Breaking News

ರಥದ ಚಕ್ರಕ್ಕೆ ಸಿಲುಕಿ ಓರ್ವ ಸಾವು: ಇನ್ನಿಬ್ಬರು ಪ್ರಾಣಾಪಾಯದಿಂದ ಪಾರು…!

ಹುಬ್ಬಳ್ಳಿ; ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿ, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ನಡೆದಿದೆ.ಬಸವ ಜಯಂತಿ ಅಂಗವಾಗಿ ನಡೆದ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರಕ್ಕೆ ಮಹಮ್ಮದಸಾಬ ಹಸನಸಾಬ ಮೊಕಾಶಿ (60) ಎಂಬಾತನ ಸಿಲುಕಿ ಮೃತಪಟ್ಟಿದ್ದಾನೆ..ಬಸವೇಶ್ವರ ಜಯಂತಿ ಅಂಗವಾಗಿಮಜ್ಜಿಗುಡ್ಡದಲ್ಲಿ ರಥೋತ್ಸವ ನಡೆಯುತ್ತದೆ. ಈ

ವೇಳೆ ಭಕ್ತಾಧಿಗಳ ಸಂಖ್ಯೆ ಅಪಾರವಾಗಿತ್ತು. ಅತ್ತ ರಥವೂ ಸಾಗುತ್ತಿತ್ತು. ಇತ್ತ ಜನಜಂಗುಳಿಯೂ ವಿಪರೀತವಾಗಿ ತಳ್ಳಾಟ, ನೂಕಾಟ ಎಲ್ಲವೂ ನಡೆದಿತ್ತು. ಈ ತಳ್ಳಾಟದಿಂದಾಗಿ ಮಹಮ್ಮದಸಾಬ ಆಯತಪ್ಪಿ ರಥದ ಚಕ್ರಕ್ಕೆ ಸಿಲುಕಿದ. ಇದರಿಂದ ಸ್ಥಳದಲ್ಲೇ ಮೃತಪಟ್ಟ. ಇದರಿಂದಾಗಿ, ರಥೋತ್ಸವ ಅರ್ಧಕ್ಕೆ ನಿಂತಿತು. ಮೃತದೇಹವನ್ನು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಘಟನರಯಲ್ಲಿ ಇನ್ನಿಬ್ಬರು ಪ್ರಾಣಾಪಾಯದಿ‌ಂದ‌ ಪಾರಾಗಿದ್ದಾರೆ‌‌ ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದ ಘಟನೆ ನಡೆದಿದ್ದು, ಸ್ಥಳಕ್ಕೆ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲಕೃಷ್ಣ ಬ್ಯಾಕೋಡ ಭೇಟಿ, ಪರಿಶೀಲನೆ ನಡೆಸಿದರು.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *