ಹಾಸನ : ಕುಟುಂಬ ರಾಜಕಾರಣಿದಲ್ಲಿ ಟಿಕೆಟ್ ಗಾಗಿ ಬುಗಿಲೆದ್ದಿರುವ ಮಾತಿನ ಚಕಮಕಿಯಲ್ಲಿ, ಈಗ ಮತ್ತೊಂದು ಹೊಸ ರೂಪ ಪಡೆದಿದೆ. ಹಾಸನದಲ್ಲಿ ಟಿಕೆಟ್ ಗಾಗಿ ಒಂದು ಭವಾನಿ ರೇವಣ್ಣ ಪೈಪೋಟಿ ನಡೆಸುತ್ತಿದ್ದರೇ , ಮತ್ತೊಂದು ಕಡೆ ಮಾಜಿ ಶಾಸಕರ ಮಗ ಸ್ವರೂಪ್ ತಮ್ಮ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದ್ರೇ ಮತದಾರರು ಹಾಗೂ ಭವಾಣಿ ರೇವಣ್ಣನವರ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಇತ್ತ ಕುಮಾರಸ್ವಾಮಿಗೆ ಟಾಂಗ್ ಕೊಡುವ ಕೆಲಸ ಮಾಡಿದ್ದಾರೆ. ಕರ್ನಾಟಕದ ‘ಅಮ್ಮ’.. …
Read More »ಪಕ್ಷಕ್ಕಿಂತ ಸಮುದಾಯವೇ ಮುಖ್ಯ ಎಂಬುದೇ ಅಲ್ಪಾಸಂಖ್ಯಾತರ ಕೂಗು-ಐ ಜಿ ಸನದಿ
ಹುಬ್ಬಳ್ಳಿ: ಮುಸ್ಲಿಂ ಸಮೂದಾಯದವರ ಜನಸಂಖ್ಯೆ ಹೆಚ್ಚಿರುವ ಕಡೆ ಕನಿಷ್ಟ ಪಕ್ಷ ಒಂದು ಟಿಕೆಟ್ ನೀಡಬೇಕೆಂದು ಮಾಜಿ ಸಂಸದ ಐ ಜಿ ಸನದಿಯವರು ಒತ್ತಾಯಿಸಿದರು. ಅಲ್ಪಸಂಖ್ಯಾತರಿಗೆ ಹುಬ್ಬಳ್ಳಿ ಧಾರವಾಡ ದಲ್ಲಿ ಒಂದು ಟಿಕೆಟ್ ನೀಡುವಂತೆ ಕಾಂಗ್ರೆಸ್ ಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಇಲ್ಲಿಯವರೆಗೂ ನಮ್ಮ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ಕಾಂಗ್ರೇಸ್ ಪಕ್ಷದಲ್ಲಿ ಮೊದಲು ಪಾರ್ಟಿ ಅನ್ನುವ ಸಿದ್ದಾಂತ ವಿತ್ತು. ಆದ್ರೇ ಈಗ ಮುಸ್ಲಿಂ ಸಮುದಾಯದ ಧ್ವನಿ ಹೆಚ್ಚಾಗಿದೆ. ಪಾರ್ಟಿಗಿಂತ …
Read More »ಕುಂದಗೋಳದಲ್ಲಿ ಮನೆ ಗೋಡೆಗೆ ಕಮಲದ ಬಣ್ಣ ಬರೆದ ಕೇಂದ್ರಗೃಹ ಸಚಿವ ಅಮೀತ್ ಶಾ..
