಾತ್ರದ ಮೂಲಕ ಬಿಟೌನ್‌ನ ಸಕ್ಸಸ್‌ಫುಲ್ ಜೋಡಿ ಬರುತ್ತಿದೆ. ರಣ್‌ವೀರ್-ಆಲಿಯಾ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಪ್ರೇಕ್ಷಕರಿಗೆ ಹಿಡಿಸಿದೆ. ಹಾಗಾಗಿ ಹೊಸ ಪ್ರಾಜೆಕ್ಟ್ಗಳತ್ತ ಆಲಿಯಾ ಮುಖ ಮಾಡಿದ್ದಾರೆ. ‘ದುಲ್ಹನಿಯಾ’3ನಲ್ಲಿ ನಟಿಸಲು ಆಲಿಯಾ ಓಕೆ ಎಂದಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಅಪ್‌ಡೇಟ್ ಸಿಗಲಿದೆ

Share News

About BigTv News

Check Also

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ …

Leave a Reply

Your email address will not be published. Required fields are marked *