ಉತ್ತರ ಕನ್ನಡ: ಸರ್ಕಾರ ವಿಶೇಷ ಕಾಳಜಿ ವಹಿಸಿ ಹೇಗಾದ್ರೂ ಮಾಡಿ ರಾಜ್ಯದಲ್ಲಿರುವ ಒಂದಕ್ಕಿ ಹಾಗೂ ಎರಡಂಕಿ ಜೂಜು ಮಟ್ಟ ಹಾಕುವ ಕಾನೂನು ಜಾರಿಗೆ ತಂದು ವರ್ಷಗಳೇ ಉರುಳಿವೆ ಆದರೆ ಕಾನೂನು ಜಾರಿಗೆ ತರುವ ಖಾಕಿ ಪಡೆಯಿಂದಲೆ ಈ ದಂಧೆಯನ್ನ ಪಾಲನೆ ಪೋಷಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ..ಹೌದು ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ವ್ಯಾಪ್ತಿಯಲ್ಲಿ ಪೊಲೀಸ್ ಸ್ಟೇಶನ್ ಕೂಗು ಅಳತೆಯ ದೂರದಲ್ಲೇ ಇದೀಗ ಮಟ್ಕಾ ದಂಧೆ ಜೋರಾಗಿ ನಡೆಯುತ್ತಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಬಿಗ್ ಟಿವಿ ನ್ಯೂಸ್ ಕಲೆ ಹಾಕಿದೆಒಂದು ಕಡೆ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೆಳಗಾವಿಯಲ್ಲಿ ಜನಪ್ರತಿನಿಧಿಗಳು ಸದನ ನಡೆಸುತ್ತಿದ್ದರೆ ಮತ್ತೊಂದು ಕಡೆ ಇದೇ ಅವಕಾಶ ಎಂದು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಮಟ್ಕಾ ದಂಧೆಗೆ ಪರ್ಮಿಷನ್ ನೀಡಿರುವುದು ವಿಪರ್ಯಾಸ ಎನ್ನುವಂತೆ ಆಗಿದೆ.ಕಾಡು ಮದ್ಯದ ಪಟ್ಟಣದ ಬಸ್ ನಿಲ್ದಾಣ, ಪ್ರಮುಖ ಪೊಲೀಸ್ ಠಾಣೆ, ಮಾರುಕಟ್ಟೆ ಪ್ರದೇಶ , ಶಾಲಾ ಕಾಲೇಜು ಗಳ ಅವರಣವೆ ಮಟ್ಕಾ ಅಡ್ಡೆಗಳಾಗಿ ಇರುವುದು ಬಿಗ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಕಂಡುಬಂದಿದೆ, ಈ ಬಗ್ಗೆ ಸದ್ಯದಲ್ಲೇ ಬಿಗ್ ಟಿವಿ ಅಭಿಯಾನ ಕೂಡ ಶುರು ಮಾಡಲಿದೆ..ಕರಾಳ ದಂಧೆ.. ಭಯಾನಕ ಭಾಗ -2.. ನಿಮ್ಮ ಮುಂದೆ ಬಿಚ್ಚಿದಲಿದೆ ನಿಮ್ಮ ಬಿಗ್ ಟಿವಿ ನ್ಯೂಸ್
bigtvnews | Hubli Dharwad News | Kannada News | Karnataka News Hubli News | News In Hubli | Local news

