Breaking News

ಇಬ್ಬರು ಹೆಣ್ಣುಮಕ್ಕಳ ಜೊತೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ: ತಾಯಿ ಸಾವು; ಪುತ್ರಿಯರು ಬಚಾವ್!

ಲಕ್ಷ್ಮೀ ತನ್ನ ಇಬ್ಬರು ಪುತ್ರಿಯರಾದ 7 ವರ್ಷದ ತನು ಹಾಗೂ ಗೌತಮಿಗೆ ವಿಷಬೆರಸಿದ ಜ್ಯೂಸ್ ನೀಡಿ ಕುಡಿಯುವಂತೆ ಹೇಳಿದ್ದಳು. ಆದರೆ ಮಗಳು ತನು ಜ್ಯೂಸ್ ಬೇಡ ಎಂದು ಕುಡಿದಿರಲಿಲ್ಲ. ವಿಷಬೆರೆಸಿದ್ದ ಜ್ಯೂಸ್ ಕುಡಿದಿದ್ದ ತಾಯಿ ಲಕ್ಷ್ಮೀ ಒದ್ದಾಡುತ್ತಿರುವುದನ್ನು ಕಂಡು ತನು ಮನೆಯಿಂದ ಹೊರಬಂದು ರಸ್ತೆಯಲ್ಲಿ ಹೋಗುತ್ತಿದವರಿಗೆ ತನ್ನ ತಾಯಿಯನ್ನು ರಕ್ಷಿಸುವಂತೆ ಕಣ್ಣೀರಿಟ್ಟಿದ್ದಾಳೆ. ಸ್ಥಳಕ್ಕಾಗಮಿಸಿದ ಸ್ಥಳೀಯರು ಲಕ್ಷ್ಮೀಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.ಆತ್ಮಹತ್ಯೆಗೂ ಮುನ್ನ ಲಕ್ಷ್ಮೀ ತನ್ನ ಪತಿಗೆ ಇದು ತನ್ನ ಕೊನೆಯ ಕರೆ ಎಂದು ಸಂದೇಶ ರವಾನಿಸಿದ್ದಾಳೆ. ಬಳಿಕ ತನ್ನ ಅಕ್ಕನಿಗೂ ಕರೆ ಮಾಡಿ ಹಿರಿಯ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಳು. ಬಳಿಕ ವಿಷಬೆರೆಸಿ ಜೂಸ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *