Breaking News

ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು

ಮೈಸೂರು: ಕೇರಳದಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಪಡೆದಿದ್