ಹುಬ್ಬಳ್ಳಿ: ಭುಗಿಲೆದ್ದ ಪ್ರತಿಭಟನಾಕಾರರ ಆಕ್ರೋಶ.ಪೊಲೀಸ್ ಠಾಣೆಯ ಮುಂಭಾಗದಲ್ಲಿ ಭದ್ರತಾ ದೃಷ್ಟಿಯಿಂದ ನಿಲ್ಲಿಸಿರುವ ಪೋಲಿಸ್ ಬಸ್ ತೆಗೆಯುವಂತೆ ಪ್ರತಿಭಟನಾಕಾರರು ಮನವಿ.
ಆದರೆ ಬಸ್ ತೆಗೆಯಲು ಪೊಲೀಸರ ಹಿಂದೇಟು ಹಾಕಿದ್ದಕ್ಕೆ ಅಸಮಾಧಾನಗೊಂಡ ಪ್ರತಿಭಟನಾಕಾರರು.ಬಸ್ ನಾವೆ ತೆಗೆಯುತ್ತೆವೆ ಅಂತ ಮಾತಿನ ಚಕಮಕಿ ನಡೆಯಿತು.ಪೊಲೀಸ್ ಠಾಣೆ ಎದುರು ವಿನೂತನ ಪ್ರತಿಭಟನೆ.ಭಜನೆ ಮೂಲಕ ಪ್ರತಿಭಟನೆ.ಇನ್ನೂ ಕೆಲವೇ ಕ್ಷಣಗಳಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಲಿರುವ ಆರ್.ಅಶೋಕ.ಆರ್.ಅಶೋಕ ಆಗಮನ ಮುನ್ನವೇ ತೀವ್ರಗೊಂಡ ಪ್ರತಿಭಟನೆ.ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಹಾಡು ಹಾಡಿದರು.ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಏನು ಮಾಡಿದ್ದನೆಂದು ಹಾಡಿನ ಮೂಲಕ ಪ್ರಶ್ನೆ ಹಾಕಿದ ಪ್ರತಿಭಟನಾಕಾರರು.ಪಕ್ಷಪಾತ ಮಾಡಿ ಜಗಳ ಮಾಡ್ಯಾನ.ಹೆಣ್ಣು ಮಕ್ಕಳಿಗೆ ಜಗಳ ಹಚ್ಯಾನ ಎಂದು ಹಾಡು ಹಾಡಿದ ಪ್ರತಿಭಟನಾಕಾರರು.
ಪ್ರತಿಭಟನಾ ಸ್ಥಳಕ್ಕೆ ಆಗಿಮಿಸಿದ ವಿಪಕ್ಷ ನಾಯಕ ಆರ್ ಅಶೋಕ್.ಶಹರ ಪೋಲಿಸ್ ಠಾಣೆಯ ಎದುರು ನಡೆಯುತ್ತಿರುವ ಪ್ರತಿಭಟನೆ.ಶಾಸಕರುಗಳಾದ ಮಹೇಶ್ ಟೆಂಗಿನಕಾಯಿ, ಅರವಿಂದ್ ಬೆಲ್ಲದ , ಎಂ ಆರ್ ಪಾಟೀಲ್, ಎಂಎಲ್ ಸಿ ಪ್ರದೀಪ್ ಶೆಟ್ಟರ್ ಭಾಗಿಯಾಗಿದ್ದಾರೆ.ವೇದಿಕೆ ಮೇಲೆ ನಿಂತು ಸಿದ್ದರಾಮಯ್ಯ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು.ವೇದಿಕೆ ಮೇಲೆ ನಿಂತು ಮಾತಾ ಮಾತಾ ಭಾರತ ಮಾತಾ ಎಂದು ಚಪ್ಪಾಳೆ ತಟ್ಟುತ್ತಿರೋ ಆರ್ ಅಶೋಕ.ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ವಿರುದ್ದವೂ ದಿಕ್ಕಾರ ಕೂಗ್ತಿರೋ ಪ್ರತಿಭಟನಾಕಾರರು. ಶಹರ ಠಾಣೆ ಮುಂದೆ ನಿಲ್ಲಿಸಿದ ಜೀಪ್ ತಗೆಯುವಂತೆ ಮನವಿ ಮಾಡಿದ ಅಶೋಕ.ನಾವು ರಾಮ ಭಕ್ತರಾಗಿ ಬಂದಿದ್ದೇವೆ,ಆಂಜನೇಯ ಆಗೋಕೆ ಬಿಡಬೇಡಿ ಎಂದು ಎಚ್ಚರಿಕೆ ಕೊಟ್ಟ ಅಶೋಕ. ಆರ್.ಅಶೋಕ ಎಚ್ಚರಿಕೆ ನೀಡುತ್ತಲೇ ವಾಹನವನ್ನ ತೆಗದ ಪೊಲೀಸರು. ಪೊಲೀಸ್ ಠಾಣೆಯ ಮುಂದಿನ ವಾಹನ ಸ್ಥಳಾಂತರ ಮಾಡಲಾಯಿತು
bigtvnews | Hubli Dharwad News | Kannada News | Karnataka News Hubli News | News In Hubli | Local news





