ಗುವಾಹಟಿ: ಬರೊಬ್ಬರಿ 22 ಸಾವಿರ ಕೋಟಿ ರೂ.ಗಳ ಆನ್‌ಲೈನ್ ಸ್ಟಾಕ್ ಮಾರುಕಟ್ಟೆ ವಂಚನೆ ಪ್ರಕರಣವನ್ನು ಅಸ್ಸಾಂ ಪೊಲೀಸರು ಬಯಲಿಗೆಳೆದಿದ್ದಾರೆ. ನರ ಹಣವನ್ನು ದ್ವಿಗುಣಗೊಳಿಸುವುದಾಗಿ ಹೇಳಿಕೊಂಡು ಆನ್‌ಲೈನ್ ಸ್ಟಾಕ್ ಮಾರುಕಟ್ಟೆ ಹೂಡಿಕೆಯನ್ನು ವಂಚಿಸಿದ ದಲ್ಲಾಳಿಗಳು ಒಳಗೊಂಡ 22,000 ಕೋಟಿಯ ಬೃಹತ್ ಹಣಕಾಸು ಹಗರಣವನ್ನು ಅಸ್ಸಾಂ ಪೊಲೀಸರು ಬಯಲಿಗೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ದಿಬ್ರುಗಢ್‌ನ 22 ವರ್ಷದ ಆನ್‌ಲೈನ್ ವ್ಯಾಪಾರಿ ವಿಶಾಲ್ ಫುಕನ್ ಮತ್ತು ಗುವಾಹಟಿಯ ಸ್ವಪ್ನಿಲ್ ದಾಸ್ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದಾಗ್ಯೂ, ರಾಜ್ಯದಲ್ಲಿ ವ್ಯಾಪಿಸಿರುವ ಹಗರಣದಲ್ಲಿ ಇನ್ನೂ ಹಲವಾರು ಬಂಧನಗಳನ್ನು ನಿರೀಕ್ಷಿಸಲಾಗಿದೆ. ತನ್ನ ಶ್ರೀಮಂತ ಜೀವನಶೈಲಿಯನ್ನು ಬಳಸಿಕೊಂಡು ಜನರಿಗೆ ಆಮಿಷವೊಡ್ಡಿದ ಫುಕನ್, ತನ್ನ ಹೂಡಿಕೆದಾರರಿಗೆ 60 ದಿನಗಳಲ್ಲಿ ತಮ ಹೂಡಿಕೆಯ ಮೇಲೆ ಶೇ.30 ಲಾಭವನ್ನು ನೀಡುವುದಾಗಿ ಭರವಸೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ನಕಲಿ ಕಂಪನಿಗಳನ್ನು ಸ್ಥಾಪಿಸಿ, ಅಸ್ಸಾಮಿ ಚಲನಚಿತ್ರೋದ್ಯಮದಲ್ಲಿ ಹೂಡಿಕೆ ಮಾಡಿ ಹಲವು ಆಸ್ತಿಗಳನ್ನು ಸಂಪಾದಿಸಿದ್ದ ಎಂದು ತಿಳಿದುಬಂದಿದೆ.
ಈ ಆನ್‌ಲೈನ್ ವ್ಯಾಪಾರ ಸಂಸ್ಥೆಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಯಾವುದೇ ವ್ಯವಸ್ಥೆ ಇಲ್ಲ ಎಂದು ನಾನು ಜನರಿಗೆ ಹೇಳಲು ಬಯಸುತ್ತೇನೆ. ವಂಚಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ವಂಚಕರಿಂದ ದೂರವಿರಿ ಎಂದು ನಾನು ಜನರಿಗೆ ಮನವಿ ಮಾಡುತ್ತೇನೆ. ಇದೀಗ ಅಕ್ರಮ ದಲ್ಲಾಳಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿನ ಸಂಪೂರ್ಣ ದಂಧೆಯನ್ನು ಭೇದಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಮಂತ್ ಬಿಸ್ವಾ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

