Breaking News

ಐಶ್ವರ್ಯ ರೈ- ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು..

ಮಾಜಿ ವಿಶ್ವಸುಂದರಿ ನಟಿ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್‌ ಬಚ್ಚನ್‌ ಬಾಲಿವುಡ್‌ನ ಬೆಸ್ಟ್‌ ಜೋಡಿ ಎನಿಸಿಕೊಂಡಿದ್ದರು. ಸುಮಾರು ಹದಿನಾರು ವರ್ಷಗಳ ಕಾಲ ತುಂಬು ಸಂಸಾರ ಮಾಡಿದ್ದ ಈ ದಂಪತಿಯ ಬಗ್ಗೆ ಇತ್ತೀಚಿಗೆ ಕೆಲವು ಗಾಸಿಪ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ಈ ಗಾಳಿ ಸುದ್ದಿಗೆ ಪುಷ್ಟಿಕೊಡುವ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.

ಐಶ್ವರ್ಯ ರೈ- ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರ ಮಧ್ಯೆ ವಿಚ್ಛೇದನವಾಗುತ್ತಿದೆ ಎನ್ನುವ ಸುದ್ದಿ ಕಳೆದ ಕೆಲದಿನಗಳಿಂದ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಈ ಜೋಡಿಗಳ ವಿಚ್ಛೇದನದ ವದಂತಿಗಳ ನಡುವೆಯೇ ಇದೀಗ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಮನೆಯನ್ನು ತೊರೆದಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಕೆಲವು ಮೂಲಗಳ ಮಾಹಿತಿ ಪ್ರಕಾರ, ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಹಲವು ವರ್ಷಗಳಿಂದ ದಾಂಪತ್ಯದಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಮಗಳಿಗಾಗಿ ಇಷ್ಟು ವರ್ಷಗಳ ಕಾಲ ಇಬ್ಬರು ಜೊತೆಗಿದ್ದರು ಎನ್ನಲಾಗಿದೆ. ಇನ್ನು ಇತ್ತೀಚಿಗೆ ಈ ಸಮಸ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ದಂಪತಿ ನಡುವೆ ವಿಚ್ಛೇದನ ಸಂಭವಿಸಿದರೂ ಆಶ್ಚರ್ಯ ಏನಿಲ್ಲ ಎಂದು ವರದಿಯಾಗಿದೆ.

Share News

About BigTv News

Check Also

ಮುಂಬೈ :ಅತ್ಯಾಚಾರ: ಐಪಿಎಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು!

ವೈದ್ಯ ಮತ್ತು ಆ ವ್ಯಕ್ತಿ ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕಕ್ಕೆ ಬಂದಿದ್ದಾರೆ. ಆಗ ಆರೋಪಿಯು ಕೇಂದ್ರ ಲೋಕಸೇವಾ …

Leave a Reply

Your email address will not be published. Required fields are marked *