ಹುಬ್ಬಳ್ಳಿ ಹಣಕಾಸಿನ ವಿಚಾರಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರೂರು ಗ್ರಾಮದ ಜಗದೀಶ ಢಾಬಾದಲ್ಲಿ ತಡರಾತ್ರಿ ನಡೆದಿದೆ.ವರೂರು ಗ್ರಾಮದ ಸುಧೀರ ಹುಲಗಣ್ಣವರ್ (31) ಕೊಲೆಯಾದ ಯುವಕನಾಗಿದ್ದಾನೆ. ಅದೇ ಗ್ರಾಮದ ಸಾಗರ

ಮಹಾದೇವಪ್ಪ ಗಬ್ಬನ್ನವರ ಹಾಗೂ ಸುಧೀರ ಇಬ್ಬರೂ ಊಟ ಮಾಡುವ ವೇಳೆ ಹಣಕಾಸಿನ ವಿಚಾರಕ್ಕೆ ಜಗಳ ಆರಂಭವಾಗಿದೆ. ನೋಡು ನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿ ಸುಧೀರ್ ಮೇಲೆ ಸಾಗರ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆಗ ಸುಧೀರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆಗ ಸಾಗರ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಸಾಗರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

