ನೆಲಮಂಗಲ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬಿಎಲ್ಒಗಳ ಮತ್ತೊಂದು ಕಳ್ಳಾಟ ಬಯಲಾಗಿದೆ. ನಿಯಮದಂತೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕಿದ್ದ ಅಧಿಕಾರಿಗಳು, ನೆಲಮಂಗಲ ನಗರದ ಮಸೀದಿಯೊಂದರಲ್ಲಿ ಕುಳಿತಲ್ಲೇ ಪರಿಷ್ಕರಣೆ ನಡೆಸಿದ್ದಾರೆ. ಮಸೀದಿಗೆ ಸಾರ್ವಜನಿಕರು ಹಾಗೂ ಮಹಿಳೆಯರನ್ನು ಕರೆಸಿಕೊಂಡ ಬಿಎಲ್ಒಗಳು, ಅಲ್ಲಿಯೇ ಅವರಿಂದ ಮಾಹಿತಿ ಪಡೆದು ಎಸ್ಐಆರ್ ಪತ್ರಗಳನ್ನು ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಒಂದೇ ಸೂರಿನಡಿ ಜನರನ್ನು ಗುಂಪುಗೂಡಿಸಿ ನಿಯಮ …
Read More »ಒಂದೇ ಕುಟುಂಬದ ಮೂವರು ನೇಣಿಗೆ ಶರಣು!
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗಾವತಿಯ ಪ್ರಶಾಂತನಗರದ ಮನೆಯಲ್ಲಿ ಪ್ರಕಾಶ್ ರಾಯ್ಕರ್ (54), ಪತ್ನಿ ಪ್ರಭಾ (46) ಹಾಗೂ ಪುತ್ರ ಶಶಾಂಕ್ (21) ಮೃತರಾಗಿದ್ದಾರೆ. ಪ್ರಕಾಶ್ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದು, ಸಾಲಬಾಧೆಯೇ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಪೊಲೀಸರ ಪ್ರಕಾರ, ಬ್ಯಾಂಕ್ ವಶಪಡಿಸಿಕೊಂಡಿದ್ದ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿದ ಕುಟುಂಬ ಅಲ್ಲಿಯೇ ನೇಣು ಬಿಗಿದುಕೊಂಡಿದೆ. ಪ್ರಕರಣ ಸಂಬಂಧ …
Read More »ಉದ್ಯಮಿಯ ಬ್ಲ್ಯಾಕ್ ಮೇಲ್ ಆರೋಪ: ಮಹಿಳೆಯ ಬಂಧನ
ಉಡುಪಿ: ಅಶ್ಲೀಲ ವಿಡಿಯೋಗಳಿವೆ ಎಂದು ಬೆದರಿಸಿ ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಲು ಯತ್ನಿಸಿದ ಆರೋಪದಲ್ಲಿ ಝೀನತ್ ಇಬ್ರಾಹೀಂ ಎಂಬ ಮಹಿಳೆಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದ ನೆಪದಲ್ಲಿ ಉದ್ಯಮಿಯಿಂದ ₹70 ಲಕ್ಷ ಪಡೆದು ದುರ್ಬಳಕೆ ಮಾಡಿದ್ದು, ಬಳಿಕ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹಾಗೂ ಖಾಸಗಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಬ್ಲ್ಯಾಕ್ಮೇಲ್ ನಡೆಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ …
Read More »ಪ್ರೀತಿ ನಿರಾಕರಿಸಿದ ಅಪ್ರಾಪ್ತೆ ಮೇಲೆ ಆಟದ ಮೈದಾನದಲ್ಲೇ ಹಲ್ಲೆ ನಡೆಸಿದ ತಿಕ್ಕಲು ಪ್ರೇಮಿ!
ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರೀತಿ ನಿರಾಕರಿಸಿದ ಅಪ್ರಾಪ್ತ ಬಾಲಕಿಯ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿ ಕಾಲಿನಿಂದ ತುಳಿದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬಾಣಾವರ ಮೂಲದ ಪುನೀತ್ ಎಂಬಾತ ಬಾಲಕಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕ್ರೀಡಾಂಗಣದಲ್ಲಿ ಮತ್ತೆ ಪ್ರೀತಿಸುವಂತೆ ಒತ್ತಾಯಿಸಿದಾಗ ಬಾಲಕಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಆರೋಪಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು …
Read More »ಬೆಂಗಳೂರಲ್ಲಿ ಪಾರ್ಟಿಗೆ ಯುವತಿ ಕರೆಸಿ ಲೈಂಗಿಕ ದೌರ್ಜನ್ಯ..!
ಬೆಂಗಳೂರು: ಪಾರ್ಟಿ ಮಾಡುವ ನೆಪದಲ್ಲಿ ಯುವತಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪದ ಮೇಲೆ ತಲಘಟ್ಟಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಯುವತಿಗೆ ಮೊದಲೇ ಪರಿಚಿತರಾಗಿದ್ದು, ಸೋಮಶೇಖರ್ ಎಂಬಾತ ಸ್ನೇಹಿತರನ್ನು ಭೇಟಿಯಾಗುವ ನೆಪದಲ್ಲಿ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ಪಾರ್ಟಿ ವೇಳೆ ಅಂಬರೀಶ ಎಂಬಾತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ರಕ್ಷಿಸಿ, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಸೋಮಶೇಖರ್, ಅಂಬರೀಶ ಸೇರಿದಂತೆ …
Read More »ಪತಿಯನ್ನು ಕೊಂದು ಬಾತ್ರೂಂ ನೆಲದಡಿ ಹೂತ ಪಾಪಿ ಪತ್ನಿ..! 45 ದಿನಗಳ ಬಳಿಕ ಭೀಕರ ಸತ್ಯ ಬಯಲು
ಉತ್ತರ ಪ್ರದೇಶದ ಆಗ್ರಾದಲ್ಲಿ ಪತಿಯನ್ನು ಕೊಲೆ ಮಾಡಿ ಮನೆಯ ಬಾತ್ರೂಂ ನೆಲದಡಿ ಶವವನ್ನು ಹೂತ ಆರೋಪದ ಮೇಲೆ ಪತ್ನಿ ರೂಬಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 45 ದಿನಗಳಿಂದ ನಾಪತ್ತೆಯಾಗಿದ್ದ ಸುರೇಂದ್ರ ಶರ್ಮಾ ಅವರ ಶವವನ್ನು ಮನೆಯ ಬಾತ್ರೂಂ ನೆಲ ಅಗೆದು ಹೊರತೆಗೆಯಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಪತಿಗೆ ನಿದ್ರೆ ಮಾತ್ರೆ ಬೆರೆಸಿದ ಆಹಾರ ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಬಳಿಕ …
Read More »ಬೆಂಗಳೂರಲ್ಲಿ ಖತರ್ನಾಕ್ ಗಾಂಜಾ ಪೆಡ್ಲರ್ ಅರೆಸ್ಟ್: ಆರೋಪಿ ಮನೆಯಲ್ಲಿ ಸಿಕ್ಕಿತು 230 ಮೊಬೈಲ್, 17 ಮಾರಕಾಸ್ತ್ರ!
ಬೆಂಗಳೂರು: ಬ್ಯಾಟರಾಯನಪುರ ಪೊಲೀಸರು ಅಕ್ಬರ್ ಶರೀಫ್ ಎಂಬ ಡ್ರಗ್ ಪೆಡ್ಲರ್ನನ್ನು ಬಂಧಿಸಿ, ಆತನಿಂದ 17 ಮಾರಕಾಸ್ತ್ರಗಳು, 230 ಆಂಡ್ರಾಯ್ಡ್ ಮೊಬೈಲ್ಗಳು ಹಾಗೂ 700 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ತಡರಾತ್ರಿ ಅನುಮಾನಾಸ್ಪದವಾಗಿ ಬೈಕ್ನಲ್ಲಿ ಸಂಚರಿಸುತ್ತಿದ್ದ ವೇಳೆ ಆತನನ್ನು ತಡೆದು ಪರಿಶೀಲಿಸಿದಾಗ ಆಯುಧಗಳು ಪತ್ತೆಯಾಗಿದ್ದು, ಬಳಿಕ ಮನೆ ಮೇಲೆ ದಾಳಿ ನಡೆಸಿದಾಗ ಮತ್ತಷ್ಟು ವಸ್ತುಗಳು ಸಿಕ್ಕಿವೆ. ವಿಚಾರಣೆ ವೇಳೆ ಗಾಂಜಾ ಮಾರಾಟದ ವೇಳೆ ರಕ್ಷಣೆಗಾಗಿ ಆಯುಧಗಳನ್ನು ಇಟ್ಟುಕೊಂಡಿದ್ದಾಗಿ ಆರೋಪಿ ಹೇಳಿದ್ದಾನೆ. ವಶಪಡಿಸಿಕೊಂಡಿರುವ 230 …
Read More »KR Circle ಬಳಿ ಎರಡು ಬಿಎಂಟಿಸಿ ಬಸ್ಗಳ ನಡುವೆ ಭೀಕರ ಅಪಘಾತ, ಪ್ರಯಾಣಿಕರ ರಕ್ಷಣೆಗೆ ಹರಸಾಹಸ!
ಬೆಂಗಳೂರು: ಕೆ.ಆರ್. ಸರ್ಕಲ್ನಲ್ಲಿ ಸಿಗ್ನಲ್ನಲ್ಲಿ ನಿಂತಿದ್ದ ವಾಯು ವಜ್ರ (ವೋಲ್ವೋ) ಬಸ್ಗೆ ಹಿಂಬದಿಯಿಂದ ಬಂದ ಸಾಮಾನ್ಯ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಸಾಮಾನ್ಯ ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕನಿಗೂ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ ಹಲವು ಪ್ರಯಾಣಿಕರು ಬಸ್ನೊಳಗೆ ಸಿಲುಕಿಕೊಂಡಿದ್ದು, ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಹರಸಾಹಸಪಟ್ಟು ಅವರನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯೊಬ್ಬರ ಕಾಲು ಸಿಲುಕಿಕೊಂಡಿದ್ದರಿಂದ ಕಬ್ಬಿಣದ ಭಾಗಗಳನ್ನು …
Read More »ತುಮಕೂರಲ್ಲಿ ಘೋರ ದುರಂತ : ‘SIR’ ಚುನಾವಣೆವೆ ತೆರಳುತ್ತಿದ್ದ ಮಹಿಳಾ ವಿಎಒ ಅಪಘಾತಕ್ಕೆ ಬಲಿ
ತುಮಕೂರು: ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಗೂಳೂರು ಗ್ರಾಮ ಆಡಳಿತಾಧಿಕಾರಿ (VAO) ಭಾವನ (26) ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೂಳೂರು ಬಳಿ ಅಪರಿಚಿತ ವಾಹನವೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ತೀವ್ರ ಗಾಯಗೊಂಡ ಭಾವನ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ವಾಹನ ಹಾಗೂ ಚಾಲಕನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
Read More »ದಾವಣಗೆರೆ: ಮನೆಗಳ್ಳತನ ಪ್ರಕರಣದ ಆರೋಪಿಯಿಂದ ₹ 6 ಲಕ್ಷ ಮೌಲ್ಯದ ಸ್ವತ್ತು ವಶ
ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಜೀತ್ ಸಿಂಗ್ ಟಾಂಕ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ₹6 ಲಕ್ಷ ಮೌಲ್ಯದ 2 ಕೆ.ಜಿ. 900 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ. ಜೂನ್ 14ರಂದು ಮನೆಯ ಹಿಂಬಾಗಿಲನ್ನು ಕಬ್ಬಿಣದ ಆಯುಧದಿಂದ ಮುರಿದು, ಮಲಗುವ ಕೊಠಡಿಯಲ್ಲಿ ಇಟ್ಟಿದ್ದ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





