Breaking News

BigTv News

ಗಾಂಜಾ ಸೇವಿಸಿದ ಇಬ್ಬರನ್ನು ಬಂಧಿಸಿದ ಪೋಲಿಸರು

ಗೋಕರ್ಣ: ನಗರದ ಮಿಡ್ಲ್ ಬೀಚನ ಕರಿಯಪ್ಪಕಟ್ಟೆಯ ಬಳಿ ಸಮುದ್ರ ದಂಡೆಯಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಚಿಕ್ಕಬಾಣಾವರದ ಎ.ಜಿ.ಬಿ ಲೇಔಟಿನ ನಿವಾಸಿ ಪದ್ಮನಾಭ ಶ್ರೀಹರಿ ಪಾಟೀಲ್ (25) ಮತ್ತು ದಾಸರಹಳ್ಳಿಯ ಕಾಳಶ್ರೀ ನಗರದ ನಿವಾಸಿ ಸೂರಜಕುಮಾರ್ ದಿನೇಶ ಮಂಡಲ್ (27) ಬಂಧಿತ ಆರೋಪಿಗಳು. 4 ಜನ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು ಇಲ್ಲಿಯ ಮಿಡ್ಲ್ ಬೀಚಿನ ಕರಿಯಪ್ಪಕಟ್ಟೆಯ ಬಳಿಯ ಆರ್.ಕೆ.ಕಾಟೇಜ್ ಎದುರಿನ ಸಮುದ್ರ ದಂಡೆಲ್ಲಿ‌ ಗಾಂಜಾ ಸೇವಿಸಿದ …

Read More »

ಮತಾಂತರಗೊಂಡವರಿಗೆ ಮೀಸಲಾತಿ ನೀಡಬೇಡಿ: ದಲಿತಪರ ಸಂಘಟನೆಗಳ ಒತ್ತಾಯ

ಬೆಂಗಳೂರು: ದಲಿತ ಸಮುದಾಯದಿಂದ ಮುಸ್ಲಿಂ, ಕೆಸ್ತ ಧರ್ಮಕ್ಕೆ ಮತಾಂತರಗೊಂಡವರಿಗೆ ಯಾವುದೇ ಕಾರಣಕ್ಕೂ ಮೀಸಲಾತಿ ಕಲ್ಪಿಸಬಾರದು. ಅವರನ್ನು ದಲಿತರು ಎಂದು ಪರಿಗಣಿಸಬಾರದು ಎಂದು ನ್ಯಾಯಮೂರ್ತಿ ಬಾಲಕೃಷ್ಣನ್​ ವಿಚಾರಣಾ ಆಯೋಗದ ಮುಂದೆ ವಿವಿಧ ದಲಿತಪರ ಸಂಘಟನೆಗಳು ಹಕ್ಕೊತ್ತಾಯ ಮಂಡಿಸಿದವು. ಪರಿಶಿಷ್ಟ ಜಾತಿಯ ವ್ಯಕ್ತಿಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅವರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡಬೇಕೇ ಎಂಬುವುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು, ನ್ಯಾ. ಕೆ.ಜಿ.ಬಾಲಕೃಷ್ಣನ್​ ನೇತೃತ್ವದಲ್ಲಿ ವಿಚಾರ ಆಯೋಗ ನೇಮಿಸಿದೆ. ನಿವೃತ್ತ ಐಎಎಸ್​ ಅಧಿಕಾರಿ …

Read More »

ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ನೈಜೀರಿಯಾದಲ್ಲಿ 127 ಮಂದಿ ಸಾವು

ನೈಜೀರಿಯಾ: ಈಶಾನ್ಯ ನೈಜೀರಿಯಾದಲ್ಲಿ ಶಂಕಿತ ಬೊಕೊ ಹರಾಮ್ ಉಗ್ರರು ನಡೆಸಿದ ವಿನಾಶಕಾರಿ ದಾಳಿಯಲ್ಲಿ ಕನಿಷ್ಠ 127 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಕಾವಲು ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ತಿಳಿಸಿದೆ. ಯೋಬೆ ರಾಜ್ಯದ ತರ್ಮುವಾ ಕೌನ್ಸಿಲ್ ಪ್ರದೇಶದಲ್ಲಿ ನಡೆದ ಈ ದಾಳಿಯು ಈ ಪ್ರದೇಶದಲ್ಲಿ ನಡೆದ ಭೀಕರ ಘಟನೆಗಳಲ್ಲಿ ಒಂದಾಗಿದೆ. ಮೋಟರ್ ಸೈಕಲ್’ಗಳಲ್ಲಿ ಬಂದ 50 ಕ್ಕೂ ಹೆಚ್ಚು ಉಗ್ರಗಾಮಿಗಳು ಗ್ರಾಮದಲ್ಲಿ ಇಳಿದು, ಜನನಿಬಿಡ ಮಾರುಕಟ್ಟೆ, ಆರಾಧಕರು ಮತ್ತು ಅವರ …

