Breaking News

ಚಿಕ್ಕಬಳ್ಳಾಪುರ

ಕರ್ನಾಟಕ ಲೋಕಾಯುಕ್ತ ಬಲೆಗೆ ‘ಬಿ’ ರಿಪೋರ್ಟ್ ಆಮಿಷ: ಪಿಎಸ್‌ಐ, ಎಎಸ್‌ಐ ಅರೆಸ್ಟ್!

ಸಂಬಳ ಇದ್ದರೂ ಲಂಚದ ಆಸೆ…? ಇಬ್ಬರು ಪೊಲೀಸರು ಬಂಧನ… ಅಯ್ಯೋ ದುರಂತ! ಸಂಬಳ ಪಡೆದು ಲಂಚ ಸ್ವೀಕಾರ – ಇಬ್ಬರು ಪೊಲೀಸರ.. ಚಿಕ್ಕಬಳ್ಳಾಪುರ: ಪ್ರಕರಣವೊಂದನ್ನು ‘ಬಿ-ರಿಪೋರ್ಟ್’ ಸಲ್ಲಿಸಿ ಕೈಬಿಡುವ ಆಮಿಷಕ್ಕೆ ₹1 ಲಕ್ಷ ಲಂಚ ಬೇಡಿಕೆಯಿಟ್ಟಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ… ನಗರದ ಕನ್ನಡ ಭವನದ ಬಳಿ ಶನಿವಾರ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶಪ್ಪ ₹70 ಸಾವಿರ ಮೊತ್ತವನ್ನು ಸ್ವೀಕರಿಸುವ …

Read More »

ಜಮೀನಿಗೆ ನೀರು ಬಿಡುವ ವಿಚಾರಕ್ಕೆ ಗಲಾಟೆ, ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನು ಹತ್ಯೆಗೈದ ತಂದೆ, ಮಗ!

ಜಮೀನಿಗೆ ನೀರು ಬಿಡುವ ವಿಚಾರವಾಗಿ ಗಲಾಟೆ ನಡೆದಿದೆ ಈ ವೇಳೆ ಗಲಾಟೆಯಲ್ಲಿ ಅಪ್ಪ-ಮಗ ಸೇರಿ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಗಟಗೆರೆ ಗ್ರಾಮದ ವಡ್ಡರ ಬಂಡೆಯಲ್ಲಿ ಗುರುವಾರ ನಡೆದಿದೆ.ಕೊಲೆ ಆರೋಪಿಗಳಾದ ಮೃತನ ಚಿಕ್ಕಪ್ಪ ಗಂಗಾಧರಪ್ಪ ಹಾಗೂ ಆತನ ಪುತ್ರ ಸೋಮೇಶ್​ ಎಂಬಾತನನ್ನು ಬಂಧಿಸಲಾಗಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆ ಪಿಎಸ್‌ಐ ರಮೇಶ್ ಗುಗ್ಗರಿ ಹಾಗೂ ಪಿಎಸ್‌ಐ ಲಲಿತಮ್ಮ ಘಟನೆ ನಡೆದ ಸ್ಥಳಕ್ಕೆ …

Read More »

ಬೈಕ್ ಮೇಲೆ ಕಂಟೇನರ್​ ಬಿದ್ದು ತಂದೆ-ಮಗಳು ಸ್ಥಳದಲ್ಲೇ ಸಾವು!!

ಚಿಕ್ಕಬಳ್ಳಾಪುರ ತಾಲೂಕಿ ಲಿಂಗಶೆಟ್ಟಪುರ ಗೇಟ್ ಬಳಿಯ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಬೈಕ್ ಬರುತ್ತಿತ್ತು. ಬೈಕ್​ ಪಕ್ಕದಲ್ಲಿ ಕಂಟೇನರ್ ಸಹ ಬರುತ್ತಿತ್ತು. ಆದರೆ, ಲಿಂಗಶೆಟ್ಟಪುರ ಗೇಟ್ ಬಳಿ ಈಶಾ ಪೌಂಡೇಷನ್ ಕಡೆಯಿಂದ ಬಂದ ಕಾರೊಂದು ರಭಸವಾಗಿ ಹೆದ್ದಾರಿಗೆ ಬಂದಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಂಟೇನರ್ ಚಾಲಕ ಸಡನ್​ ಆಗಿ ಬ್ರೇಕ್ ತುಳಿದು, ಕಂಟೇನರ್ ಅನ್ನು ಎಡಕ್ಕೆ ಎಳೆದಿದ್ದಾರೆ. ಕಂಟೇನರ್ ಪಕ್ಕದಲ್ಲೇ ಚಲಿಸುತ್ತಿದ್ದ ಬೈಕ್ ಸವಾರರ …

Read More »

ಚಿಕ್ಕಬಳ್ಳಾಪುರ :ಪೆಟ್ರೋಲ್ ಬಂಕ್ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!!

ಯಶವಂತ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರ ನಿವಾಸಿ. ಪೆಟ್ರೋಲ್ ಬಂಕ್ ಕಚೇರಿಯಲ್ಲಿಯೇ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪೆಟ್ರೋಲ್ ಬಂಕ್ ಮಾಲೀಕ ವರುಣ್ ಕರೆ ಮಾಡಿದರೂ ಯಶವಂತ್ ಫೋನ್ ರಿಸಿವ್ ಮಾಡಿರಲಿಲ್ಲ. ಇದರಿಂದ ಮಾಲೀಕ ಪೆಟ್ರೋಲ್ ಬಂಕ್ ಗೆ ಬಂದು ನೋಡಿದಾಗ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

Read More »

ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು:

ಮುದ್ದೇನಹಳ್ಳಿಯ ಸತ್ಯಸಾಯಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್​​ ಓದುತ್ತಿದ್ದ ಹೇಮಂತ್, ತಾಯಿ ವೈದ್ಯೆಯ ಜೊತೆ ಪ್ರವಾಸ ಮುಗಿಸಿ ಮನೆಗೆ ಬಂದಿದ್ದ. ಆದ್ರೆ, ಅದೇನಾಯ್ತೋ ಏನೋ ಸಂಜೆ ಸ್ನಾನ ಮುಗಿಸಿ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಹೇಮಂತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಹೇಮಂತ್ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Read More »

ಚಿಕ್ಕಬಳ್ಳಾಪುರ : ಟೀಚರ್‌ ಹೊಡೆತಕ್ಕೆ ಕಣ್ಣು ಕಳೆದುಕೊಂಡ ಬಾಲಕ;

ಯಗವಕೋಟೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಟರಾಜ್-ಅಂಜಲಿ ದಂಪತಿಯ 2ನೇ ಮಗ ಯಶ್ವಂತ್ ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಾಲೆಯ ಶಿಕ್ಷಕಿ ಸರಸ್ವತಿ ಎಂಬುವರು ಕೋಲಿನಿಂದ ಬೇರೆ ಬಾಲಕನಿಗೆ ಹೊಡೆಯಲು ಹೋಗಿದ್ದಾರೆ. ಈ ವೇಳೆ ಯಶ್ವಂತ್‌ ಕಣ್ಣಿಗೆ ಕೋಲಿನ ಪೆಟ್ಟು ಬಿದ್ದಿದೆ ಪರಿಣಾಮ ಯಶ್ವಂತ್ ಬಾಲಭಾಗದ ಕಣ್ಣು ಕಳೆದುಕೊಂಡಿದ್ದಾನೆ.ಮೂರು ಬಾರೀ ಆಪರೇಷನ್ ನಡೆದರೂ ಸಹ ಕಣ್ಣು ಕಾಣದೆ ಪರದಾಟ ಅನುಭವಿಸುತ್ತಿದ್ದಾನೆ. ತಮ್ಮ ಮಗ ಕಣ್ಣು ಕಳೆದುಕೊಂಡ ಹಿನ್ನೆಲೆ …

Read More »

ಮಗುವನ್ನು ರಕ್ಷಿಸಲು ಹೋದ ತಾಯಿ ಸೇರಿದಂತೆ ಮೂವರು ನೀರುಪಾಲು.

ಫರಿನಾ ಬೇಗಂ ಅವರ ಮಗು ಆಕಸ್ಮಿಕವಾಗಿ ಜಾರಿ ನೀರಿಗೆ ಬಿದ್ದಿತ್ತು.ಮಗುವನ್ನು ರಕ್ಷಿಸಲೆಂದು ತಾಯಿ ಫರಿನಾ ಬೇಗಂ, ಜಲಾಶಯದ ನೀರಿಗೆ ಇಳಿದಿದ್ದಾರೆ. ಹೀಗೆ ಒಬ್ಬರನ್ನು ರಕ್ಷಿಸಲು ಮತ್ತೊಬ್ಬರು ಹೋಗಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ನೀರಿಗೆ ಬಿದ್ದ ಮಗುವನ್ನು ರಕ್ಷಿಸಲಾಗಿದೆ. ಈ ವೇಳೆ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ನಾಂದಿ ಹಾಡುವ ಲಕ್ಷಣ….

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿ ವ್ಯಾಪ್ತಿಯ ಚೊಕ್ಕಹಳ್ಳಿ ಗ್ರಾಮದ ಸರ್ವೆ ನಂಬರ್.16ರ ಅಳತೆಗೆ ಶಾಸಕ ಪ್ರದೀಪ್‌ ಈಶ್ವರ್ ಅವರು ಸೂಚನೆ ನೀಡಿದ್ದು ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ನಾಂದಿ ಹಾಡುವ ಲಕ್ಷಣಗಳು ಕಾಣಿಸಿಕೊಂಡಿವೆ.ಸರ್ವೇ ನಂಬರ್ 16 ರಲ್ಲಿ 42 ಎಕರೆ ಸರ್ಕಾರಿ ಭೂಮಿ ಇದೆ. ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆ.ವಿ ಕ್ಯಾಂಪಸ್ ಅಸುಪಾಸಿನವರೆಗೂ ಈ ಜಮೀನು ಬರುತ್ತದೆ ಎನ್ನುತ್ತವೆ ಭೂ ದಾಖಲೆಗಳ ಇಲಾಖೆ ಮೂಲಗಳು, ಶಿಕ್ಷಣ …

Read More »

ಸೂಕ್ಷ್ಮ ನೀರಾವರಿಗೆ ಸರಕಾರದಿಂದ ಬಂಪರ್ ಆಫರ್…..

ಚಿಕ್ಕಬಳ್ಳಾಪುರ: ಸೂಕ್ಷ್ಮ ನೀರಾವರಿಗೆ ಸರಕಾರದಿಂದ ಬಂಪರ್ ಆಫರ್ ನೀಡಲಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕಿನ ಅನ್ನದಾತರಿಗೆ ಇದರಿಂದ ಅನುಕೂಲ ಆಗಲಿದೆ. ರಾಜ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಅಟಲ್ ಭೂಜಲ ಯೋಜನೆಯಡಿ ನೀರಿನ ಮಿತ ಬಳಕೆಗೆ ಅನುಕೂಲವಾಗುವಂತೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಈ ಯೋಜನೆಯ ಅಡಿ ಎಲ್ಲ ವರ್ಗದ ರೈತರಿಗೆ ಶೇ.90ರವರೆಗೂ ಸಬ್ಸಿಡಿ ಸಿಗಲಿದೆ.

Read More »

ಹಣವಿಲ್ಲದೆ ಇದ್ದರೆ ಪಾಪರ್ ಆಗಿದ್ದೇವೆ ಎಂದು ಘೋಷಿಸಲಿ: ಆರ್.ಅಶೋಕ್.

ಚಿಕ್ಕಬಳ್ಳಾಪುರ: ಹಿಂದೆ ನಮ್ಮ ಬಿಜೆಪಿ ಸರಕಾರ ಇದ್ದಾಗ ಕೇಂದ್ರ ಸರಕಾರದ ಹಣಕ್ಕಾಗಿ ಕಾಯದೇ ಒಂದೇ ತಿಂಗಳಲ್ಲಿ ಬರ ಪರಿಹಾರಕ್ಕಾಗಿ ಹಣ ಬಿಡುಗಡೆ ಮಾಡಿದ್ದೆವು. ಆದರೆ ಈಗಿನ ಸರಕಾರ ಹಣ ಬಿಡುಗಡೆ ಮಾಡದೇ ಕೇವಲ ಮೊಸಳೆ ಕಣ್ಣೀರು ಹಾಕುತ್ತಿದೆ. ಹಣವಿಲ್ಲದೆ ಇದ್ದರೆ ಪಾಪರ್ ಆಗಿದ್ದೇವೆ ಎಂದು ಘೋಷಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು. ಬರ ವೀಕ್ಷಣೆಗೆ ಆಗಮಿಸಿದ್ದ ಅವರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೇವಲ ಒಂದು ಸಾವಿರ …

Read More »