ವಿವಿಧ ಜಿಲ್ಲೆಗಳಲ್ಲಿನ ಅಧಿಕಾರಿಗಳ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ದಾಖಲೆ ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಕೆಎನ್‌ಎನ್‌ಎಲ್ ಮುಖ್ಯ ಇಂಜಿನಿಯರ್ ಅಶೋಕ ವಸಂದ್ ಮನೆ ಮೇಲೆ ದಾಳಿ. ಸ್ಥಳ: ರಾಮತೀರ್ಥ ನಗರ, ಬೆಳಗಾವಿ ಮತ್ತು ಧಾರವಾಡ ಕಚೇರಿ.ಹುದ್ದೆ: ಧಾರವಾಡದ ಕೆಎನ್‌ಎನ್‌ಎಲ್ ಮುಖ್ಯ ಇಂಜಿನಿಯರ್. ಶಿವಮೊಗ್ಗದ ಡಾ. ಎಸ್. ಪ್ರದೀಪ್ ಮನೆ ಮೇಲೆ ದಾಳಿ ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಭ್ರಷ್ಟಾಚಾರದ ಅನುಮಾನದ ಮೇಲೆ ಡಾ. ಪ್ರದೀಪ್ ಅವರ ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

