Breaking News

ಟೇಬಲ್ ಟೆನಿಸ್ ಗೆ ವಿದಾಯ ಹೇಳಿದ ಅರ್ಚನಾ ಕಾಮತ್

ಮುಂಬೈ: ಇತ್ತೀಚೆಗಷ್ಟೇ ಮುಗಿದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಟೇಬಲ್ ಟೆನ್ನಿಸ್ ತಂಡವು ಕ್ವಾರ್ಟರ್ ಫೈನಲ್ ತಲುಪಿ ಇತಿಹಾಸ ಬರೆದಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ಭಾರತ ಟೇಬಲ್ ಟೆನ್ನಿಸ್ ತಂಡವು ಜರ್ಮನಿ ವಿರುದ್ಧ ಸೋಲು ಕಂಡಿತ್ತು.

ಈ ತಂಡದಲ್ಲಿದ್ದ ಕನ್ನಡತಿ ಅರ್ಚನಾ ಕಾಮತ್ ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ. 2028 ರ ಲಾಸ್ ಏಂಜಲೀಸ್ ಗೇಮ್ಸ್ ನಲ್ಲಿ ಪದಕದ ಯಾವುದೇ ಗ್ಯಾರಂಟಿ ಇಲ್ಲದಿರುವುದರಿಂದ, ಯುವ ಆಟಗಾರ್ತಿ ವೃತ್ತಿಪರವಾಗಿ ಟೇಬಲ್ ಟೆನಿಸ್ ಅನ್ನು ತ್ಯಜಿಸಲು ಮತ್ತು ಬದಲಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಪ್ಯಾರಿಸ್ ಗೇಮ್ಸ್‌ನಿಂದ ಮನೆಗೆ ಹಿಂದಿರುಗಿದ ನಂತರ, 24 ವರ್ಷ ವಯಸ್ಸಿನ ಕಾಮತ್, ಮುಂದಿನ ಪಂದ್ಯಗಳಲ್ಲಿ ಪದಕ ಗಳಿಸುವ ಸಾಧ್ಯತೆಗಳ ಬಗ್ಗೆ ತನ್ನ ತರಬೇತುದಾರ ಅದ್ಭುಲ್ ಗಾರ್ಗ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. “ಪದಕದ ಅವಕಾಶ ಕಷ್ಟ ಎಂದು ನಾನು ಅವಳಿಗೆ ಹೇಳಿದ್ದೆ. ಅದು ಅತ್ಯಂತ ಕಠಿಣ ಪರಿಶ್ರಮ ಬೇಡುವ ಕೆಲಸ. ಅವಳು ವಿಶ್ವ ರ್ಯಾಂಕಿಂಗ್ ನಲ್ಲಿ 100ಕ್ಕಿಂತ ಹೊರಗಿದ್ದಾಳೆ. ಆದರೆ ಇತ್ತೀಚಿನ ತಿಂಗಳಲ್ಲಿ ಅವಳು ತುಂಬಾ ಸುಧಾರಣೆ ಕಂಡಿದ್ದಾಳೆ. ಆದರೆ ಅವಳು ಅದಾಗಲೇ ನಿರ್ಧಾರ ಮಾಡಿದ್ದಳು. ಒಮ್ಮೆ ನಿರ್ಧಾರ ಮಾಡಿದವರನ್ನು ಮತ್ತೆ ಬದಲಾವಣೆ ಮಾಡುವುದು ಕಷ್ಟದ ಕೆಲಸ” ಎಂದು ಕೋಚ್ ಹೇಳಿಕೊಂಡಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *