Breaking News

ಮೊನ್ನೆ ಹುಬ್ಬಳ್ಳಿಯಲ್ಲಿ ಇಂದು ಧಾರವಾಡದಲ್ಲಿ ಕೊಲೆ…

ಇಲ್ಲಿಯ ಚಿತೆ ಆರುವ ಮುನ್ನ ಮತ್ತೊಂದು ಕೊಲೆ!!!!

ಧಾರವಾಡದ ಗೋವನಕೊಪ್ಪ ಕ್ರಾಸ್ ಬಳಿ ಮತ್ತೊಂದು ಕೊಲೆ!!!

ಸ್ಲಗ್ ಧಾರವಾಡದಲ್ಲಿ ಯುವಕನ ಬರ್ಬರ ಹತ್ಯೆ… ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ.. ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರೊಯಾಗಿರುವ ಘಟನೆ ಧಾರವಾಡದ ಹೊರವಲಯದ ಹೆಬ್ಬಳ್ಳಿ ರಸ್ತೆಯ ಗೋವನಕೊಪ್ಪ ಕ್ರಾಸ್ ಬಳಿ ನಡೆದಿದೆ.‌ವೈ- ಮೂವತ್ತು ವರ್ಷದ ಹರೀಶ ಶಿಂಧೆ ಎಂಬ ಯುವಕನೇ ಹತ್ಯೆಯಾದ ಯುವಕನೆಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ರಸ್ತೆಯ ಗೋವನಕೊಪ್ಪ ಕ್ರಾಸ್ ಬಳಿಯ ಖುಲ್ಲಾ ಜಾಗದಲ್ಲಿ ಈ ಯುವಕನ ಹತ್ಯೆ ನಡೆದಿದೆ. ಕಲ್ಲಿನಿಂದ ಜಜ್ಜಿ ಹಾಗೂ ಹರಿತವಾದ ಆಯುಧದದಿಂದ ಯುವಕನ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹತ್ಯೆ ಮಾಡಿದವರು ಯಾರು? ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.‌

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *