Breaking News

ಮೊದಲ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್‌ ವಿಜಯ

ಲಂಡನ್​:ಏಕೈಕ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಬಲಿಷ್ಠ ಇಂಗ್ಲೆಂಡ್​ ತಂಡವನ್ನ ಕೇವಲ 85ರನ್​​ಗಳಿಗೆ ಆಲೌಟ್​ ಮಾಡಲು ಮೂಲಕ ಗೆಲುವಿನ ಕೇಕೆ ಹಾಕುವ ಉತ್ಸಾಹದಲ್ಲಿದ್ದ ಐರ್ಲೆಂಡ್​ ತಂಡಕ್ಕೆ 2ನೇ ಇನ್ನಿಂಗ್ಸ್​​ನಲ್ಲಿ ತಿರುಗೇಟು ನೀಡಿರುವ ಆಂಗ್ಲ ಪಡೆ 143ರನ್​ಗಳ ಗೆಲುವು ದಾಖಲು ಮಾಡಿದೆ.ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ ತಂಡಗಳಿಸಿದ್ದ 85ರನ್​ಗಳಿಗೆ ಪ್ರತ್ಯುತ್ತರವಾಗಿ ಐರ್ಲೆಂಡ್​ 207ರನ್​ಗಳಿಕೆ ಮಾಡಿತ್ತು. ಆದರೆ 2ನೇ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ 303ರನ್​ಗಳಿಕೆ ಮಾಡಿ ಎದುರಾಳಿ ತಂಡದ ಗೆಲುವಿಗಾಗಿ 182 ರನ್​ಗಳ ಗುರಿ ನೀಡಿತ್ತು. ಆದರೆ ಕ್ರಿಸ್ ವೋಕ್ಸ್​ ಮತ್ತು ಸ್ಟುವರ್ಟ್​ ಬ್ರಾಡ್ ಬೌಲಿಂಗ್​ ದಾಳಿಗೆ ತತ್ತರಿಸಿ ಕೇವಲ 38ರನ್​ಗಳಿಗೆ ಸರ್ವಪತನ ಕಂಡು 143 ರನ್​ಗಳಿಂದ ಸೋಲು ಕಂಡಿದೆ.ಮೊದಲ ಇನ್ನಿಂಗ್ಸ್​ನಲ್ಲಿ 207 ರನ್​ಗಳಿಸುವ ಮೂಲಕ 122 ರನ್​ಗಳ ಮುನ್ನಡೆ ಪಡೆದಿತ್ತು. ಇದಕ್ಕೆ ಉತ್ತರವಾಗಿ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ ತಂಡ 303 ರನ್​ಗಳಿಗೆ ಆಲ್​ಔಟ್​ ಆಗಿತ್ತು.182 ರನ್​ಗಳ ಗುರಿ ಬೆನ್ನತ್ತಿದ್ದ ಐರ್ಲೆಂಡ್​ ತಂಡದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ರು. ಇಂಗ್ಲೆಂಡ್ ತಂಡದ ಪರ ಉತ್ತಮ ಬೌಲಿಂಗ್​ ದಾಳಿ ನಡೆಸಿದ ಕ್ರಿಸ್ ವೋಕ್ಸ್ 6 ಮತ್ತು ಸ್ಟುವರ್ಟ್​ ಬ್ರಾಡ್ 4 ವಿಕೆಟ್​ ಪಡೆದು ಇಂಗ್ಲೆಂಡ್ ಗೆಲುವಿಗೆ ಕಾರಣರಾದ್ರು.ಇಂಗ್ಲೆಂಡ್​ ತಂಡದ ಪರ ಉತ್ತಮ ಬ್ಯಾಟಿಂಗ್​ ನಡೆಸಿದ್ದ ಜ್ಯಾಕ್ ಲೀಚ್ ಮ್ಯಾನ್ ಆಫ್​ ದಿ ಮ್ಯಾಚ್ ಅವರ್ಡ್ ಪಡೆದುಕೊಂಡ್ರು.

Share News

About admin

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *