ಇದೆ ತಿಂಗಳು ಕೊನೆಯಲ್ಲಿ ಹೆಬ್ಬಾಳ್ಕರ್ ಹೈ ವೋಲ್ಟಜ್ ಮೀಟಿಂಗ್ ಶಂಕರ್ ಪಾಟೀಲ್ ಮುನೇನಕೊಪ್ಪಗೆ ಕಾಂಗ್ರೆಸ್ ಬಾಗಿಲು ಬಂದ್ …? ಹುಬ್ಬಳ್ಳಿ : ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಸೋಲಿಸಬೇಕು ಎಂದರೆ ಕಾಂಗ್ರೆಸ್ ಯುವ ನಾಯಕ ರಜತ್ ಉಳ್ಳಾಗಡ್ಡಿ ಮಠ ಅವರಿಗೆ ಟಿಕೆಟ್ ನೀಡಬೇಕು ರಾಜಕೀಯ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ವೀಕ್ಷಕರಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪತ್ರ ಕೂಡ ಬರೆಯಲಾಗಿದೆ.ಹೌದು ಸದ್ಯ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ್ನು ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಅವರಿಗೆ ನೀಡಬೇಕು ಎಂದು ಹಿರಿಯ ನ್ಯಾಯವಾದಿ ಹಾಗೂ

ದೇವರಾಜ್ ಅರಸ್ ಅವರ ಆಪ್ತ ರಾಗಿ ಕೆಲಸ ಮಾಡಿದ್ದ ಅಶೋಕ ಗೌರೋಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಪತ್ರ ಬರೆದಿದ್ದಾರೆ.ಈ ಹಿಂದೆ ರಜತ ಉಳ್ಳಾಗಡ್ಡಿಮಠ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಇನ್ನೇನು ಸ್ಪರ್ಧಿಸುವ ಹಂತದಲ್ಲಿ ಇರುವಾಗ ಬದಲಾದ ರಾಜಕೀಯ ಸಮಯದಲ್ಲಿ ತಮ್ಮ ಎದುರಾಳಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಬಿಟ್ಟು ಕೊಟ್ಟು ಪಕ್ಷ ನಿಷ್ಠೆ ತೋರಿದ್ದರು.ಅಲ್ಲದೆ ಜಿಲ್ಲೆಯಾದ್ಯಂತ ರಜತ್ ಯುವ ಸಮೂಹದಲ್ಲಿ ಸಂಚಲನ ಮೂಡಿಸಿದ್ದು ಜೋಶಿ ಅವರನ್ನ ಸೋಲಿಸುವ ಸೂಕ್ತ ಅಭ್ಯರ್ಥಿ ಎಂದು ಹೇಳಲಾಗುತ್ತಿದೆಶಂಕರ್ ಪಾಟೀಲ್ ಮುನೇನಕೊಪ್ಪಗೆ ಕಾಂಗ್ರೆಸ್ ಬಾಗಿಲು ಬಂದ್…? ತಮ್ಮ ರಾಜಕೀಯ ಗುರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದ ನಂತರ ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ಬಗ್ಗೆ ಮೋದ ಮೊದಲು ಉತ್ಸಾಹ ತೋರಿದ್ದ ಕಾಂಗ್ರೆಸ್ ನಾಯಕರು ನಂತರ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ತುಟಿ ಬಿಚ್ಚಿಲ್ಲ.ಈ ಬಗ್ಗೆ ಶೆಟ್ಟರ್ ಪ್ರಯತ್ನ ನಡೆಸಿದರು ವಿಫಲವಾಗಿದ್ದು ಚುನಾವಣೆಯಲ್ಲಿ ಸೋತಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಡ ಎನ್ನುವ ಸಂದೇಶವನ್ನು ರಾಜ್ಯ ಉಸ್ತುವಾರಿ ಸರ್ಜೇವಾಲ ನೀಡಿದ್ದಾರೆ ಅಲ್ಲದೆ

ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ತಯಾರಿ ನಡೆಸುವಂತೆ ರಜತ್ ಉಳ್ಳಾಗಡ್ಡಿಮಠ,ಸೇರಿದಂತೆ ಇನ್ನಿಬ್ಬರು ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದು ಅಂತಿಮ ಮೂವರ ಹೆಸರನ್ನು ಇದೆ ತಿಂಗಳ ಕೊನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೈ ಕಮಾಂಡ್ ಗೆ ತಲುಪಿಸಲಿದ್ದಾರೆ… ವರದಿ ಮಲ್ಲಿಕ್ ಬೆಳಗಲಿ….
bigtvnews | Hubli Dharwad News | Kannada News | Karnataka News Hubli News | News In Hubli | Local news

