ರಕ್ಷಾ ಬಂಧನದ ದಿನವೇ ಸೋದರಿಯೊಬ್ಬಳು ತನ್ನ ಇಬ್ಬರು ಸೋದರರಿಗೆ ರಾಖಿ ಕಟ್ಟಿ ಬಳಿಕ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ.
ವರದಿಯ ಪ್ರಕಾರ ಈ ಹುಡುಗಿ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಪ್ರೀತಿಸುವಂತೆ ಯುವಕನೋರ್ವ ನಿರಂತರ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಈಕೆ ತನ್ನ ಜೀವನವನ್ನು ಕೊನೆಗೊಳಿಸಲು ಯತ್ನಿಸಿದ್ದಳು. ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಈಕೆಯನ್ನು ಪೋಷಕರು ಹಾಗೂ ಸಂಬಂಧಿಗಳು ಮೆಹಬೂಬಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಕೆ ಸಾವನ್ನಪ್ಪಿದ್ದಾಳೆ. ಸಾಯುವುದಕ್ಕೂ ಮೊದಲು ಆಕೆ ತನ್ನಿಬ್ಬರು ಸೋದರರಿಗೆ ಕೊನೆಯದಾಗಿ ರಾಕಿ ಕಟ್ಟಿ ಕೊನೆಯುಸಿರೆಳೆದಿದ್ದಾಳೆ. ಸದ್ಯ ಈ ಕ್ಷಣದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