ಹುಬ್ಬಳ್ಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕುಂದಗೋಳ ಪಟ್ಟಣದಲ್ಲಿ ಅದ್ದೂರಿ ರೋಡ್ ಶೋ ನಡೆಸಿ ಮನೆಯೊಂದರ ಗೋಡೆಯಲ್ಲಿ ಬರೆದ ಕಮಲ ಚಿತ್ರಕ್ಕೆ ಬಣ್ಣ ಬಳೆದಿ ಚಾಲನೆ ನೀಡಿದರು. ಕುಂದಗೋಳ ಪಟ್ಟಣದ ಬಸವರಾಜ ಹಂಚಿನಮನಿ ಅವರ ಮನೆ ಗೋಡೆಯ ಮೇಲೆ ಕಮಲ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಗೋಡೆ ಬರಹಕ್ಕೆ ಚಾಲನೆ ನೀಡಿದರು. ಕಮಲ ಚಿಹ್ನೆಗೆ ಕೇಸರಿ ಬಣ್ಣ ಬರೆದು ಚಾಲನೆ ನೀಡಿದರು. ಬಳಿಜ ಬಸವರಾಜ್ ಹಂಚಿನಮನಿ ಅವರ. …
Read More »ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟಿಸಿದ ರೈತಪರ ಹೋರಾಟಗಾರರು
ಹುಬ್ಬಳ್ಳಿ, ಜ.28- ನಗರಕ್ಕೆ ಇಂದು (ಶನಿವಾರ) ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರೈತಪರ ಹೋರಾಟಗಾರರು ನಗರದ ಕಿತ್ತೂ ಚೆನ್ನಮ್ಮ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರೈತ ಪರ ಹೋರಾಟಗಾರ ಸಿದ್ಧು ತೇಜಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಕೂಡಲೇ ಉತ್ತರ ಕರ್ನಾಟಕದ ಜನತೆಯ ಹಲವಾರು ವರ್ಷಗಳ ಬೇಡಿಕೆಯಾದ ಕಳಸಾ- ಬಂಡೂರಿ ಮಹದಾಯಿ ಯೋಜನೆ ಕೇವಲ ಕಾಗದದಲ್ಲಿ …
Read More »ಧಾರವಾಡದಿಂದ ಕುಂದಗೋಳಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ ಅಮಿತ್ ಶಾ
ಧಾರವಾಡ: ಕುಂದಗೋಳ ಪಟ್ಟಣದಲ್ಲಿ ನಡೆಯಲಿರುವ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧಾರವಾಡದಿಂದ ಹೆಲಿಕಾಪ್ಟರ್ ಮೂಲಕ ತೆರಳಿದರು. ಧಾರವಾಡದಲ್ಲಿ ಫೋರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮಿತ್ ಶಾ ಅವರು, ಕೃಷಿ ವಿಶ್ವವಿದ್ಯಾಲಯದಲ್ಲೇ ಭೋಜನ ಸವಿದರು. ಅಲ್ಲಿಂದ ಎತ್ತಿನಗುಡ್ಡದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಹೆಲಿಪ್ಯಾಡ್ಗೆ ತೆರಳಿದ ಅವರು, ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಪ್ರಯಾಣ ಬೆಳೆಸಿದರು. …
Read More »ಕೆಎಲ್ ಇ ಸೇವೆ ಸ್ಮರಿಸಿದ ಅಮಿತ್ ಶಾ: ಯುವಕರು ಸಾಹಸದ ಮೂಲಕ ಸಾಧನೆಗೆ ಮುಂದಾಗಿ
ಹುಬ್ಬಳ್ಳಿ: ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನನ್ನ ಪುಣ್ಯ. ಇದೆ ಸಮಯದಲ್ಲಿ ಭಾರತದ ಅಮೃತ ಮಹೋತ್ಸವ ನಡೆಯುತ್ತಿದೆ. ದೇಶದಲ್ಲಿ ನಾವು ಗಟ್ಟಿಯಾಗಿ ಉಳಿದು ತೋರಿಸುವ ಸಮಯ ಇದಾಗಲಿದೆ. ಪ್ರತಿಷ್ಠಾಪಿಸಿದ 5 ಜನ ಗುರುಗಳಿಗೆ ನಾನು ಅಭಿನಂದಿಸಲು ಇಚ್ಚಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, 12ನೇ ವರ್ಷದವನಾಗಿದ್ದಾಗಲೇ ನಾನು ರಾಜಕೀಯ ಜೀವನ ಆರಂಭಿಸಿದ್ದೇನೆ. ಶಿಕ್ಷಣದ ವ್ಯಾಪರಿಕರಣ ಆಗುವ ಸಮಯದಲ್ಲಿ …
