ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತ ದಾಯಾದಿಗಳು ಎಂಬ ವಾಡಿಕೆ ಮಾತಿಗೆ ಪುಷ್ಟಿ ನೀಡುವಂತೆ ಧಾರವಾಡದಲ್ಲಿ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಅಷ್ಟಕ್ಕೂ ಇದರ ಡಿಟೈಲ್ಸ್ ನೋಡುವುದಾದ್ರೇ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ಮಧ್ಯೆ ಮಾರಾಮಾರಿ ನಡೆದಿದ್ದು, ಸಹೋದರನ ಹೊಡೆತಕ್ಕೆ ತಮ್ಮ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದಿದೆ. ಫಕ್ಕೀರಪ್ಪ ಕಮ್ಮಾರ ಹಾಗೂ ಅಶೋಕ ಕಮ್ಮಾರ ಎಂಬುವ ಸಹೋದರರ ಮಧ್ಯೆ ಈ ಮಾರಾಮಾರಿ ನಡೆದಿದೆ. ಮನೆ ಹಾಗೂ ಹೊಲದ ವಿಚಾರಕ್ಕೆ ಸಂಬಂಧಿಸಿದಂತೆ ಈ
ಮಾರಮಾರಿ ನಡೆದಿದೆ. ಕಲ್ಲು, ಬಡಿಗೆಗಳಿಂದ ಈ ಎರಡೂ ಕುಟುಂಬದ ಸದಸ್ಯರು ಬಡಿದಾಡಿಕೊಂಡಿದ್ದು, ಅಶೋಕ ಕಮ್ಮಾರ (45) ಹಾಗೂ ಫಕ್ಕೀರಪ್ಪ ಕಮ್ಮಾರ (50) ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದರು. ಈ ವೇಳೆ ಅಶೋಕಗೆ ಹೆಚ್ಚಿನ ಗಾಯಗೊಂಡಿದ್ದರಿಂದ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅಶೋಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಫಕ್ಕೀರಪ್ಪನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜೊತೆಗೆ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

