ಹುಬ್ಬಳ್ಳಿಯಲ್ಲಿ ರಾತ್ರೋ ರಾತ್ರಿ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಬಂದಿದ್ದು ಯಾಕೆ..? ನಿಯಮಗಳ ಉಲ್ಲಂಘನೆ ಮಾಡಿದ್ರ ಅಧಿಕಾರಿಗಳು…? ಇದರಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮನಬಂದಂತೆ ಕಾನೂನು ಬಳಸಿಕೊಳ್ಳುತ್ತಿದ್ದಾರೆ. ಅವರವರ ಅವಶ್ಯಕತೆಗೆ ತಕ್ಕಂತೆ ಕಾನೂನು ಬಳಸಿಕೊಳ್ಳುತ್ತಿದ್ದರೆ ಜನ ಸಾಮಾನ್ಯರಿಗೆ ಯಾವ ಕಾನೂನು.
ಕಳೆದ ವರ್ಷಗಳ ಹಿಂದೆ ನಮ್ಮ ಹುಬ್ಬಳ್ಳಿ ಧಾರವಾಡದ ಕಮಿಷನರ್ ಆದಂತಹ ಲಾಬು ರಾಮ್ ಅವರು ಪೊಲೀಸ್ ಸಿಬ್ಬಂದಿಗಳಿಗೆ ಯಾವುದೇ ಮುಲಾಜಿಲ್ಲದೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ, ಧಾರವಾಡದಿಂದ ಹುಬ್ಬಳ್ಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಈಗ ಬಂದ ಆಯುಕ್ತರು ಒಂದೇ ತಿಂಗಳಲ್ಲಿ ಹೀಗೆ ವರ್ಗಾವಣೆ ಆದ ಸಿಬ್ಬಂದಿಯನ್ನು ಮತ್ತೆ ಅದೇ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

ಆದರೆ ಕಷ್ಟ ಪಟ್ಟು ಹುಬ್ಬಳ್ಳಿ -ಧಾರವಾಡ ಓಡಾಡಿ ಕೆಲಸ ಮಾಡೋ ಪೊಲೀಸ್ ಸಿಬ್ಬಂದಿ ಇದಾರೆ ಅವರ ಮೇಲೆ ಅಧಿಕಾರಿಗಳು ಕಣ್ಣು ತೆರೆಯೋದು ಯಾವಾಗ..? ಶಿಸ್ತು ಮತ್ತು ಧಕ್ಷತೆಗೆ ಮತ್ತೊಂದು ಹೆಸರು ಆದ್ರೆ ಅದೇ ಪೊಲೀಸ್ ಇಲಾಖೆ, ಆದರೆ ರಾತ್ರೋ ರಾತ್ರಿ ಪೊಲೀಸರು ರಿಲೀವ್ ಆಗತಿದ್ದಾರೆ. ಇದಕ್ಕೆ ಯಾವ ಯಾವ ಶಾಸಕರ ಪಾತ್ರ ಯಾರಿಗೆ ಅನ್ನೋದು ಕಾದು ನೋಡಬೇಕು.ಪೊಲೀಸ್ ಇಲಾಖೆಯಲ್ಲಿ ಇಂತಾ ಘಟನೆ ನಡೀತಾ ಇರೋದು ದೊಡ್ಡ ದುರಂತಕ್ಕೆ ಕಾರಣವಾಗಿದೆ.ಇಗಲಾದರು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
bigtvnews | Hubli Dharwad News | Kannada News | Karnataka News Hubli News | News In Hubli | Local news

