Breaking News

BigTv News

ಮೋದಿ ಸಂಚಾರಿಸುವ ರಸ್ತೆಗಳಿಗೆ ಡಾಂಬಾರು ಭಾಗ್ಯ,ರಸ್ತೆ ಅಕ್ಕಪಕ್ಕದ ಕಾಂಪೌಂಡ್ ಗಳಿಗೆ ಸುಣ್ಣ ಬಣ್ಣ

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರನ್ನು ಮೆಚ್ಚಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಕಳಪೆ  ಕಾಮಗಾರಿ ನಡೆಸುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇದೇ 12 ರಂದು ಯುವ ಜನೋತ್ಸವ ಉದ್ಘಾಟನೆಗೆಂದು ಅವಳಿ ನಗರಗಳಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಬರ ಮಾಡಿಕೊಳ್ಳಲು ರಸ್ತೆಗುಂಡಿ ಮತ್ತು ದೂಳಿನಿಂದ ಕಂಗಾಲಾಗಿದ್ದ ಹುಬ್ಬಳ್ಳಿ ಧಾರವಾಡ ಮಂದಿಗೆ ಆಸರೆಯಾಗಲು ಪ್ರಧಾನಿ ಮೋದಿಯೇ ಬರಬೇಕಾಯಿತು.  ಹು-ಧಾ ಪಾಲಿಕೆಯಿಂದ ರಾತ್ರೋರಾತ್ರಿ …

Read More »

ಜ.13 ರಿಂದ 16 ರವರೆಗೆ ಶ್ರೀ ಪ್ರಸನ್ನ ಮಹಾಗಣಪತಿಗೆ ಬ್ರಹ್ಮಕಲಶೋತ್ಸವ

ಹುಬ್ಬಳ್ಳಿ: ಕಳತ್ತೂರು ಬ್ರಹ್ಮಶ್ರೀ ಉದಯ ತಂತ್ರಿವರ್ಯರ ನಿರ್ದೇಶನ ಹಾಗೂ ಪುರೋಹಿತರಾದ ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ಶ್ರೀ ಪ್ರಸನ್ನ ಮಹಾಗಣಪತಿಗೆ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ.13 ರಿಂದ 16 ರವರೆಗೆ ಇಲ್ಲಿನ ಇಂದಿರಾಗಾಜಿನ ಮನೆಯ ಆವರಣದ ಮುಂಭಾಗದ ಹು-ಧಾ ಬಂಟರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1974 ರಲ್ಲಿ ಸ್ಥಾಪನೆಗೊಂಡ …

Read More »

ಸಿದ್ದು ನಿಜ ಕನಸುಗಳು ಪುಸ್ತಕಕ್ಕೆ ಸಿಟಿ ಸಿವಿಲ್ ಕೋರ್ಟ್ ತಡೆ  

 ಸಿದ್ದು ನಿಜ ಕನಸುಗಳು ಪುಸ್ತಕಕ್ಕೆ ಸಿಟಿ ಸಿವಿಲ್ ಕೋರ್ಟ್ ತಡೆ  ನೀಡಿದೆ. ಕಾಂಗ್ರೆಸ್ ಕೋರ್ಟ್ ಮೊರೆ ಹೋಗಿದ್ದು, ಪುಸ್ತಕ ಬಿಡುಗಡೆ, ಮಾರಾಟ, ಮಾಧ್ಯಮ ಪ್ರಸಾರಕ್ಕೆ ತಡೆ ಹೇರಿದ್ದಾರೆ. ಸಿದ್ದು ನಿಜ ಕನಸುಗಳು ಪುಸ್ತಕ ಇಂದು ರಿಲೀಸ್ ಆಗಬೇಕಿದ್ದು, ಟೌಲ್​​ಹಾಲ್​​ನಲ್ಲಿ ಪುಸ್ತಕ ಬಿಡುಗಡೆ ನಿಗದಿಯಾಗಿತ್ತು.ಈ ಪುಸ್ತಕ ಸಿದ್ದರಾಮಯ್ಯ ಕುರಿತು ರಚನೆಯಾಗಿತ್ತು. ಪುಸ್ತಕದಲ್ಲಿ ಸಿದ್ದು ತೇಜೋವಧೆ ಮಾಡಿರೋ ಆರೋಪವಾಗಿದೆ.ಸಿದ್ದರಾಮಯ್ಯರನ್ನ ಕೆಟ್ಟದಾಗಿ ಬಿಂಬಿಸಿದ್ದಾರೆಂದು ಆರೋಪ  ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಪುಸ್ತಕ ರಿಲೀಸ್ ಮಾಡದಂತೆ ಮೊರೆ …

Read More »

ಲಕಮಾಪುರ ಗ್ರಾಮದಲ್ಲಿ 2.30 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ದೇಸಾಯಿ

ಧಾರವಾಡ: ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅನುದಾನದಡಿ ಅಂದಾಜು 2ಕೋಟಿ ರೂಪಾಯಿ ಅನುದಾನದಲ್ಲಿ ಗ್ರಾಮದ ಸ್ಥಳೀಯ ಹಳ್ಳಕ್ಕೆ (BCB) ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಂದಾಜು ಮೊತ್ತ 30 ಲಕ್ಷ ರೂಪಾಯಿ ಅನುದಾನದಲ್ಲಿ ಲಕಮಾಪೂರ-ಮುಳಮುತ್ತಲ ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ಅಮೃತ ದೇಸಾಯಿ ಅವರು ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ …

Read More »

ತಡರಾತ್ರಿ ಮನೆಗೆ ಬಂದ ಅತಿಥಿ: ದಂಗಾದ ಕುಟುಂಬಸ್ಥರು

ತುಮಕೂರು: ಆಹಾರ ಹರಸಿ ಗ್ರಾಮಕ್ಕೆ ಬಂದ ಚಿರತೆಯೊಂದು ಮನೆಯೊಳಗೆ ನುಗ್ಗಿ ಕುಟುಂಬಸ್ಥರನ್ನ ಬೆಚ್ಚಿ ಬೀಳಿಸಿದೆ.  ತುಮಕೂರು‌ ಜಿಲ್ಲೆ ಕುಣಿಗಲ್ ತಾಲ್ಲೂಕಿನ ಮುದ್ದಲಿಂಗಯ್ಯನ ದೊಡ್ಡಿ ಗ್ರಾಮದಲ್ಲಿ ಘಟನೆ ನಡದಿದೆ. ತಡರಾತ್ರಿ ಗ್ರಾಮದ ಶಿವಣ್ಣ ಎಂಬುವರ ಮನೆಗೆ ಚಿರತೆ ನುಗ್ಗಿದ್ದು ಕುಟುಂಬಸ್ಥರು ದಂಗಾಗಿದ್ದಾರೆ‌. ಕೂಡಲೇ ಶಿವಣ್ಣ ಕುಟುಂಬದವರು ಮನೆಯ ಹೊರಗೆ ಓಡಿ ಬಂದು ಬಾಗಿಲು ಹಾಕಿಕೊಂಡಿದ್ದಾರೆ‌. ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ತಂಡ ಚಿರತೆಗೆ ಅರವಳಿಕೆ‌ ಮದ್ದು‌ನೀಡಿ ಸೆರೆ …

Read More »

ಅರಗ ಮನೆಯಲ್ಲಿ ಕಂತೆ-ಕಂತೆ ನೋಟುಗಳ ಜೊತೆ ಸ್ಯಾಂಟ್ರೋ ರವಿ ಫೋಟೋ-  ಹೆಚ್.ಡಿ.ಕೆ ಆರೋಪ

ಬೀದರ್: ಸ್ಯಾಂಟ್ರೋ ರವಿ ಜೊತೆಗೆ ಸಚಿವರು, ಬಿಜೆಪಿ  ನಾಯಕರು ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳ ವೈರಲ್ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕಂತೆ-ಕಂತೆ ನೋಟುಗಳ ಜೊತೆ ಸ್ಯಾಂಟ್ರೋ ರವಿ ಫೋಟೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆರಗ ಮನೆಯಲ್ಲಿ ಹಣದ ಲೆಕ್ಕ ಹಾಕುತ್ತಿರುವ ಫೋಟೋ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೀದರ್​ ಜಿಲ್ಲೆ ಬಸವಕಲ್ಯಾಣದಲ್ಲಿ ಇಂದು(ಜನವರಿ 08) ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್​.ಡಿ.ಕುಮಾರಸ್ವಾಮಿ, ಗೃಹ ಸಚಿವರ ಮನೆಯಲ್ಲಿ …

Read More »

ಡಿವೈನ್ ಬ್ಲಾಕ್ ಬಸ್ಟರ್ 100 ದಿನಗಳ ಆಚರಣೆ, ಕಾಂತಾರ

 Bangalore: ಕಾಂತಾರ ಸಿನಿಮಾ ರಿಲೀಸ್ ಆಗಿ 100 ದಿನಗಳನ್ನು ಪೂರೈಸಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೊಡ್ಡ ಮಟ್ಟದ ಸಕ್ಸಸ್ ಕಂಡಿರುವ ಕಾಂತಾರ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಕಾಂತಾರ ಅನೇಕ ದಾಖಲೆಗಳನ್ನು ಬರೆದಿದೆ. ಕೆಜಿಎಫ್ ಬಳಿಕ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಬಂದ ಬಹು ದೊಡ್ಡ ಸಕ್ಸಸ್‌ನ ಸಿನಿಮಾ.  ಕಾಂತಾರ ಮೊದಲು …

Read More »

ಧಾರವಾಡ ನಿವಾಸಿಗಳಿಂದ ಮೂಲಭೂತ ಸೌಲಭ್ಯಗಳಿಗಾಗಿ ರಾಷ್ಟ್ರಿಯ ಹೆದ್ದಾರಿ ತಡೆದು ಹೋರಾಟ.

 ಧಾರವಾಡ  :  ಗೋವಾ ರಸ್ತೆಗೆ ಹೊಂದಿಕೊಂಡು ಇರುವಂತಹ ಪ್ರತಿಷ್ಠಿತ ಆದಿತ್ಯ ಪಾರ್ಕ್, ಜಿಲ್ಲಾಡಳಿತ ಹಾಗೂ  ಮಹಾನಗರ ಪಾಲಿಕೆಯ ನಿರ್ಲಕ್ಷಕ್ಕೆ ಒಳಗಾಗಿದೆ. ಇದನ್ನು ಖಂಡಿಸಿ ಆದಿತ್ಯ ಪಾರ್ಕ್ ನಿವಾಸಿಗಳು ತಮ್ಮ ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದು ಮಾಡುವ ಮೂಲಕ ತಮ್ಮ ಅಸಮಾಧಾನದ ಹೋರಾಟವನ್ನು ಮಾಡಿದರು. ಆದಿತ್ಯ ಪಾರ್ಕ್ ಬಡಾವಣೆ ಸುಮಾರು 16 ವರ್ಷಗಳಿಂದ ಮೂಲಭೂತ ಸೌಲಭ್ಯಗಳಾದ  ರಸ್ತೆ ಡಾಂಬರಿಕಾರಣ, ಬಡಾವಣೆ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ, …

Read More »

ಕೊಪ್ಪಿಕರ ರೋಡ್ ದಲ್ಲಿ ಸ್ಕೂಟಿ ಕಳ್ಳತನ, ಖತರ್ನಾಕ್ ಕಳ್ಳನ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆ

ಹುಬ್ಬಳ್ಳಿ: ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್‌ನ್ನು, ಹಾಡಹಗಲೆ ಕಳ್ಳತನ ಮಾಡಿದ ಖತರ್ನಾಕ ಯುವಕನ ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು,,, ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಕೊಪ್ಪಿಕರ ರಸ್ತೆಯಲ್ಲಿ ಆಶಿಫ್ ಅಂಕಲಗಿ ಎನ್ನುವವರು ಸ್ಕೂಟಿಯನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಕೆಲಸಕ್ಕೆಂದು ಹೋಗಿದ್ದರು. ಆದ್ರೆ ಖತರ್ನಾಕ ಕಳ್ಳನೊಬ್ಬ ಸ್ಕೂಟಿ ಹ್ಯಾಂಡಲ್ ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಕಳ್ಳನ …

Read More »

ರಾಹುಲ್ ಗಾಂಧಿಗೆ ಓಪನ್ ಚಾಲೆಂಜ್ ಕೊಟ್ಟ ಜೋಶಿ

ಹುಬ್ಬಳ್ಳಿ: ಗೌರಿ ಲಂಕೇಶ್ ಹತ್ಯೆ ಮಾಡಿದವರು ಸನಾತನ ಧರ್ಮದವರು ಎಂದ ಸಿದ್ದುಗೆ ಜೋಶಿ ತಿರುಗೇಟು ನೀಡಿದ್ದಾರೆ. ಸನಾತನ ಧರ್ಮ ಅಂದರೆ ಹಿಂದೂ ಧರ್ಮ. ಇದರಲ್ಲಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ, ಹಿಂದೂ ದ್ವೇಷ ಮನೋಭಾವನೆ ಗೊತ್ತಾಗತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸನಾತನ ಧರ್ಮಕ್ಕೆ ಅಗಾಧವಾದ ಅರ್ಥ ಇದೆ. ಜಗತ್ತಿನಲ್ಲಿ ಬಹಳ ಜನ ಸನಾತನ ಧರ್ಮ ಅಧ್ಯಯನ ಮಾಡೋದಕ್ಕೆ ಭಾರತಕ್ಕೆ …

Read More »