Breaking News
Featured Video Play Icon

ಲೋಕಸಭಾ ಚುನಾವಣೆ: ಚೆಕ್ ಪೋಸ್ಟ್ ಪರಿಶೀಲನೆ ವೇಳೆ 1.23 ಕೋಟಿ ಮೌಲ್ಯದ ವಸ್ತುಗಳ ವಶಕ್ಕೆ..!

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್’ಗಳಲ್ಲಿ ಪರಿಶೀಲನೆ ವೇಳೆ ನಗದು ಸೇರಿದಂತೆ 1.23 ಕೋಟಿ ರೂ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜೆ.ಆರ್.ಜೆ ಹೇಳಿದರು.ನಗರದಲ್ಲಿಂದು ಪಾಲಿಕೆ ಆವರಣದ ಸಭಾ ಭವನದಲ್ಲಿ ಪತ್ರಕರ್ತರಿಗೆ ಮಾಧ್ಯಮ ಕಾರ್ಯಗಾರ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 38.50 ಲಕ್ಷ ಮೌಲ್ಯದ ಬಂಗಾರ, 18.71 ಲಕ್ಷ ರೂ ಮೌಲ್ಯದ ನಗದು, 28.29 ಲಕ್ಷ ಮೌಲ್ಯದ ಮದ್ಯ, 2000 ಸೀರೆ, 1342 ಜೀನ್ಸ್ ಫ್ಯಾಂಟ್’ಗಳನ್ನು ವಶಪಡಿಸಿಕೊಳ್ಳಾಗಿದೆ. ಈ ಸಂಬಂಧ ಪೋಲಿಸ ಇಲಾಖೆಯಿಂದ 48, ಎಸ್ ಎಸ್ ಟಿದಿಂದ 10, ವಿಎಸ್ಟಿ 1 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.ಸಾರ್ವಜನಿಕರು ಯಾವುದೇ ಹಣವನ್ನು ಸಾಗಿಸುವ ವೇಳೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ದಾಖಲೆಗಳಿಲ್ಲದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗುವುದು, ಬಳಿಕ ದಾಖಲೆ ಸಲ್ಲಿಸಿದಾಗ ಹಣವನ್ನು ವಾಪಾಸ್ ನೀಡಲಾಗುವುದು, ಈ ರೀತಿ 4.50 ಲಕ್ಷ ರೂ ಹಣವನ್ನು ವಾಪಾಸ್ ಮರಳಿಸಿದ್ದೇವೆ ಎಂದು ತಿಳಿಸಿದರು.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *