Breaking News

ಮಗನನ್ನು ಕೊಲ್ಲಲ್ಲು ಬಂದವರನ್ನು ಓಡಿಸಿದ ತಾಯಿ

ಮುಂಬೈ: ಹಾಡಹಗಲಿನಲ್ಲಿಯೇ ಮಗನನ್ನು ಕೊಚ್ಚಿ ಕೊಲೆ ಮಾಡಲು ಬಂದ ಕೊಲೆಗಾರನನ್ನು ತಾಯಿಯೊಬ್ಬರು ಓಡಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

ಕೊಲ್ಲಾಪುರದ ಜೈಸಿಂಗ್​ಪುರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು ತಾಯಿಯ ಧೈರ್ಯವನ್ನು ಮೆಚ್ಚಿಕೊಂಡು ಕೊಂಡಾಡುತ್ತಿದ್ದಾರೆ. ವಿಡಿಯೋದಲ್ಲಿ ರಸ್ತೆಬದಿಯಲ್ಲಿ ಬೈಕ್​ ನಿಲ್ಲಿಸಿ ಅದರ ಮೇಲೆ ಕುಳಿತುಕೊಂಡು ಮಗ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದಾನೆ. ಅದೇ ಸಮಯದಲ್ಲಿ ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬರುತ್ತಾರೆ. ಅದರಲ್ಲೊಬ್ಬ ತಾಯಿಯೊಂದಿಗೆ ಮಾತನಾಡುತ್ತಾ ಕುಳಿತಿದ್ದ ವ್ಯಕ್ತಿಯ ಮೇಲೆ ಕತ್ತಿ ಬೀಸುತ್ತಾನೆ. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಆ ವ್ಯಕ್ತಿಯ ತಾಯಿ, ಕೆಳಗಿದ್ದ ಕಲ್ಲನ್ನು ಎತ್ತಿಕೊಂಡು ಕತ್ತಿ ಬೀಸಿದವನಿಗೆ ಹೊಡೆಯಲು ಮುಂದಾಗುತ್ತಾರೆ. ಬಳಿಕ ಜತೆಗೆ ಮಗನು ತಾಯಿಯ ಜತೆ ಸೇರಿ ಕಲ್ಲನ್ನಿಂದ ಹೊಡೆಯುತ್ತಾನೆ. ಆ ಮೂವರು ಅಲ್ಲಿಂದ ಪರಾರಿಯಾಗುವುದನ್ನುಕಾಣಬಹುದಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *