ತುಮಕೂರು: ಪತಿ-ಪತ್ನಿ ನಡುವಿನ ಜಗಳಕ್ಕೆ 16 ವರ್ಷದ ಮಗ ಬಲಿಯಾಗಿರುವ ಘಟನೆ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ನಡೆದಿದೆ. ತಂದೆ ನಂಜಪ್ಪ ಹಾರೆಯಿಂದ ಹೊಡೆದು ಮಗ ಸುನೀಲ್‌ನನ್ನು ಕೊಲೆ ಮಾಡಿದ್ದಾನೆ. ದಂಪತಿ ನಡುವೆ ಭಾನುವಾರ ಬೆಳಗ್ಗೆ ಮತ್ತೆ ಜಗಳ ನಡೆದಿದ್ದು, ಇದೇ ವೇಳೆ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಹಾಕಿದ್ದಾನೆ. ಟ್ಯೂಷನ್‌ಗೆ ಹೋಗಲು ಮಗ ಸುನೀಲ್ ಬಾಗಿಲು ತೆರೆದಾಗ ಕೋಪಗೊಂಡ ನಂಜಪ್ಪ ಹಾರೆಯಿಂದ ಹಲ್ಲೆ ನಡೆಸಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯನ್ನು ಕಿಟಕಿ ಮೂಲಕ ನೋಡಿದ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ನಂಜಪ್ಪನನ್ನು ಬಂಧಿಸಿದ್ದು, ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
