Breaking News

ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಕೊಲೆ: ಮೃತದೇಹ ಸುಟ್ಟು ನದಿಗೆ ಎಸೆದ ಆರೋಪ; ನಾಲ್ವರ ಬಂಧನ

ಬಳ್ಳಾರಿ: ಹಣಕಾಸಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಮೂಳೆ ಹಾಗೂ ಬೂದಿಯನ್ನು ತುಂಗಭದ್ರಾ ನದಿಗೆ ಎಸೆದ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದವರು ತೆಕ್ಕಲಕೋಟೆಯ ಹನುಮಂತಪ್ಪ (37). ಅ.27ರಿಂದ ಹನುಮಂತಪ್ಪ ನಾಪತ್ತೆಯಾಗಿರುವ ಬಗ್ಗೆ ಪತ್ನಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಹಣಕಾಸಿನ ವಿಚಾರವಾಗಿ ಸ್ನೇಹಿತರೇ ಕೊಲೆ ಮಾಡಿರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಮೃತದೇಹವನ್ನು ಸುಟ್ಟು ಅವಶೇಷಗಳನ್ನು ನದಿಗೆ ಎಸೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಪೇಂದ್ರ, ಶಶಿಕುಮಾರ, ಮಲ್ಲಿಕಾರ್ಜುನ ಹಾಗೂ ಗಂಗಾಧರ ಎಂಬ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತ್ತ ಮೃತದೇಹದ ಅವಶೇಷಗಳನ್ನು ಪತ್ತೆಹಚ್ಚಿ ಕುಟುಂಬಕ್ಕೆ ಒಪ್ಪಿಸುವಂತೆ ಒತ್ತಾಯಿಸಿ ಪತ್ನಿ ಹಾಗೂ ಮಕ್ಕಳು ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.

Share News

About BigTv News

Check Also

ಏಳು ಶವಗಳನ್ನು ಸಾಗಿಸಲು ಪ್ರೆಸ್ ಬೋರ್ಡ್ ಹಾಕಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಇಂದುಶೇಖರ್: ಸ್ಫೋಟಕ ಸತ್ಯ ಬಯಲು

ಬೆಂಗಳೂರು: ಏಳು ಶವಗಳ ವಿಲೇವಾರಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಇಂದುಶೇಖರ್ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪತ್ರಕರ್ತರ ಸೋಗು ಹಾಕಿಕೊಂಡಿರುವುದು ತನಿಖೆಯಲ್ಲಿ …

Leave a Reply

Your email address will not be published. Required fields are marked *