ನವಲಗುಂದ: ಹನ್ನೆರಡನೆಯ ಶತಮಾನದಲ್ಲಿ ಕಾಯಕ ವರ್ಗದಿಂದ ಬಂದ ಅನೇಕರು ಶಿವಶರಣರಾದರು. ಬಸವಣ್ಣನವರು ದುಡಿಯುವ ವರ್ಗದಿಂದ ಬಂದ ಹಲವರಿಗೆ ಅವಕಾಶ ಕಲ್ಪಿಸಿದರು. ವಿಶ್ವದ ಪ್ರಥಮ ಸಂಸತ್ ಎಂದೇ ಖ್ಯಾತಿ ಪಡೆದ ಅನುಭವ ಮಂಟಪದಲ್ಲಿ ಇಂತಹ ಎಲ್ಲ ಶಿವಶರಣರಿಗೆ ಗೌರವ ದೊರಕಿತು. ಅಂತಹ ಶಿವಶರಣರಲ್ಲಿ ಪ್ರಮುಖರಾದವರು ನೂಲಿಯ ಚಂದಯ್ಯನವರು. ದಲಿತ ವರ್ಗದಿಂದ ಬಂದ ಅವರ ವಚನಗಳಲ್ಲಿ ಕಾಯಕ ನಿಷ್ಠೆಗೆ ಹೆಚ್ಚು ಮಹತ್ವವಿದೆ. ಹೀಗಾಗಿ ಅವರು ಶ್ರೇಷ್ಠ ವಚನಕಾರರು ಎಂದು ಶಿಕ್ಷಕ ಸಾಹಿತಿ ಡಾ.ಸಿದ್ಧಲಿಂಗೇಶ ಹಂಡಿಗಿ ಹೇಳಿದರು.
ಸ್ಥಳೀಯ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶಿವಶರಣ ನೂಲಿಯ ಚಂದಯ್ಯನವರ ಜಯಂತಿಯ ಮುಖ್ಯ ಉಪನ್ಯಾಸಕರಾಗಿ ಡಾ. ಹಂಡಿಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಕ ನೀಲಯ್ಯ ತಾಳಿಕೋಟಿಮಠ, ನೂಲಿಯ ಚಂದಯ್ಯನವರು ತಮ್ಮ ವಚನಗಳಲ್ಲಿ ನೇರ ನಿಷ್ಠುರವಾಗಿ ವಿಚಾರಗಳನ್ನು ಹೇಳಿ ಸಮಾಜ ತಿದ್ದುವ ಕಾರ್ಯ ಮಾಡಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





