Breaking News

admin

ಜಿಲ್ಲಾಧಿಕಾರಿಯಿಂದ ಆರೋಗ್ಯ ಇಲಾಖೆಗೆ ಆಂಬ್ಯುಲೆನ್ಸ್ ಹಸ್ತಾಂತರ

ಹುಬ್ಬಳ್ಳಿ : ಫ್ಲೀಟ್‌ ಗಾರ್ಡ್ ಫಿಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಯಡಿಯಲ್ಲಿ ಮಹೀಂದ್ರಾ ಸುಪ್ರೊ ಝೆಡ್ ಎಕ್ಸ್ ಆಂಬ್ಯಲೇನ್ಸ್ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮೂಲಕ ಹುಬ್ಬಳ್ಳಿ ತಾಲೂಕು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಆಂಬ್ಯುಲೆನ್ಸ್ ಗೆ ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಚಾಲನೆ …

Read More »

ವಿಪಕ್ಷ ಉಪನಾಯಕರಾಗಿ ಯು.ಟಿ ಖಾದರ್ ಆಯ್ಕೆ

ಬೆಂಗಳೂರು : ಹಿರಿಯ ಕಾಂಗ್ರೆಸ್ ಶಾಸಕ ಯು.ಟಿ ಖಾದರ್  ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ. ಸಿದ್ದರಾಮಯ್ಯ ಆಪ್ತ ಯು.ಟಿ ಖಾದರ್‌ಗೆ ಸ್ಥಾನ ನೀಡಲಾಗಿದೆ.ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕ ಸ್ಥಾನ ಮುಸ್ಲಿಂ ಸಮುದಾಯದ ನಾಯಕನಿಗೆ ತಪ್ಪಿದ ಹಿನ್ನೆಲೆ ವಿಧಾನ ಸಭೆಯಲ್ಲಿ ವಿಪಕ್ಷ ಉಪನಾಯಕನ ಸ್ಥಾನ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್  ಹೈಕಮಾಂಡ್ ನೀಡಿದೆ. ಯು.ಟಿ ಖಾದರ್‌ಗೆ ಸ್ಥಾನ ಕಲ್ಪಿಸುವ ಮೂಲಕ ಸಿದ್ದರಾಮಯ್ಯ, ಹಾಗೂ ಅಲ್ಪಸಂಖ್ಯಾತರನ್ನ ಎಐಸಿಸಿ  ಸಮಾಧಾನ ಪಡಿಸಿದೆ ಎಂದು ಹೇಳಲಾಗಿದೆ.‌ ಎಐಸಿಸಿ …

Read More »

ರಸ್ತೆ ಗುಂಡಿಗೆ ಬಿದ್ದು ಮಹಿಳೆ ಸಾವು

ಬೆಂಗಳೂರು:  ರಸ್ತೆ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶರ್ಮಿಳಾ (38) ಮೃತಪಟ್ಟ ಮಹಿಳೆ. ಮಾಗಡಿ ಮುಖ್ಯರಸ್ತೆಯಲ್ಲಿ ರಸ್ತೆ ಗುಂಡಿ   ಹೋದ ಮಹಿಳೆ ಆಯತಪ್ಪಿ ರೋಡ್​ಗೆ ಬಿದ್ದಿದ್ದಾರೆ. ಪ್ರಕರಣ ಸಂಬಂಧ ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೊಲೆರೋ ಚಾಲಕ ಮಾದೇಶ್​ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Read More »

ರಿಕ್ಷಾ ಮತ್ತು ಜೀಪ್ ನಡುವೆ ಅಪಘಾತ: ಐವರಿಗೆ ಗಾಯ

ಪುತ್ತೂರು : ಆಟೋ ರಿಕ್ಷಾ ಮತ್ತು ಜೀಪ್ ನಡುವೆ ನಡೆದ ಅಪಘಾತದಲ್ಲಿ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಕೆಯ್ಯೂರು ಗ್ರಾಮದ ಪೊಯ್ಯೋಳೆ ಎಂಬಲ್ಲಿ ನಡೆದಿದೆ. ಗಾಯಾಳುಗಳನ್ನು ರಿಕ್ಷಾದಲ್ಲಿದ್ದ ಪೊಯ್ಯೋಳೆ ನಿವಾಸಿಗಳಾದ ಪ್ರವೀಣ್‍, ಗುರು, ಹರ್ಷಿತ್, ಲೀಲಾ ಹಾಗೂ ಲಕ್ಷ್ಮೀ ಎಂದು ಗುರುತಿಸಲಾಗಿದ್ದು, ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರವೀಣ್‍ ಮತ್ತು ಗುರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಆಟೋ ರಿಕ್ಷಾ …

Read More »

ಶಿವಮೊಗ್ಗ ಜಿಲ್ಲೆಯಲ್ಲಿ 609 ಕೊರೊನಾ ಸೊಂಕು ಪತ್ತೆ

ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ 609 ಮಂದಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು, 499 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಶನಿವಾರ ಶಿವಮೊಗ್ಗ ತಾಲ್ಲೂಕಿನ 192 ಮಂದಿಗೆ ಸೋಂಕು ದೃಢಪಟ್ಟಿದ್ದು, ಭದ್ರಾವತಿಯ 102, ತೀರ್ಥಹಳ್ಳಿಯ 34, ಶಿಕಾರಿಪುರದ 72, ಸಾಗರದ 78, ಹೊಸನಗರದ 75, ಸೊರಬದ 48 ಹಾಗೂ ಹೊರ ಜಿಲ್ಲೆಯಿಂದ ಬಂದ 8 ಮಂದಿಗೆ ಸೋಂಕು ತಗುಲಿದೆ.

Read More »

ಮೊಬೈಲ್ ಗೋಸ್ಕರ್ ಪ್ರಾಣವನ್ನೇ ಒತ್ತೆ ಇಟ್ಟ ಬೂಪ

ಚಿಕ್ಕಬಳ್ಳಾಪುರ : ಜೇಬಿನಲ್ಲಿದ್ದ ಫೋನ್ ಆಕಸ್ಮಿಕವಾಗಿ ಬಾವಿಯ ಒಳಗೆ ಬಿದ್ದಿದ್ದು, ಇದರಿಂದ ಗಾಬರಿಗೊಂಡ ವ್ಯಕ್ತಿ ಆಳದ ಬಾವಿಯೊಳಗೆ ಇಳಿದು ಮೊಬೈಲ್ ಮರಳಿ ತರುವ ಹರಸಾಹಸ ಮಾಡಿ ಸಾವನ್ನಪ್ಪಿರುವ  ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ. ಅನಿಲ್ ಕುಮಾರ್ (35) ಸಾವನ್ನಪ್ಪಿದ ಯುವಕ ಎನ್ನಲಾಗಿದೆ. ಆಕಸ್ಮಿಕವಾಗಿ ಮೊಬೈಲ್ ಬಾವಿಯೊಳಗೆ ಬೀಳುತ್ತಿದ್ದಂತೆ, ಈ ವ್ಯಕ್ತಿ ಹಗ್ಗ ಕಟ್ಟಿಕೊಂಡು ಬಾವಿಯೊಳಗೆ ಇಳಿದಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ …

Read More »

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಆರೋಪ ಮಾಡಿದ ಆರ್. ಅಶೋಕ್

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಅವರ ಮುಸುಕಿನ ಗುದ್ದಾಟ ಈಗ ಬಯಲಾಗಿದೆ ಎಂದು ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಮುಸುಕಿನ ಗುದ್ದಾಟ ಈಗ ಬಯಲಾಗಿದೆ. ಸಿದ್ದರಾಮಯ್ಯಗಿಂತ ಮೇಲಿದ್ದೇನೆ ಎಂದು ತೋರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Read More »

ಕಾಂಗ್ರೆಸ್ ಪಕ್ಷ ಕುರಿತು ಲೇವಡಿ ಮಾಡಿದ ಗೋವಿಂದ ಕಾರಜೋಳ

ಬಾಗಲಕೋಟೆ : ಪ್ರವಾಹ, ಕೊರೊನಾದಂತಹ ಸಂಕಷ್ಟಗಳಿಲ್ಲದಿದ್ದರೂ ಕಾಂಗ್ರೆಸ್ ನಿಂದ ಅಭಿವೃದ್ಧಿ ಕಾರ್ಯ ಮಾಡಲು ಆಗಿರಲಿಲ್ಲ. ಹೀಗಾಗಿಯೇ ಜನರು ಆ ಪಕ್ಷವನ್ನು ಹೀನಾಯವಾಗಿ ಸೋಲಿಸಿದರು ಎಂದು ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡುವುದಿಲ್ಲ ಎಂದೇ ಜನರು ಕಾಂಗ್ರೆಸ್ ನ್ನು ತಿರಸ್ಕರಿಸಿದ್ದಾರೆ ಎಂಬುವುದನ್ನು ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲದಂತಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

Read More »

ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾರಾಯಣ ಗೌಡ ನಿಧನ

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾರಾಯಣ ಗೌಡ ನಿನ್ನೆ ರಾತ್ರಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕೇಂದ್ರ ವಿಭಾಗ ಡಿಸಿಪಿ ಎಂ.ಎನ್ ಅನುಚೇತ್ ಅವರ ತಂದೆ ನಾರಾಯಣ ಗೌಡ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Read More »

ಮರಣಹೊಂದಿದ ವ್ಯಕ್ತಿಗೆ ಕೋವಿಡ್ ಲಸಿಕೆ ಸರ್ಟಿಫಿಕೇಟ್ : ಆರೋಗ್ಯ ಇಲಾಖೆ ಎಡವಟ್ಟು

ತುಮಕೂರು:  ತಾಲೂಕಿನ ಮೆಳೆಕೋಟೆ ನಿವಾಸಿ ಬಸಪ್ಪ (80) ಎಂಬುವವರು6 ತಿಂಗಳ ಹಿಂದೆಯೇ ಮರಣ ಹೊಂದಿದ್ದರು. ಈ ವ್ಯಕ್ತಿಗೆ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದ ಸರ್ಟಿಫಿಕೇಟ್ ನೀಡಿ ತುಮಕೂರು‌ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ. 2021ರ ಏಪ್ರಿಲ್ 9ರಂದು ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದರು.ಈ ನಡುವೆ ಜುಲೈ 16ರಂದು ಅವರು ಮೃತಪಟ್ಟಿದ್ದರು. ಆದರೆ, ನಿನ್ನೆ (ಜನವರಿ 29) ಬಸಪ್ಪ ಎರಡನೇ ಡೋಸ್ ತೆಗೆದುಕೊಂಡಿರುವ ಬಗ್ಗೆ ಮೆಸೇಜ್​ ಬಂದಿದೆ. ಇದನ್ನು …

Read More »