Breaking News

admin

ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯಗೆ ಜ್ವರ

ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಪಾದಯಾತ್ರೆಯಲ್ಲಿ ತೊಡಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ಜ್ವರದಿಂದ ಬಳಲುತ್ತಿದ್ದು, ಪಾದಯಾತ್ರೆ ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ  ಆರಂಭಿಸಿದ್ದು, ಇಂದು(ಭಾನುವಾರ) ಸಂಗಮ ಕ್ಷೇತ್ರದಿಂದ ಪಾದಯಾತ್ರೆಗೆ ಚಾಲನೆ ದೊರೆತಿದೆ.

Read More »

ರಾಜ್ಯದಲ್ಲಿ ಇಂದು 12 ಸಾವಿರ ಕೋವಿಡ್ ಪ್ರಕರಣ ಪತ್ತೆ

ಬೆಂಗಳೂರು : ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ.  ಭಾನುವಾರ 12 ಸಾವಿರ ಪ್ರಕರಣಗಳು ದೃಢ ಪಟ್ಟಿವೆ. ಶನಿವಾರ 8,906 ಕೇಸ್ ದೃಢಪಟ್ಟಿದ್ದವು. ಬೆಂಗಳೂರಿನಲ್ಲಿ ಇಂದು 9,020 ಹೊಸ ಪ್ರಕರಣಗಳು ಕಂಡು ಬಂದಿದ್ದು, ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 04 ಸಾವು ವರದಿಯಾಗಿದೆ.

Read More »

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಚಿಕ್ಕಬಳ್ಳಾಪುರ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದ್ಯಾವನಗೂಲ್ ಗ್ರಾಮದಲ್ಲಿ ನಡೆದಿದೆ. ಕೊಳೆತ ಸ್ಥಿತಿಯಲ್ಲಿ ಅಪರಿಚಿತನ ಶವ ಪತ್ತೆಯಾಗಿದೆ. ದ್ಯಾವನಗೂಲ್ ಗ್ರಾಮದ ಹಳ್ಳದ ಬದಿಯಲ್ಲಿ ಶವ ಪತ್ತೆ ಆಗಿದೆ. ಬೈಕ್ನ ಲ್ಲಿ ತೆರಳುತ್ತಿದ್ದ ಯುವರಾಜ (35) ಎಂಬವರ ಮೇಲೆ ಹಲ್ಲೆಗೆ ಯತ್ನವಾಗಿದೆ. ದುಷ್ಕರ್ಮಿಗಳು ಮಚ್ಚಿನಲ್ಲಿ ಹಿಂದಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ, ಯುವರಾಜ ತಪ್ಪಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ …

Read More »

ಕೊರೊನಾ ಹೆಚ್ಚಳ ಸಭೆ ನಡಸಿದ ಸಚಿವರು!

Featured Video Play Icon

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹು-ಧಾ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆಸಲಾಗುತ್ತಿದೆ. ಸಭೆಯಲ್ಲಿ ಶಾಸಕ ಜಗದೀಶ್ ಶೆಟ್ಟರ್, ಅರವಿಂದ್ ಬೆಲ್ಲದ, ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗಿಯಾಗಿ ಕೋವಿಡ್ ಮೂರನೇ ಅಲೆ ತಡೆಯ ಹಿನ್ನೆಲೆ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದರು. ಅಲ್ಲದೇ ಇದೇ ವೇಳೆ ಕೋವಿಡ್ ತಡೆಗಟ್ಟಲು …

Read More »

ಮೇಕೆದಾಟು ಯೋಜನೆಗೆ ಪಾದಯಾತ್ರೆಗೆ ಭಾಗಿ ಆಗಲ್ಲ : ಶಿವರಾಜ್‌ಕುಮಾರ್

ಬೆಂಗಳೂರು : ಮೇಕೆದಾಟು  ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್  ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯಲ್ಲಿ ಸಿನಿಮಾ ರಂಗದ ಹ್ಯಾಟ್ರಿಕ್ ಹಿರೋ ನಟ ಶಿವರಾಜ್‌ಕುಮಾರ್ ಅವರು ಭಾಗಿ ಯಾಗುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಇದೀಗ ಶಿವಣ್ಣ ಮೇಕೆದಾಟು ಪಾದಯಾತ್ರೆಗೆ ಹೋಗಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಕಾರಣ ಆಪ್ತರು, ಅಭಿಮಾನಿಗಳು ನೀಡಿದ ಸಲಹೆಯ ಮೇರೆಗೆ ಶಿವಣ್ಣ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಎಂದು  ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

Read More »

ಡಿ. 26 ‘ವೀರ್ ಬಾಲ್ ದಿವಸ್’ ಘೋಷಣೆ

ನವದೆಹಲಿ: ಸಾಹಿಬ್ ಜಾಡೆಗಳ ಧೈರ್ಯ ಮತ್ತು ನ್ಯಾಯಕ್ಕಾಗಿ ಅವರ ಅನ್ವೇಷಣೆಗೆ ಸೂಕ್ತ ಗೌರವ ಅನುಗುಣವಾಗಿ ಡಿಸೆಂಬರ್ 26 ರಂದು ವೀರ ಬಾಲ್ ದಿನ ಎಂದು ಗುರುತಿಸಲಾಗುವುದುಎಂದು ಪ್ರಧಾನಿ ನರೇಂದ್ರ ಮೋದಿ  ಘೋಷಿಸಿದರು. ಈ ಕುರಿತಂತೆ ಸರಣಿ ಟ್ವಿಟ್ ಮಾಡಿ ತಿಳಿಸಿರುವಂತ ಪ್ರಧಾನಿ ನರೇಂದ್ರ ಮೋದಿಯವರು, ಇಂದು ಗುರು ಗೋವಿಂದಸಿಂಗ್ ಜೀ ಅವರ ಪ್ರಕಾಶ್ ಪುರಬ್ ನ ಶುಭ ಸಂದರ್ಭದಲ್ಲಿ, ಈ ವರ್ಷ ಡಿಸೆಂಬರ್ 26 ರಿಂದ ‘ವೀರ್ ಬಾಲ್ ದಿವಸ್’ …

Read More »

ಇಂದು ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ: ದಿನೇ ದಿನೇ ಹೆಚ್ಚಾಗುತ್ತಿರುವಂತ ಕೊರೋನಾ, ಓಮಿಕ್ರಾನ್ ಕೇಸ್ ಗಳಿಂದಾಗಿ 3ನೇ ಅಲೆ ಆರಂಭವಾಗಿದೆ ಎನ್ನಲಾಗುತ್ತಿದ್ದ ಹಿನ್ನಲೆ ಇಂದು ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಿಗದಿಪಡಿಸಲಾಗಿದೆ. ದೇಶದಲ್ಲಿ ಕೊರೋನಾ ಹಾಗೂ ಓಮಿಕ್ರಾನ್ ಆರ್ಭಟ ಹೆಚ್ಚಾಗಿದೆ.

Read More »

ಗುರುವಿನಿಂದ ಬೆತ್ತದ ಏಟು : ಕಣ್ಣು ಕಳೆದುಕೊಂಡು ಬಾಲಕ

ವಿಜಯನಗರ : ಒಂದನೇ ತರಗತಿಯ ಬಾಲಕನ ಕಣ್ಣಿಗೆ ಬೆತ್ತ ತಗುಲಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು ಘಟನೆ  ಕಾನಹೊಸಹಳ್ಳಿ ಸಮೀಪದ ಚೌಡಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.  ಈ ಸಂಬಂಧ ಮೂವರು ಶಿಕ್ಷಕರ ನಿರ್ಲಕ್ಷ್ಯದ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಎಂ.ಬಿ.ಪ್ರಜ್ವಲ್ ಕಣ್ಣು ಕಳೆದುಕೊಂಡ ಬಾಲಕ. ‘ಡಿ.31 ರಂದು ಶಾಲೆಗೆ ಹೋದ ಈ ಬಾಲಕನ ಕಣ್ಣಲ್ಲಿ ರಕ್ತ ಸುರಿಯುತ್ತಿದೆ ಎಂಬ ವಿಷಯ ತಿಳಿದು …

Read More »

ವೀಕೆಂಡ್ ಕರ್ಫ್ಯೂ ಗೆ ಕೋಲಾರ ಜನರಿಂದ ಉತ್ತಮ ಬೆಂಬಲ

ಕೋಲಾರ:ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ. ಇದೀಗ ವೀಕೆಂಡ್ ಕರ್ಫ್ಯೂ ಎರಡನೇ ದಿನ ಕ್ಕೆ ಕಾಲಿಟ್ಟುದ್ದು ನಗರದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ . ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಮನೆಗಳಲ್ಲೇ ಉಳಿದು ಕರ್ಫ್ಯೂಗೆ ಬೆಂಬಲ ಸೂಚಿಸಿದರು. ಹಾಲು, ತರಕಾರಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ ಉಳಿದ …

Read More »

ವೀಕೆಂಡ್ ಕರ್ಫ್ಯೂ ಗೆ ಬೆಳಗಾವಿ ಜನರಿಂದ ಉತ್ತಮ ಬೆಂಬಲ

ಬೆಳಗಾವಿ:ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ. ಇದೀಗ ವೀಕೆಂಡ್ ಕರ್ಫ್ಯೂ ಎರಡನೇ ದಿನ ಕ್ಕೆ ಕಾಲಿಟ್ಟುದ್ದು ನಗರದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೆಲವರಷ್ಟೆ ಕಂಡುಬಂದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೇವೆ ಎಂದಿನಂತೆ ಆರಂಭಗೊಂಡಿದೆ. ನಗರದ ಮುಖ್ಯ ರಸ್ತೆಗಳು, ವೃತ್ತಗಳು ಜನರಿಲ್ಲದೆ ಭಣಗುಡುತ್ತಿವೆ. ಅನಗತ್ಯವಾಗಿ ರಸ್ತೆಗಳಿದವರನ್ನು …

Read More »