ಕುಂದಾಪುರ: ಮೊಬೈಲ್‌ಗೆ ಸಿಸ್ಟಂ ಅಪ್‌ಡೇಟ್ ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹3.41 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾಕ್ಸನ್ ಡಿಸೋಜ (36) ಅವರು ಕೇರಳದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ದಂಡ ಪಾವತಿಸಲು ನ.11ರಂದು ಮೊಬೈಲ್‌ನಲ್ಲಿ ಕೇರಳ ಇ-ಚಲನ್ ಆಪ್ ಹುಡುಕಿದ್ದರು. ಮರುದಿನ ಮೊಬೈಲ್‌ನಲ್ಲಿ ಸಿಸ್ಟಂ ಅಪ್‌ಡೇಟ್ ಸಂದೇಶ ಕಾಣಿಸಿಕೊಂಡಿತ್ತು. ಬಳಿಕ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿರುವುದನ್ನು ಗಮನಿಸಿ ಪರಿಶೀಲಿಸಿದಾಗ, ಎರಡು ಖಾತೆಗಳಿಂದ ಒಟ್ಟು ₹3,41,042.18 ಹಣವನ್ನು ಸೈಬರ್ ವಂಚಕರು ಬೇರೆ ಖಾತೆಗಳಿಗೆ ವರ್ಗಾಯಿಸಿರುವುದು ಗೊತ್ತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
