Breaking News

BigTv News

1.50 ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಬೆಸ್ಕಾಂ ಅಧಿಕಾರಿಗಳು;​ ಲೋಕಾಯುಕ್ತ ರೇಡ್​​ ವೇಳೆ ಹೈಡ್ರಾಮಾ

ಬೆಂಗಳೂರು (ಆ.08): ಹೊಸದಾಗಿ ನಿರ್ಮಿಸಲಾದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ₹1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂನ ಎಇಇ ಹಾಗೂ ಜೆಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹುಳಿಮಾವು ಬೆಸ್ಕಾಂ ಕಚೇರಿಯ ಎಇಇ ನಾಗರತ್ನ ಹಾಗೂ ಜೆಇ ಸ್ವಾಮಿ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರ ಅರ್ಷದ್ ಉಲ್ಲಾ ನೀಡಿದ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದ್ದು, …

Read More »

ಕಾಂಗ್ರೆಸ್ ಮುಖಂಡನ ಹತ್ಯೆ: ಹಂತಕನ ಮೇಲೆ ಪೊಲೀಸರಿಂದ ಫೈರಿಂಗ್

ಉಡುಪಿ: ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜ ಕೊಲೆ ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶ ಮೂಲದ ಶೂಟರ್ ರಾಜು ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬೈಂದೂರು ತಾಲೂಕಿನ ಒತ್ತಿನಣೆ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಾಜು ಬಲಗಾಲಿಗೆ ಗುಂಡೇಟು ತಗುಲಿದೆ. ಮೂವರು ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಎಸ್‌ಐ ತೇಜಸ್ವಿ ಮತ್ತು ಪ್ರಸನ್ನ ನೇತೃತ್ವದ ತಂಡ …

Read More »

ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ಮಂಡ್ಯ: ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕುರಿತು ಆಧಾರರಹಿತ ಹಾಗೂ ಅವಹೇಳನಕಾರಿಯಾಗಿ ಮಾತನಾಡಿ ವಿಡಿಯೊ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡ್ಯ ಪೊಲೀಸರು ಹೇಳಿದ್ದಾರೆ. ಬಾಂಗ್ಲಾದ ಪ್ರಜೆಗಳನ್ನು ನಾನು ಬೆಂಗಳೂರಿಗೆ ಕಳುಹಿಸಿರುವೆ, ಪೊಲೀಸರ ಕೈಯಲ್ಲಿ ಅವರನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆಯ ಕುರಿತು ಆಧಾರರಹಿತ ಹಾಗೂ ಅವಹೇಳನಕಾರಿಯಾಗಿ ಮಾತನಾಡಿ ವಿಡಿಯೊ ಪೋಸ್ಟ್ ಹಂಚಿಕೊಂಡಿದ್ದ. ಈ ವ್ಯಕ್ತಿಯ ವಿರುದ್ಧ …

Read More »

ಮಂಗಳೂರು | ವೃದ್ಧೆ ಮೇಲೆ ಹಲ್ಲೆ ನಡೆಸಿ ಆಭರಣ ಕಳವು: ಆರೋಪಿಗಳ ಬಂಧನ

ಮಂಗಳೂರು: ಮನೆಗೆ ನುಗ್ಗಿ 76 ವರ್ಷದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಸುಮಾರು ₹3 ಲಕ್ಷ ಮೌಲ್ಯದ 24 ಗ್ರಾಂ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಕೇವಲ ಮೂರು ದಿನಗಳಲ್ಲಿ ಬಂಧಿಸಿದ್ದಾರೆ. ಆ.3ರಂದು ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ಪ್ರವೇಶಿಸಿದ ಆರೋಪಿಗಳು, ವೃದ್ಧೆಯ ಮೇಲೆ ಹಲ್ಲೆ ನಡೆಸಿ ಅವರು ಧರಿಸಿದ್ದ ಚಿನ್ನದ ಸರ ಹಾಗೂ ಬಳೆಯನ್ನು ಕಿತ್ತು ಪರಾರಿಯಾಗಿದ್ದರು. ಪ್ರಕರಣದ ತನಿಖೆಗೆ ರಚಿಸಿದ್ದ ವಿಶೇಷ ತಂಡ …

Read More »

ಕೊಲೆಗೆ ಸಂಚು ರೂಪಿಸಿದ್ದ ಮೂವರ ಬಂಧನ

ಬೆಂಗಳೂರು: ಭೈರಸಂದ್ರದ ರೌಡಿಶೀಟರ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಗ್ಯಾಂಗ್‌ವೊಂದನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ, ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಆರು ಮಚ್ಚುಗಳು ಹಾಗೂ ಕೃತ್ಯಕ್ಕೆ ಬಳಸಲು ಸಿದ್ಧವಾಗಿದ್ದ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪ್ರಮುಖ ಆರೋಪಿ ಶಿವ ಅಲಿಯಾಸ್ ಕಲ್ಕಿ, ಅಣ್ಣಮ್ಮ ಜಾತ್ರೆಯಲ್ಲಿ ನಡೆದ ಜಗಳದ ದ್ವೇಷದಿಂದ ರೌಡಿಶೀಟರ್ ಲಕ್ಷ್ಮೀ ನಾರಾಯಣನನ್ನು ಕೊಲೆ ಮಾಡಿ ಏರಿಯಾದಲ್ಲಿ ತಾನೇ ದೊಡ್ಡ ರೌಡಿ ಆಗಬೇಕೆಂದು ಸಂಚು ರೂಪಿಸಿದ್ದ ಎನ್ನಲಾಗಿದೆ. ವಿಚಾರಣೆ ವೇಳೆ ತಾನು ದಕ್ಷಿಣ …

Read More »

ಬಳ್ಳಾರಿಯಲ್ಲಿ ಘೋರ ದುರಂತ, ಲಾರಿ ಪಲ್ಟಿಯಾಗಿ ಇಬ್ಬರು ಯುವಕರ ಸಾವು!

ಬಳ್ಳಾರಿ: ಸಂಡೂರು ತಾಲೂಕಿನ ವೆಂಕಟಗಿರಿ ಗ್ರಾಮದ ಬಳಿ ಗಣಿ ಲಾರಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಕುಮಾರ್ (34) ಹಾಗೂ ಮಂಜುನಾಥ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿ ವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದ್ದು, ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ಶಿವಮೊಗ್ಗದ ಚೋರಡಿ ಸೇತುವೆ ಬಳಿ ಕಾರು ಮೂರು ಬಾರಿ ಪಲ್ಟಿಯಾದರೂ, ಅದರಲ್ಲಿದ್ದ ಆರು ಮಂದಿ ಸ್ನೇಹಿತರು …

Read More »

ರೀಲ್ಸ್ ನೋಡಿ ಐತಿಹಾಸಿಕ ದೇವಸ್ಥಾನದಲ್ಲಿ ಕಳ್ಳತನ: ಗುಜರಾತ್ ಮೂಲದ ಗ್ಯಾಂಗ್ ಅರೆಸ್ಟ್

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದ್ದ 32 ಕೆಜಿ ಬೆಳ್ಳಿ ಬಸವಣ್ಣನ ಮೂರ್ತಿ ಕಳ್ಳತನ ಪ್ರಕರಣವನ್ನು ಪೊಲೀಸರು ಒಂದು ತಿಂಗಳ ಬಳಿಕ ಭೇದಿಸಿದ್ದಾರೆ. ಗುಜರಾತ್ ಮೂಲದ ಸುರೇಶಕುಮಾರ್ ಸೋನಿ (51), ಬ್ರಹ್ಮಾರ್ ನೇಟ್ (35) ಹಾಗೂ ಇಂದ್ರಜೀತ್ ನೇಟ್ (33) ಬಂಧಿತರಾಗಿದ್ದಾರೆ. ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ ಮೂಲಕ ದೇವಸ್ಥಾನದ ಮಾಹಿತಿ ಪಡೆದು, ಜುಲೈ 6ರಂದು ಗುಜರಾತ್‌ನಿಂದ ಕಾರಿನಲ್ಲಿ ಬಂದು ಕಳ್ಳತನ ಎಸಗಿದ್ದರೆಂದು ತನಿಖೆಯಲ್ಲಿ ಬೆಳಕಿಗೆ …

Read More »

ಕೊಲ್ಲೂರು: ಬಟ್ಟೆ ಇಡುವ ಸಣ್ಣ ವಿಷಯಕ್ಕೆ ತಾಯಿ ಬೈದಿದ್ದಕ್ಕೆ ಬೇಸರ – ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು!

ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ತಾಯಿ ಬೈದಿದ್ದಕ್ಕೆ ಮನನೊಂದ 18 ವರ್ಷದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ ಪ್ರಮಿತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಹೋದರಿಯರ ನಡುವೆ ಬಟ್ಟೆ ಇಡುವ ವಿಚಾರಕ್ಕೆ ಜಗಳ ನಡೆದಿದ್ದು, ತಾಯಿ ಇಬ್ಬರನ್ನೂ ಬೈದ ಬಳಿಕ ಪ್ರಮಿತಾ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಬಳಿಕ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಾಯಿ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ …

Read More »

ಮೂರು ಮಟ್ಕಾ ಪ್ರಕರಣಗಳಲ್ಲಿ ಬುಕ್ಕಿ ಸೇರಿ ಐವರ ಬಂಧನ

ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಮಟ್ಕಾ ಜುಗಾರಿ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಜೊತೆಗೆ ಓರ್ವ ಮಟ್ಕಾ ಬುಕ್ಕಿಯನ್ನೂ ವಶಕ್ಕೆ ಪಡೆದಿದ್ದಾರೆ. ಕಾರ್ಕಳ ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ, ನಗದು, ಮೊಬೈಲ್, ಮಟ್ಕಾ ಚೀಟಿಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ದೊರೆತ ಮಾಹಿತಿಯ ಆಧಾರದ ಮೇಲೆ …

Read More »

ವರ್ಕ್ ಫ್ರಂ ಹೋಂ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ದಂಪತಿ ಅರೆಸ್ಟ್

ದೇವನಹಳ್ಳಿಯಲ್ಲಿ ‘ವರ್ಕ್ ಫ್ರಂ ಹೋಂ’ ಉದ್ಯೋಗದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಕಿರಣ್ ಹಾಗೂ ಆತನ ಪತ್ನಿ ಆರತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರು ‘ಕಾಳಿಕಾ ದೇವಿ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ನಕಲಿ ಸಂಸ್ಥೆ ನಡೆಸುತ್ತಿದ್ದರು. ಮೇಣದಬತ್ತಿ, ಡ್ರೈ ಫ್ರೂಟ್ಸ್ ಹಾಗೂ ಅಗರಬತ್ತಿ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳಿ, ₹1 ಲಕ್ಷ ಡೆಪಾಸಿಟ್ ಮಾಡಿದವರಿಗೆ ತಿಂಗಳಿಗೆ ₹23 ಸಾವಿರ ಸಂಬಳ ನೀಡುವ ಭರವಸೆ ನೀಡಿ ಸಾರ್ವಜನಿಕರಿಂದ ₹2 ಲಕ್ಷದಿಂದ ₹20 ಲಕ್ಷದವರೆಗೆ …

Read More »