ಭಾರತದ ಆತಿಥ್ಯದಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಭರ್ಜರಿಯಾಗಿ ಸಾಗುತ್ತಿದೆ. ಟೀಮ್ ಇಂಡಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಈವರೆಗಿನ ಸೆಣಸಾಟದಲ್ಲಿ ಭಾರೀ ಯಶಸ್ಸು ಸಾಧಿಸಿ ಎಲ್ಲರ ಗಮನಸೆಳೆಯುತ್ತಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳು ಭಾರೀ ಕಳಪೆ ಪ್ರದರ್ಶನ ನೀಡುತ್ತಿದ್ದು ಭಾರೀ ಹಿನ್ನಡೆಯಲ್ಲಿದೆ. ಪಂದ್ಯಗಳು ಮತ್ತಷ್ಟು ತೀವ್ರವಾಗಲಿದ್ದು ಮುಂದಿನ ದಿನಗಳಲ್ಲಿ ಈ ಕಾದಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಇನ್ನು ಈ ಟೂರ್ನಿಯಲ್ಲಿ ಈಗಾಗಲೇ 14 ಪಂದ್ಯಗಳು ಆಯೋಜನೆಯಾಗಿದ್ದು ಸಾಕಷ್ಟು ಮನರಂಜನೆ ಅಭಿಮಾನಿಗಳಿಗೆ ದೊರೆತಿದೆ. ಇದೇ ಸಂದರ್ಭದಲ್ಲಿ ಈಗಾಗಲೇ ಕೆಲ ಪ್ರಮುಖ ವಿಶ್ವದಾಖಲೆಗಳು ಭಗ್ನವಾಗಿದ್ದು ಹೊಸ ವಿಶ್ವದಾಖಲೆಗಳು ಬರೆಯಲ್ಪಟ್ಟಿದೆ. ಈ ವರದಿಯಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮುರಿಯಲ್ಪಟ್ಟ ನಾಲ್ಕು ಪ್ರಮುಖ ವಿಶ್ವದಾಖಲೆಗಳ ಪಟ್ಟಿಯ ವಿವರವಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





