Breaking News
Featured Video Play Icon

ಜನರ ಕಣ್ಣೀರಿಗೆ ಧ್ವನಿಯಾಗುವ ವಿನೋದ ಅಸೂಟಿ ಗೆಲ್ಲಿಸಿ: ಡಿ ಕೆ ಶಿವಕುಮಾರ..

ಸವಣೂರ: ಇಪ್ಪತ್ತು ವರ್ಷಗಳಿಂದ ಸಂಸದರಾಗಿರುವ ಜೋಶಿಯವರು ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಇಂತಹ ಮತ ಹಾಕದೇ ನಮ್ಮ ಪಕ್ಷದ ಯುವನಾಯಕ, ಜನರ ಕಣ್ಣೀರಿಗೆ ಧ್ವನಿಯಾಗುವ

ವಿನೋದ ಅಸೂಟಿಯವರಿಗೆ ಬಹುದೊಡ್ಡ ಅಂತರದಿಂದ ಗೆಲ್ಲಿಸಿ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮನವಿ ಮಾಡಿದರು. ಸವಣೂರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರವಾಡ ಲೋಕಸಭಾ ವ್ಯಾಪ್ತಿಯ

ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಬೃಹತ್ ರೋಡ್ ಶೋ ನಲ್ಲಿ ಅವರು ಮಾತನಾಡಿದರು. ವಿನಯ್ ಕುಲಕರ್ಣಿ ಅವರು ಮಾತನಾಡಿ, ಪ್ರಲ್ಹಾದ ಜೋಶಿ ಸುಟ್ಟಿರುವ ರೊಟ್ಟಿಯಂತಾಗಿದ್ದಾರೆ, ರೊಟ್ಟಿಯನ್ನು ತುಂಬಾ ಸಮಯ

ಒಂದೇ ಕಡೇ ಬಿಟ್ಟರೆ ಸುಟ್ಟು ಹೋಗುತ್ತೆ ಆದ್ದರಿಂದ ತಿರುವಿ ಹಾಕಿ ನಮ್ಮ ಸರಳ ಸಜ್ಜನ ಅಭ್ಯರ್ಥಿ ವಿನೋದ ಅಸೂಟಿಯವರನ್ನು ಗೆಲ್ಲಿಸಿ ದೆಹಲಿಗೆ ಕಳಿಸಿ ಎಂದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಶ್ರೀ ವಿನೋದ ಅಸೂಟಿ, ಶಾಸಕರುಗಳಾದ ಶ್ರೀನಿವಾಸ್ ಮಾನೆ, ಸೋಮಣ್ಣ ಬೇವಿನಮರದ, ನಿಕೇತರಾಜ್ ಮೌರ್ಯ, ಸಾಧುಕೋಕಿಲ, ಶ್ರೀ ಯಾಸೀರ ಅಹ್ಮದ ಖಾನ ಪಠಾಣ, ಬಿ ಸಿ ಪಾಟೀಲ್, ಎಮ್ ಜೆ ಮುಲ್ಲಾ, ಪುರಸಭೆ ಸದಸ್ಯರು ಮತ್ತು ಹಿರಿಯರು, ಕಾಂಗ್ರೆಸ್ ಪಕ್ಷದ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *