Breaking News

BigTv News

ದಲಿತ ಮುಖ್ಯಮಂತ್ರಿಗಾಗಿ ನನ್ನ ಜೀವನ ಇರೋವರೆಗೂ ಹೋರಾಟ: ಸಂಸದ ರಮೇಶ ಜಿಗಜಿಣಗಿ

ಇಂಡಿ: ನನ್ನ ಜೀವನ ಇರುವವರೆಗೂ ದಲಿತ ಮುಖ್ಯಮಂತ್ರಿಗಾಗಿ ಒತ್ತಾಯ ಇದ್ದೇ ಇರುತ್ತದೆ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಆದರೂ ಸಂತೋಷ, ದಲಿತರು ಯಾರೇ ಆದರೂ ಸಂತೋಷ. ಎಲ್ಲ ರಾಜ್ಯಗಳಲ್ಲಿ ದಲಿತ ಮುಖ್ಯಮಂತ್ರಿ ಆಗಿ ಹೋಗಿದ್ದಾರೆ. ನಮ್ಮ ರಾಜ್ಯದಲ್ಲಿ ಏಕೆ ದಲಿತ ಮುಖ್ಯಮಂತ್ರಿ ಆಗಬಾರದು, ಬಿಜೆಪಿಯಲ್ಲಿಯೂ ದಲಿತ ಮುಖ್ಯಮಂತ್ರಿ ಮಾಡುವಂತೆ ಕೇಳುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ರಾಜನಾಳ ಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳು ಚುನಾವಣೆಗಾಗಿ …

Read More »

ರಾಜ್ಯದ 31 ಜಿ.ಪಂ ಕಚೇರಿಗಳ ಎದುರು ಇಂದಿನಿಂದ ಗ್ರಾ.ಪಂ ಸಿಬ್ಬಂದಿಗಳ ಮುಷ್ಕರ

ಬೆಂಗಳೂರು: ಅಧಿಕಾರಿಗಳಿಂದ ಸ್ಪಷ್ಟ ಭರವಸೆ ಸಿಗದ ಕಾರಣ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು, ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿದ್ದ ಮುಷ್ಕರವನ್ನು ಶನಿವಾರ ಸ್ಥಗಿತಗೊಳಿಸಿ, ರಾಜ್ಯದ 31 ಜಿಲ್ಲಾ ಪಂಚಾಯಿತಿ ಕಚೇರಿಗಳ ಎದುರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಜಿಟಿಜಿಟಿ ಮಳೆಯ ನಡುವೆಯೂ ಧರಣಿಯಲ್ಲಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರ ಮತ್ತು ಸದಸ್ಯರನ್ನು ಪಂಚಾಯತ್ ರಾಜ್ ಆಯುಕ್ತಾಲಯದ ಉಪ ನಿರ್ದೇಶಕ ಎಂ.ಚಂದ್ರಪ್ಪ …

Read More »

ಬಳ್ಳಾರಿ ಹೊಸಪೇಟೆ ರೈಲ್ವೆ ಅಭಿವೃದ್ಧಿಗೆ 6,200 ಕೋಟಿ ರೂ: ಕೇಂದ್ರ ಸಚಿವ ಸೋಮಣ್ಣ

ಬಳ್ಳಾರಿ: ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬಳ್ಳಾರಿ ಹೊಸಪೇಟೆ ಭಾಗದಲ್ಲಿ ರೈಲ್ವೆ ಅಭಿವೃದ್ಧಿಗಾಗಿ 6,200 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ನೂತನ ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ, ಸುದ್ದಿಗಾರರಿಗೆ ಈ ಮಾಹಿತಿ …

Read More »

ಲೈಂಗಿಕ ಕಿರುಕುಳ ಪ್ರಕರಣ: ರಾಷ್ಟ್ರೀಯ ಪ್ರಶಸ್ತಿ ರದ್ದು

ನವದೆಹಲಿ: ದಕ್ಷಿಣ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಕಳೆದ ಕೆಲವು ದಿನಗಳಿಂದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು ಅವರ ಮೇಲೆ 21 ವರ್ಷದ ಯುವತಿ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದು, ಸೆ.19 ರಂದು ಪೋಕೋ ಕಾಯ್ದೆಯಡಿ ಬಂಧಿಸಲಾಗಿದೆ. ಆದರೆ ಈಗ ಅವರ ರಾಷ್ಟ್ರೀಯ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ. ಜಾನಿ ಮಾಸ್ಟರ್ ಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದ್ದು, ಅಕ್ಟೋಬರ್ 8 ರಂದು ನವದೆಹಲಿಯ 9 ವಿಜ್ಞಾನ ಭವನದಲ್ಲಿ …

Read More »

ಗಾಜಾದ ಮೇಲೆ ಇಸ್ರೇಲ್ ದಾಳಿ : 18 ಕ್ಕೂ ಅಧಿಕ ಮಂದಿ ಸಾವು

ಗಾಜಾದ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ, ಅಲ್ಲಿನ ಮಸೀದಿ ಹಾಗೂ ಶಾಲೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 18 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಗಾಜಾಪಟ್ಟಿಯಲ್ಲಿರುವ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿದ್ದ ಮಸೀದಿ ಹಾಗೂ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. 93 ಜನರು ಗಾಯಗೊಂಡಿದ್ದಾರೆ. ಮೊಟ್ಟಮೊದಲು 2023 ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಕೊಂದಿತ್ತು ಅಷ್ಟೇ ಅಲ್ಲದೆ 250 ಮಂದಿಯನ್ನು …

Read More »

ದಕ್ಷಿಣ ಲೆಬನಾನ್ ನಲ್ಲಿ 400 ಕ್ಕೂ ಹೆಚ್ಚು ಹಿಜ್ಜುಲ್ಲಾ ಕಾರ್ಯಕರ್ತರ ಹತ್ಯೆ

ಇಸ್ರೇಲ್ : ಇಸ್ರೇಲ್ ಮತ್ತು ಹಿಬ್ಬುಲ್ಲಾ ನಡುವಿನ ದ್ವೇಷದ ಬೆಂಕಿ ಹತ್ತಿ ಉರಿಯುತ್ತಲೇ ಇದೆ.ದಕ್ಷಿಣ ಲೆಬನಾನ್ ನಲ್ಲಿ ಈವರೆಗೆ 400 ಕ್ಕೂ ಹೆಚ್ಚು ಹಿಜ್ಜುಲ್ಲಾ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ವೈಮಾನಿಕ ದಾಳಿ ಮತ್ತು ಐಡಿಎಫ್ ಪಡೆಗಳೊಂದಿಗಿನ ಹೋರಾಟದಲ್ಲಿ ಅನೇಕ ಫೀಲ್ಡ್ ಕಮಾಂಡರ್ಗಳು ಸೇರಿದಂತೆ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ತಿಳಿಸಿದೆ.ಫೀಲ್ಡ್ ಕಮಾಂಡರ್ಗಳಲ್ಲಿ ದಕ್ಷಿಣ ಲೆಬನಾನ್ನ ವಿವಿಧ ಪ್ರಾದೇಶಿಕ ಘಟಕಗಳು ಮತ್ತು ಗ್ರಾಮಗಳ ಉಸ್ತುವಾರಿ ಅಧಿಕಾರಿಗಳು ಸೇರಿದ್ದಾರೆ ಎಂದು …

Read More »

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.08ಕ್ಕೆ ಮುಂದೂಡಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ಕೋರ್ಟ್ ಇದೀಗ ಮತ್ತೊಮ್ಮೆ ವಿಚಾರಣೆ ಮುಂದೂಡಿದ್ದು, ಅ.08ಕ್ಕೆ ಮುಂದೂಡಿಕೆ ಮಾಡಿದೆ. ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಕೂಡ ಮುಂದೂಡಿಕೆಯಾಗಿದ್ದು, ವಿಚಾರಣೆಯನ್ನು ಕೋರ್ಟ್ ಅ.08ಕ್ಕೆ ಮುಂದೂಡಿದೆ. ಈ ಹಿಂದೆ ಅಕ್ಟೋಬರ್ 04ಕ್ಕೆ ವಿಚಾರಣೆ ನಡೆಸಿದ್ದ 57ನೇ ಸಿಸಿಹೆಚ್ ನ್ಯಾಯಾಲಯ, ದರ್ಶನ್ ಪರ ವಾದ ಮಂಡಿಸುತ್ತಿರುವ ವಕೀಲ …

Read More »

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ

ನವದೆಹಲಿ : ಶನಿವಾರ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಸಾಧ್ಯತೆಯಿದೆ. ವಿವಿಧ ಸಮೀಕ್ಷೆಗಳು ಗ್ರಾಂಡ್ ಓಲ್ಡ್ ಪಕ್ಷಕ್ಕೆ 55 ರಿಂದ 62 ಸ್ಥಾನಗಳನ್ನು ಊಹಿಸಿವೆ, ಇದು ಬಹುಮತದ 46 ಕ್ಕಿಂತ ಮುಂದಿದೆ. ಅಂದ್ದಾಗೆ, ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126ಎ ನಿಬಂಧನೆಗಳ ಅಡಿಯಲ್ಲಿ ಚುನಾವಣಾ ಆಯೋಗ (ಇಸಿ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಮಾಧ್ಯಮಗಳು, ಮತದಾನ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಅಕ್ಟೋಬರ್ …

Read More »

ಅಯೋಧ್ಯೆಯವನ್ನು ಬೆಳೆಗಿತ್ತೀರುವ ದೀಪೋತ್ಸವ

ಅಯೋಧ್ಯೆ: ಅಯೋಧ್ಯೆಯಲ್ಲಿ ಪ್ರತಿ ವರ್ಷ ನಡೆಯುವ ದೀಪೋತ್ಸವ ಆಚರಣೆಯು ಸ್ಥಳೀಯ ಕುಂಬಾರರ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ. ಒಂದು ಕಾಲದಲ್ಲಿ ಜೀವನ ನಡೆಸಲು ಪರದಾಡುತ್ತಿದ್ದ ಕುಂಬಾರರು ಈಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಕ್ರಮದಿಂದಾಗಿ ಹಬ್ಬದ ಸೀಸನ್‌ನಲ್ಲಿ ತಲಾ ರೂ. 1 ಲಕ್ಷದಷ್ಟು ಗಳಿಸುತ್ತಿದ್ದಾರೆ. ಸಾಂಪ್ರದಾಯಿಕ ಮಣ್ಣಿನ ದೀಪಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ, ಹಿಂದೆ ಹಳ್ಳಿಯಿಂದ ಹೊರಗೆ ಕೆಲಸ ಹುಡುಕುತ್ತಿದ್ದ ಕುಂಬಾರ ಕುಟುಂಬಗಳ ಯುವ ಪೀಳಿಗೆಯು ಈಗ ಕರಕುಶಲತೆಯನ್ನು ಅಳವಡಿಸಿಕೊಳ್ಳುತ್ತಿದ್ದು, ಬೆಳೆಯುತ್ತಿರುವ …

Read More »

ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ:ಯುವಕನಿಗೆ ಕಪಾಳ ಮೋಕ್ಷ

ಮಂಗಳೂರು: ರಾತ್ರಿ ವೇಳೆ ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ಆರೋಪ ಹಿನ್ನಲೆ ಮಹಿಳೆಯರು ಸೇರಿ ಮುಸ್ಲಿಂ ಯುವಕನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಮಂಗಳೂರು ನಗರದ ಕೂಳೂರಿನಲ್ಲಿ ನಡೆದಿದೆ. ಕೂಳೂರಿನ ಜನರಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಡರಾತ್ರಿ ಯುವತಿಗೆ ಕರೆ ಮಾಡಿ ಅಸಭ್ಯ ವರ್ತಿಸುತ್ತಿದ್ದ ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಅಂಗಡಿಗೆ ನುಗ್ಗಿ ಯುವಕನನ್ನು ಪ್ರಶ್ನಿಸಿ ಥಳಿಸಿದ್ದಾರೆ. ಇದೀಗ ಮಹಿಳೆಯರ ಹಲ್ಲೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Read More »