Read More »ಮಹೋತ್ಸವಕ್ಕೆ ಚಾಲನೆ: ಜ್ಯೋತಿಯ ಮೂಲಕ ಉದ್ಘಾಟನೆ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೆಎಲ್ಇ ಬಿವಿಬಿ ತಾಂತ್ರಿಕ ವಿಶ್ವವಿದ್ಯಾಲಯ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಹೌದು.. ವಿದ್ಯಾನಗರದ ಬಿವಿಬಿ ಆವರಣದಲ್ಲಿ ಆಯೋಜಿಸಲಾಗಿದ್ದ ಅಮೃತ ಮಹೋತ್ಸವ ಹಾಗೂ ಪ್ರಭಾಕರ ಕೋರೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನೂ ಬ್ರಹ್ಮ ಋಷಿ ಗುರುದೇವ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡದ ಬಳಿಕ ಕೇಂದ್ರ ಸಚಿವ ಅಮಿತ್ …
Read More »ಅಮಿತ್ ಶಾ ಉಕ್ಕಿನ ಮನುಷ್ಯ ಎಂದ ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಭಾರತವನ್ನು ನಕ್ಸಲೈಟ್ ಮುಕ್ತ, ಟೆರೆರಿಸ್ಟ್ ಮುಕ್ತ ಮಾಡಿದ್ದು ಅಮಿತ್ ಶಾ. ಅಮಿತ್ ಶಾ ಉಕ್ಕಿನ ಮನುಷ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿವಿಬಿ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮನ್ನು ನೋಡಿದರೆ ಹೊಟ್ಟೆಕಿಚ್ಚ ಆಗುತ್ತದೆ. ನಾನು ಇಲ್ಲಿ ಕುಳಿತುಕೊಳ್ಳುವ ಬದಲು ಮುಂದೆ ಕುಳಿತುಕೊಳ್ಳಬೇಕಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು. ಕ್ಯಾಂಪಸ್ ನೋಡಿದರೆ ನಾವು ಈಗ ಇಲ್ಲಿ ವಿದ್ಯಾರ್ಥಿಗಳು ಆಗಬೇಕಿತ್ತು. ಕಾಲೇಜ್ನಲ್ಲಿ ಮೊದಲು ಸಿವಿಲ್, ಮೆಕ್ಯಾನಿಕಲ್ ಬಿಟ್ಟರೆ …
Read More »ಪಕ್ಷದಲ್ಲಿ ಭಿನ್ನಮತ ಇಲ್ಲ, ಅಭಿವೃದ್ಧಿ ನಮ್ಮ ಗುರಿ’
ಹುಬ್ಬಳ್ಳಿ: ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ನಮ್ಮೆಲ್ಲರಿಗೂ ಪಕ್ಷದ ಬೆಳವಣಿಗೆ ಮುಖ್ಯ. ಎಲ್ಲರೂ ಭಿನ್ನಮತ ಮರೆತು ಪಕ್ಷಕ್ಕಾಗಿ ಶ್ರಮಿಸಬೇಕು. ಎಲ್ಲ ಕಡೆಯೂ ನಮಗೆ ಒಂದೊದು ಗುರಿ ಇದೆ. ಅದನ್ನು ತಲುಪಲು ಶ್ರಮಿಸಿಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೆಚ್ಚಿನ ನಾಯಕ ಅಮಿತ್ ಶಾ ಇಂದು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ. ಅಧಿಕೃತ ಕಾರ್ಯಕ್ರಮಗಳಾದ ಎಫ್ಎಸ್ಎಲ್ಯು ಲ್ಯಾಬ್ ಅಡಿಗಲ್ಲು, ಬಿವಿಬಿ …
Read More »ತಮ್ಮ ಜನ್ಮದಿನವಾದ ಇಂದು ತಂದೆ-ತಾಯಿ ಸಮಾಧಿ ಸ್ಥಳಕ್ಕೆ ಸಿಎಂ ಬೊಮ್ಮಾಯಿ ಭೇಟಿ
ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ 63ನೇ ಜನ್ಮದಿನದ ನಿಮಿತ್ತವಾಗಿ ತಂದೆ ತಾಯಿ ಸಮಾಧಿಗೆ ಭೇಟಿ ನೀಡಿ ಗೌರವ ಸಮರ್ಪಣೆ ಮಾಡಿದರು. ಅಮರಗೋಳದಲ್ಲಿನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸುವ ಮೂಲಕ ಜನ್ಮ ದಿನಕ್ಕೆ ತಂದೆ ತಾಯಿ ಆಶೀರ್ವಾದ ಪಡೆದಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





