Breaking News

ಮಹಿಳಾ ಮೆಕ್ಯಾನಿಕ್‌ಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಬಂಧನ

ಬೆಂಗಳೂರು: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಮಹಿಳಾ ಮೆಕ್ಯಾನಿಕ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಸಹೋದ್ಯೋಗಿ ಶಿವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 12ರಂದು ನೆಲಮಂಗಲದ ಅರಿಶಿನಕುಂಟೆ ಬಳಿಯ ಡಿಪೋದಲ್ಲಿ ಈ ಘಟನೆ ನಡೆದಿತ್ತು. 40 ವರ್ಷದ ಲಕ್ಷ್ಮಿ ಅವರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಬಂಧಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಮೇಲ್ವಿಚಾರಕರೊಂದಿಗೆ ಜಗಳವಾಡಿದ್ದ ಶಿವರಾಜ್ ವಿರುದ್ಧ ಲಕ್ಷ್ಮಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ಇದರಿಂದ ಶಿವರಾಜ್ ಅಮಾನತುಗೊಂಡಿದ್ದ. ಇದೇ ದ್ವೇಷದಿಂದ ಹಲ್ಲೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Share News

About BigTv News

Check Also

ಸೊಸೆ ಕಿರುಕುಳಕ್ಕೆ ಬೇಸತ್ತು ಮಾವ ಆತ್ಮಹತ್ಯೆ

ಶಿರಾಳಕೊಪ್ಪ: ಸೊಸೆ ಕಿರುಕುಳಕ್ಕೆ ಬೇಸತ್ತು 55 ವರ್ಷದ ಶಿವಮೂರ್ತಿ ಎಂಬುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ನೇರಲಗಿ …

Leave a Reply

Your email address will not be published. Required fields are marked *