ತುಮಕೂರು: ಪತ್ನಿ ಜೊತೆಗಿನ ಜಗಳದ ಕೋಪಕ್ಕೆ ತಂದೆಯೇ ಮಗನನ್ನು ಹಾರೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕುಣಿಗಲ್ ತಾಲೂಕಿನ ಚೌಡನಾಯಕಪಾಳ್ಯದಲ್ಲಿ ನಡೆದಿದೆ. ನಂಜಪ್ಪ ಎಂಬಾತ ಮಗ ಸುನೀಲ್‌ನನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಜೊತೆ ಜಗಳವಾಡಿ ಆಕೆಯನ್ನು ಮನೆಯಿಂದ ಹೊರಹಾಕಿದ್ದ ನಂಜಪ್ಪ, ಬೆಳಿಗ್ಗೆ ಮಗ ಬಾಗಿಲು ತೆರೆಯುವಂತೆ ಕೇಳಿದಾಗ ಕೋಪಗೊಂಡು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮಗನ ಶವದೊಂದಿಗೆ ಮನೆಯೊಳಗೆ ಕುಳಿತು ಬಾಗಿಲು ತೆರೆಯದೆ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಕೊನೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿ ಕಣ್ಣೀರಿಟ್ಟಿದ್ದು, ಕುಣಿಗಲ್ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