Read More »

ಅಪರಾಜಿತಾ ಅತ್ಯಾಚಾರ ವಿರೋಧಿ ಮಸೂದೆ ಅಂಗೀಕಾರ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯು ಅಪರಾಜಿತಾ ಅತ್ಯಾಚಾರ ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು ಪ್ರತಿಪಕ್ಷಗಳು ಮಸೂದೆಗೆ ಸಂಪೂರ್ಣ ಬೆಂಬಲ ನೀಡಿದವು.ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳು ಇತ್ತೀಚೆಗೆ ಹೆಚ್ಚಿದ್ದು, ಮಹಿಳೆಯರ ರಕ್ಷಣೆಗೆ ಪರಿಣಾಮಕಾರಿ ಕಾನೂನು ಜಾರಿಗೊಳಿಸುವಲ್ಲಿ ವಿಫಲರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಘಟನೆ ಸಂಭವಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ರಾಜೀನಾಮೆಗೆ ಮಮತಾ ಅವರು ಒತ್ತಾಯಿಸಿದ್ದರು. ಅತ್ಯಾಚಾರ ಮಾನವೀಯತೆಯ ವಿರುದ್ಧದ ಶಾಪ ಅಂತಹ ಅಪರಾಧಗಳನ್ನು …

Read More »

ಆನ್‌ಲೈನ್‌ ಸ್ಟಾಕ್‌ ಮಾರುಕಟ್ಟೆ ವಂಚನೆ ಪ್ರಕರಣವನ್ನು ಬಯಲಿಗೆಳೆದ ಅಸ್ಸಾಂ ಪೊಲೀಸರು

ಗುವಾಹಟಿ: ಬರೊಬ್ಬರಿ 22 ಸಾವಿರ ಕೋಟಿ ರೂ.ಗಳ ಆನ್‌ಲೈನ್‌ ಸ್ಟಾಕ್‌ ಮಾರುಕಟ್ಟೆ ವಂಚನೆ ಪ್ರಕರಣವನ್ನು ಅಸ್ಸಾಂ ಪೊಲೀಸರು ಬಯಲಿಗೆಳೆದಿದ್ದಾರೆ. ನರ ಹಣವನ್ನು ದ್ವಿಗುಣಗೊಳಿಸುವುದಾಗಿ ಹೇಳಿಕೊಂಡು ಆನ್‌ಲೈನ್‌ ಸ್ಟಾಕ್‌ ಮಾರುಕಟ್ಟೆ ಹೂಡಿಕೆಯನ್ನು ವಂಚಿಸಿದ ದಲ್ಲಾಳಿಗಳು ಒಳಗೊಂಡ 22,000 ಕೋಟಿಯ ಬೃಹತ್‌ ಹಣಕಾಸು ಹಗರಣವನ್ನು ಅಸ್ಸಾಂ ಪೊಲೀಸರು ಬಯಲಿಗೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ದಿಬ್ರುಗಢ್‌ನ 22 ವರ್ಷದ ಆನ್‌ಲೈನ್‌ ವ್ಯಾಪಾರಿ ವಿಶಾಲ್‌ ಫುಕನ್‌ ಮತ್ತು ಗುವಾಹಟಿಯ ಸ್ವಪ್ನಿಲ್‌ ದಾಸ್‌‍ ಎಂಬ …

Read More »

ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಸಚಿನ್ ಸರ್ಜೆರಾವ್ ಖಿಲಾರಿ

ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಶಾಟ್‌ಪುಟ್ ಪಟು ಸಚಿನ್ ಸರ್ಜೆರಾವ್ ಖಿಲಾರಿ ಬೆಳ್ಳಿ ಪದಕ ಗೆದ್ದಿದ್ದಾರೆ. ಪುರುಷರ ಎಫ್ 46 ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿರುವ ಸರ್ಜೆರಾವ್, 16.32 ಮೀ. ದೂರ ಶಾಟ್‌ಪುಟ್ ಎಸೆಯುವ ಮೂಲಕ ಭಾರತಕ್ಕೆ ಮಗದೊಂದು ಪದಕ ಗೆಲ್ಲಲು ನೆರವಾದರು. ಆ ಮೂಲಕ ಸಚಿನ್ ಖಿಲಾರಿ, ತಮ್ಮದೇ ಹೆಸರಲ್ಲಿದ್ದ ಏಷ್ಯನ್ ದಾಖಲೆಯನ್ನು ಉತ್ತಮಪಡಿಸಿದರು. ಮೇ ತಿಂಗಳಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ …

Read More »

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ

ಹುಬ್ಬಳ್ಳಿ: ಕಳೆದ ಬಾರಿ ರಾಜ್ಯದಲ್ಲಿ ಸಾಕಷ್ಟು ಹೈಡ್ರಾಮಗೆ ಕಾರಣವಾಗಿದ್ದ ಹುಬ್ಬಳ್ಳಿಯ ಇದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಯ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿಯೂ ಈದ್ದಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಸಿಕ್ಕಿದೆ. ಈ ಬಾರಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಗಣೇಶೋತ್ಸವದ ಆಚರಣೆಗೆ ಅವಕಾಶ ನೀಡಿದೆ. ಸೆಪ್ಟೆಂಬರ್ 7 ರಂದು ಗಣೇಶ ಪ್ರತಿಷ್ಠಾಪನೆ ಮಾಡಿ ಬಳಿಕ ಸೆಪ್ಟೆಂಬರ್ 9ರಂದು ಗಣೇಶ ವಿಸರ್ಜನೆ ಮಾಡುವಂತೆ ಸೂಚಿಸಿ ಮೂರು …

Read More »

ರಾಜ್ಯದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಬೆಂಗಳೂರು: ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟಿಸಲಾಗಿದ್ದು ಪ್ರಾಥಮಿಕ ಶಾಲೆ ವಿಭಾಗದಲ್ಲಿ 20 ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದು ಪ್ರೌಢಶಾಲೆ ವಿಭಾಗದಲ್ಲಿ 11 ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಯನ್ನು ಸರ್ಕಾರ ಪ್ರದಾನ ಮಾಡಲಿದೆ.

Read More »

ಯೋಜನೆಗಳ ಮಾಹಿತಿ ತಿಳಿಯಲು ಸಹಾಯವಾಣಿ ಆರಂಭಿಸಿದ ಪಂಚಾಯತ್ ರಾಜ್ ಇಲಾಖೆ

ಬೆಂಗಳೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತ್ ಮೂಲಕ ಅನುಷ್ಥಾನ ಮಾಡುತ್ತಿರುವ ಎಲ್ಲಾ ಯೋಜನೆಗಳ ಮಾಹಿತಿ ಮತ್ತು ಕುಂದು ಕೊರತೆಗಳನ್ನು ತಿಳಿಯಲು ಹೊಸ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯಾವುದೇ ಮಾಹಿತಿ ಮತ್ತು ಕುಂದು ಕೊರತೆ ಹಾಗೂ ಸೌಲಭ್ಯದ ಮಾಹಿತಿ ತಿಳಿಯಲು ಏಕೀಕೃತ ಸಹಾಯವಾಣಿ ಸಂಖ್ಯೆ 8277506000 ಗೆ ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯ ವರೆಗೆ ಕರೆ …

Read More »

ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ಹಾಗೂ ಇನ್ನಿತರ ಸೇವಾ ಬೇಡಿಕೆಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳೊಳಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಬುಧವಾರ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗದೊಂದಿಗೆ ಅವರ ಬೇಡಿಕೆಗಳ ಕುರಿತು ಸಭೆ ನಡೆಸಿದರು. ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳೊಂದಿಗೆ, ಕಾನೂನು ತೊಡಕುಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಗ್ರವಾಗಿ ಸಮಾಲೋಚನೆ ನಡೆಸಿ, ಪ್ರಾಥಮಿಕ …

Read More »