ಬೆಂಗಳೂರು: ಏಳು ಶವಗಳ ವಿಲೇವಾರಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಇಂದುಶೇಖರ್ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪತ್ರಕರ್ತರ ಸೋಗು ಹಾಕಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಕಾರಿನ ಮೇಲೆ ‘PRESS’ ಚಿಹ್ನೆ ಹಾಕಿಸಿಕೊಂಡು, ಪತ್ರಕರ್ತರ ಪ್ರವಾಸ ಎಂಬ ಬ್ಯಾನರ್ ಅಳವಡಿಸಿ ನಂಬರ್ ಪ್ಲೇಟ್ ಮುಚ್ಚುತ್ತಿದ್ದ. ಅನುಮಾನ ಬಂದಾಗ ಪತ್ರಿಕೆ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸಿ ತಪ್ಪಿಸಿಕೊಳ್ಳುತ್ತಿದ್ದ. ಏಳು ಮಂದಿಯನ್ನು ಕೊಂದು ಶವಗಳನ್ನು ವಿವಿಧೆಡೆ ಎಸೆದು ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಯತ್ನಿಸಿದ್ದರು. ಮಂಗಳೂರು, ಸಕಲೇಶಪುರ ಸೇರಿದಂತೆ ಹಲವು ಕಡೆ ಶವ ಸಾಗಿಸಿರುವ ಶಂಕೆಯಿದ್ದು, ಪೊಲೀಸರ ವಿಚಾರಣೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
