ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಕಹಾನಿ..!
ಹುಬ್ಬಳ್ಳಿ: ಹೊಸೂರಿನಲ್ಲಿರುವ ಕಿರಾಣಿ ಶಾಪ್ ನಲ್ಲಿ ಗಾಂಜಾ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಿಂದ ಮೇಲೆ ಟ್ವೀಸ್ಟ್ ಸಿಗುತ್ತಿದ್ದು ಇದೀಗ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಂಗಡಿಯ ಮಾಲಕ ಚಂದ್ರಶೇಖರ್ ಫೋನ್ ನಲ್ಲಿ ಪ್ರಭುವನು ಕೊಲ್ಲೋದಾಗಿ ಆವಾಜ್ ಹಾಕಿದ ಹಿನ್ನೆಲೆ ಸಿಟ್ಟು ತೀರಿಸಿಕೊಳ್ಳುವ ಸಲುವಾಗಿ ಅಂಗಡಿಯಲ್ಲಿ ಗಾಂಜಾ ಇಟ್ಟು ಆತನ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಎಂಬ ಮಾಹಿತಿ ಲಭ್ಯವಾಗಿದೆ.ಇದಕ್ಕೆ ಪೂರಕ ಎಂಬಂತೆ ಇಬ್ಬರ ನಡುವೆ ನಡೆದ ಆಡಿಯೋ ಸಂಭಾಷಣೆ ಮಾಧ್ಯಮಕ್ಕೆ ಲಭ್ಯವಾಗಿದೆ.ಕಳೆದ ಒಂದು ತಿಂಗಳ ಹಿಂದೆ ಹೊಸೂರಿನಲ್ಲಿನ ಅಣ್ಣಿಗೇರಿ ಜನರಲ್ ಸ್ಟೋರ್ ನಲ್ಲಿನ ಗಾಂಜಾ ಇದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ದಾಳಿಯನ್ನು ಮಾಡಿ ಅರ್ಧ ಕೆಜಿ ಗಾಂಜಾ ಸೀಜ್ ಮಾಡಿದ್ದರು .ಆಗ ಅಂಗಡಿಯವರು ಪೊಲೀಸರೇ ಗಾಂಜಾ ಇಟ್ಟು ಫೇಕ್ ರೆಡ್ ಮಾಡಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳಿ ಪೊಲೀಸರ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡಿದ್ದರು .ಆದ್ರೆ ಅಲ್ಲಿನ ಸಿಸಿ ಕ್ಯಾಮರಗಳನ್ನು ನೋಡಿದಾಗ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿದ್ದ ಯುವಕನೊಬ್ಬ ಅಂಗಡಿಯಲ್ಲಿ ಸಾಮಾನು ಖರೀದಿ ಮಾಡುವ ನೆಪದಲ್ಲಿ ಅಂಗಡಿಯೊಳಗೆ ಗಾಂಜಾ ಇಟ್ಟು ಪರಾರಿಯಾಗಿದ್ದ.ಆಗ ಪೊಲೀಸರು ಸಿಸಿ ಕ್ಯಾಮರಾ ದ್ರಶ್ಯ ಆಧರಿಸಿ ಗಾಂಜಾ ಇಟ್ಟ ಆರೋಪಿಯನ್ನು ಬಂಧನ ಮಾಡಿ ನ್ಯಾಯಾಂಗ್ ಬಂಧನಕ್ಕೆ ಒಪ್ಪಿಸಿದ್ದರು.ಇನ್ನು ಅಂಗಡಿಯೊಳಗೆ ಗಾಂಜಾ ಇಡಲು ಪ್ರಭು ಹೇಳಿದ್ದ ಎಂಬ ಮಾಹಿತಿಯನ್ನು ಅಂಗಡಿಯಲ್ಲಿ ಗಾಂಜಾ ಇಟ್ಟಿದ್ದ ಯುವಕ ಪೊಲೀಸರ ಮುಂದೆ ಹೇಳಿದ್ದ.ಪ್ರಭು ಕೂಡಾ ಪ್ರಕರಣ ಆದ ನಂತರ ತಲೆ ಮರೆಸಿಕೊಂಡಿದ್ದ ಆದ್ರೆ ಶನಿವಾರ ಕೋರ್ಟ್’ಗೆ ಶರಣಾಗತಿ ಆಗಿದ್ದಾನೆ.ಹೊಸೂರಿನಲ್ಲಿನ ಕಿರಾಣಿ ಅಂಗಡಿ ಮಾಲಕ ಚಂದ್ರಶೇಖರ್ ಹಾಗೂ ಪ್ರಭುವಿನ ನಡುವೆ ಹಳೇ ವೈಶ್ಯಮ್ಯ ಇತ್ತು.ಇದು ಅತಿರೇಕಕ್ಕೆ ಹೋಗಿ ಚಂದ್ರಶೇಖರ್ ಪ್ರಭುವಿಗೆ ಕೊಲ್ಲೋದಾಗಿ ಫೋನ್ ನಲ್ಲಿ ಧಮ್ಕಿ ಹಾಕಿದ್ದ ಹೀಗಾಗಿ ಪ್ರಭು ಆತನ ಅಂಗಡಿಯಲ್ಲಿ ಗಾಂಜಾ ಇಟ್ಟು ಚಂದ್ರಶೇಖರ್ ನನ್ನು ಸಿಲುಕಿಸಲು ಮುಂದಾಗಿದ್ದ ಅಂತಾ ಇದೀಗ ತಿಳಿದು ಬಂದಿದೆ.ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಆಡಿಯೋ ವಿಚಾರ ಹಾಗೂ ಗಾಂಜಾ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮದ ಜೊತೆಗೆ ಮುಂದೆ ನಡೆಯಬಹುದಾದ ಅಪರಾಧ ಕೃತ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

