ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಸಿಬಿಐಗೆ ಕೊಡುವುದಿಲ್ಲ. ನಮ್ಮ ರಾಜ್ಯದಲ್ಲಿಯೇ ಸಮರ್ಥವಾಗಿ ತನಿಖೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೇಹಾ ಕೊಲೆಯ ಬಗ್ಗೆ ನನಗೆ ಬಂದಿದ್ದ ಮಾಹಿತಿ ಪ್ರೀತಿ ವಿಷಯಕ್ಕೆ ಎಂಬುವಂತ ಮಾಹಿತಿಯಿಂದ ಮಾತನಾಡಿದ್ದೇ. ಆದರೆ ಅದನ್ನೇ ನಾವು ಮುಂದುವರೆಸಿಕೊಂಡು ಹೋಗಿಲ್ಲ ಎಂದರು.ಪೊಲೀಸರನ್ನು ಅಂಜಲಿ ಕುಟುಂಬ ಕೊಲೆ ಪೂರ್ವದಲ್ಲಿ ಭೇಟಿಯ ಬಗ್ಗೆ ಮಾತನಾಡಿದ್ದೇನೆ. ಪೊಲೀಸರ ನಿರ್ಲಕ್ಷ್ಯ ಎಂಬುವುದು ಗಮನಕ್ಕೆ ಬಂದಿದ್ದು, ಡಿಸಿಪಿ, ಪಿಐ, ಮಹಿಳಾ ಸಿಬ್ಬಂದಿ ಅಮಾನತು ಮಾಡಿದ್ದೇವೆ. ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಇಲಾಖಾವಾರು ತನಿಖೆ ಆಗುತ್ತದೆ ಎಂದು ಅವರು ಹೇಳಿದರು.ಬಿಜೆಪಿ ಕಾಲದಲ್ಲಿ ಆಗಲಿ ಬೇರೆ ಯಾರದೇ ಕಾಲದಲ್ಲಿ ಆಗಲಿ ಕೊಲೆ ಆಗಿರುವುದು ನಿಜ. ಅಂಕಿ ಅಂಶಗಳ ಪ್ರಕಾರ ಬಿಜೆಪಿ ಕಾಲದಲ್ಲೂ ಮರ್ಡರ್ ಆಗಿದೆ. ಅವರ ಕಾಲದಲ್ಲಿಯೂ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಬಾರಿ ಗಣಪತಿ ಉತ್ಸವ, ಹೋಳಿ, ರಂಜಾನ ನಡೆದಿವೆ ಆದರೆ ಕ್ರಿಮಿನಲ್ ವೈಲೆನ್ಸ್ ಆಗಿಲ್ಲ. ಚುನಾವಣೆ ಕೂಡ ಯಶಸ್ವಿಯಾಗಿದೆ, ಎರಡು ಹಂತದಲ್ಲಿ ಕೂಡ ಯಶಸ್ವಿ ಚುನಾವಣೆಯಾಗಿದೆ. ಅವರ ಕಾಲದಲ್ಲಿ 466 ಮರ್ಡರ್ ಆಗಿದೆ. ನಮ್ಮ ಕಾಲದಲ್ಲಿ 430 ಆಗಿದೆ ಎಂದು ಅಂಕಿ ಅಂಶಗಳ ಮಾಹಿತಿ ನೀಡಿದರು. ಈಗಾಗಲೇ ಪೊಲೀಸ್ ಇಲಾಖೆ ಕೊಲೆ ಪ್ರಕರಣದಲ್ಲಿ 98% ಆರೋಪಿಗಳನ್ನು ಹಿಡಿದಿದ್ದಾರೆ. ಯಶಸ್ವಿಯಾಗಿ ಹಾಗೂ ಸಾಕಷ್ಟು ಸಿರೀಯಸ್ ಆಗಿ ಕೆಲಸ ಮಾಡಿದ್ದಾರೆ ಎಂದರು.ನೇಹಾ ಕೊಲೆ ಕೇಸನ್ನು ಸಿಬಿಐಗೆ ಕೊಡಲ್ಲ. ನಮ್ಮಲ್ಲಿಯೇ ಸಮರ್ಥರಿದ್ದಾರೆ. ಈ ನಿಟ್ಟಿನಲ್ಲಿ ಸಿಬಿಐಗೆ ಕೊಡಲ್ಲ. ಪೊಲೀಸರ ಇಲಾಖೆ ಸಮರ್ಥರಿಲ್ಲ ಎಂದು ಸಿಐಡಿಗೆ ಕೊಟ್ಟಿಲ್ಲ. ಕೆಲವೊಮ್ಮೆ ಸಿಐಡಿಗೆ ಕೊಡುತ್ತೇವೆ ಎಂದು ಅವರು ಹೇಳಿದರು.ಪೊಲೀಸ್ ಇಲಾಖೆಯಲ್ಲಿ ಯಾವುದೇ ಜಾತಿ ಧರ್ಮದ ಪ್ರಶ್ನೆಯೇ ಬರುವುದಿಲ್ಲ. ಒಂದು ವೇಳೆ ಹಾಗೇನಾದರೂ ಗಮನಕ್ಕೆ ಬಂದರೇ ಸೂಕ್ತ ಕ್ರಮಗಳನ್ನು ಜರುಗಿಸುತ್ತೇವೆ. ಈ ಕೊಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ಎಲ್ಲರನ್ನೂ ಅಮಾನತು ಮಾಡುತ್ತೇವೆ ಎಂದ ಅವರು, ರಾಜ್ಯದಲ್ಲಿ ಡ್ರಗ್ಸ್ ನಿಲ್ಲಿಸಲು ವಾರ್ ಮಾಡಲು ಸದನದಲ್ಲಿಯೇ ಹೇಳಿದ್ದೇನೆ. 100-200 ಕೋಟಿ ಮೊತ್ತದ ಡ್ರಗ್ಸ್ ನಾನೇ ಸುಟ್ಟು ಹಾಕಿಸಿದ್ದೇನೆ ಎಂದು ಅವರು ಡ್ರಗ್ಸ್ ಬಂದ್ ಮಾಡುವ ಬಗ್ಗೆ ಮಾಹಿತಿ ನೀಡಿದರು.
Check Also
ಮನೆಯಲ್ಲೇ ಪೆನ್ನಿ ಡ್ರಗ್ಸ್ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!
ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …
bigtvnews | Hubli Dharwad News | Kannada News | Karnataka News Hubli News | News In Hubli | Local news

