ಶಿವಮೊಗ್ಗ: ಗಮಕ ಕಲೆಯಿಂದಲೇ ದೇಶದಲ್ಲೇ ಪ್ರಸಿದ್ಧಿ ಪಡೆದಿದ್ದ ಎಚ್.ಆರ್.ಕೇಶವಮೂರ್ತಿ ಅವರು (88) ನಿಧನರಾದರು. ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದರು. 1934ರ ಫೆ.22 ರಂದು ಹೊಸಹಳ್ಳಿ ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಮ್ಮ ದಂಪತಿಯ ಪುತ್ರರಾಗಿ ಜನಿಸಿದ ಇವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ-ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾಗಿ, 16 ನೇ ವಯಸ್ಸಿನಿಂದ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ …
Read More »ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರ ನಿರ್ಲಕ್ಷ್ಯ: ಖಾಕಿಗೆ ದೊಡ್ಡ ಸವಾಲು
ಹುಬ್ಬಳ್ಳಿ : ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಐಪಿಸಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೀಗಿದ್ದರೂ ಕೂಡ ಜನರು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಮೀಷನರೇಟ್ ನಿಂದ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಕೂಡ ಜನರು ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ಜನರನ್ನು ಚದರಿಸುವುದೇ ದೊಡ್ಡ ಸವಾಲಾಗಿದೆ. …
Read More »ತೆರುವು ಕಾರ್ಯಾಚರಣೆಯಲ್ಲಿ ಸಹ ತಾರತಮ್ಯ- ಹಿರಿಯ ವಕೀಲ
ಹುಬ್ಬಳ್ಳಿ : ಇಂದು ರಾಜ್ಯ ಸರ್ಕಾರ ಹಾಗೂ ಬಿಆರಟಿಎಸ್ ಅವರು ದರ್ಗಾ ತೆರವು ಮಾಡಿದ್ದಾರೆ. ಇಲ್ಲಿನ ದರ್ಗಾಕ್ಕೆ ಮಾತ್ರ ೪೪ ಮೀಟರ್ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಬೇರೆ ಸ್ಥಳಗಳಲ್ಲಿ ೩೫ ಮೀಟರ್ ಮಾತ್ರ ಇದೆ. ದರ್ಗಾ ಮುಂಭಾಗದಲ್ಲಿ ಶಾಸಕ ಬೆಲ್ಲದ ಅವರ ಜಾಗವಿದೆ. ಈ ದರ್ಗಾ ಉಳಿಸಿ ಬೆಲ್ಲದ ಅವರ ಜಾಗವನ್ನು ಯಾಕೆ ಒತ್ತುವರಿ ಮಾಡಲಿಲ್ಲ. ರಾಜಕೀಯ ಪ್ರಯತ್ನದಿಂದ ಅವರ ಜಾಗವನ್ನು ಬಿಟ್ಟು ನಮ್ಮ ದರ್ಗಾವನ್ನು ತೆರವು ಮಾಡಿದ್ದಾರೆ ಎಂದು …
Read More »ಅಲ್ಪಸಂಖ್ಯಾತರಿಗೆ ಕಷ್ಟ ಕೊಡುವುದು ಬಿಜೆಪಿ ಉದ್ದೇಶ: ಅನೀಲಕುಮಾರ್ ಪಾಟೀಲ
ಹುಬ್ಬಳ್ಳಿ: ಆಡಳಿತಾರೂಢ ಬಿಜೆಪಿ ಸರ್ಕಾರ ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟು ಹಾಕುತ್ತಿದೆ. ಲಕ್ಷಾಂತರ ಜನರ ಧಾರ್ಮಿಕ ಭಾವನೆಗೆ ದಕ್ಕೆ ಉಂಟುಮಾಡುವುದು ಮಾತ್ರವಲ್ಲದೆ ಕೋಮುವಾದ ಸೃಷ್ಟಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ದರ್ಗಾ, ಮಸೀದಿ, ದೇಗುಲ, ಚರ್ಚ್ ಯಾವುದೇ ಇದ್ದರೂ ಉಳಿಸುವ ಕಾರ್ಯವನ್ನು ಮಾಡಬೇಕು ಎಂದು ಹುಬ್ಬಳ್ಳಿ-ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅನೀಲಕುಮಾರ್ ಪಾಟೀಲ ಹೇಳಿದರು. ಭೈರಿದೇವರಕೊಪ್ಪದ ದರ್ಗಾ ತೆರವು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, …
Read More »ಕಾಮಗಾರಿ ಮುಗಿದಿದ್ದರೂ ಉದ್ದೇಶಪೂರ್ವಕವಾಗಿಯೇ ದರ್ಗಾ ತೆರವು: ಹಿಂಡಸಗೇರಿ
ಬಿ.ಆರ್.ಟಿ.ಎಸ್ ಕಾಮಗಾರಿಗೆ ದರ್ಗಾ ಯಾವುದೇ ರೀತಿಯಲ್ಲಿ ತೊಂದರೆ ಮಾಡಿದ್ದಿಲ್ಲ. ಅಲ್ಲದೇ ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಹೀಗಿದ್ದರೂ ಕೂಡ ಸರ್ಕಾರ ಅಂಧ ದರ್ಬಾರ ಮೂಲಕ ಬೇಕಾಬಿಟ್ಟಿಯಾಗಿ ದರ್ಗಾವನ್ನು ತೆರವು ಮಾಡಲು ನಿರ್ಧಾರ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದು ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೂರಾರು ವರ್ಷದ ಐತಿಹಾಸಿಕ ಪರಂಪರೆಗೆ …
Read More »ವೀರ ಸಾವರ್ಕರ್ ಅನ್ನು ಟಿಪ್ಪು ಸುಲ್ತಾನ್ ಗೆ ಹೋಲಿಸುವುದು ಮಾಡುವುದು ಸರಿಯಲ್ಲ : ಯತ್ನಾಳ್
ಬೆಳಗಾವಿ: ವೀರ ಸಾವರ್ಕರ್ ಅನ್ನು ಟಿಪ್ಪು ಸುಲ್ತಾನ್ ಗೆ ಹೋಲಿಸುವುದು ಮಾಡುವುದು ಸರಿಯಲ್ಲ. ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಾವರ್ಕರ್ ಭಾವಚಿತ್ರಕ್ಕೆ ಕಾಂಗ್ರೆಸ್ ಪಕ್ಷ ಮೃದು ಧೋರಣೆ ತೋರಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುದ್ಧಿ ಕಲಿತಂತೆ ತೋರ್ತಿದೆ. ರಾಹುಲ್ ಗಾಂಧಿಯೂ ಸಹ ಬುದ್ಧಿ ಕಲಿಯುವಂತಾಗಲಿ ಎಂದು ಹೇಳಿದರು.ರಾಜಕೀಯ ದುರುದ್ದೇಶ ಇಲ್ಲ: ಸಿಬಿಐ, …
Read More »ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆ
ವಿಜಯಪುರ: ವಿಜಯಪುರ ನಗರದ ದೇವಗಿರಿ ಸ್ಮಶಾನದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ. ಸ್ಮಶಾನದ ಬಾವಿಯಲ್ಲಿನ ಮೋಟರ್ ಸ್ಟಾರ್ಟ್ ಮಾಡಲು ಹೋದಾಗ ಶಿಶುವಿನ ಶವ ಪತ್ತೆಯಾಗಿದ್ದು, ಪಾಪಿಗಳು ಆಗತಾನೆ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಬಾವಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೆಣ್ಣು ಮಗುವಾಗಿದೆ ಎಂಬ ಕಾರಣಕ್ಕೆ ಬಾವಿಯಲ್ಲಿ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಯಾರು ಎಸೆದು ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಆದರ್ಶ ನಗರ ಪಿಎಸ್ಐ …
Read More »ಟಿಪ್ಪರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು
ದಾವಣಗೆರೆ: ಜಲ್ಲಿಕಲ್ಲು ಟಿಪ್ಪರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹೊನ್ನಾಯಕನಹಳ್ಳಿಯ ನಿವಾಸಿ, ಚಾಲಕ ಶಿವರಾಜ್(25), ಹೆಬ್ಬಾಳದ ನಿವಾಸಿ, ಕ್ಲೀನರ್ ತೇಜಸ್ ಕುಮಾರ್(32) ಮೃತ ದುರ್ದೈವಿಗಳು. ಮೃತರು ಕಳೆದ ಎರಡು ವರ್ಷಗಳಿಂದ ಕ್ವಾರೆಗಳಿಂದ ಜಲ್ಲಿ ಕಲ್ಲು ಸಾಗಿಸುತ್ತಿದ್ದರು. ಹೀಗೆ ಇಂದು (ಡಿ.20) ಜಲ್ಲಿ ಕಲ್ಲು ಸಾಗಿಸುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ಪಾಲಕರ ಜಗಳಕ್ಕೆ ಬೇಸತ್ತು ಮಗ ಆತ್ಮಹತ್ಯೆಗೆ ಶರಣು
ಮೈಸೂರು: ಅಪ್ಪ ಅಮ್ಮನ ಜಗಳದಿಂದ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕು ಹುಣಸನಾಳು ಗ್ರಾಮದಲ್ಲಿ ನಡೆದಿದೆ. ಮಹೇಂದ್ರ (20) ಮೃತ ದುರ್ದೈವಿ. ಮನೆಯಲ್ಲಿ ತಂದೆ ತಾಯಿಯ ನಡುವಿನ ಗಲಾಟೆ ಕಂಡು ಮಹೇಂದ್ರ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಜನವರಿ ತಿಂಗಳನಲ್ಲಿ 1500 ಎಎಇ ನೇಮಕಾತಿ
ಬೆಳಗಾವಿ- ಇಂಧನ ಇಲಾಖೆಯಲ್ಲಿ ಕರೆಯಲಾಗಿದ್ದ 1500 ಸಹಾಯಕ ಕಾರ್ಯಪಾಲಕ ಅಭಿಯಂತರ(ಎಎಇ) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆದೇಶವನ್ನು ಜನವರಿ ತಿಂಗಳ ಮೊದಲ ವಾರದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್ಕುಮಾರ್ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಶಾಸಕ ಎಸ್.ಸುರೇಶ್ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಇಇ ಹುದ್ದೆಗಳಿಗೆ ನೇರನೇಮಕಾತಿಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಇ)ಕ್ಕೆ ನೀಡಲಾಗಿತ್ತು. ಕೆಲವು ಕಾರಣದಿಂದ ಪರೀಕ್ಷೆ ಫಲಿತಾಂಶ ತಡವಾಗಿದೆ ಎಂದು ಒಪ್ಪಿಕೊಂಡರು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





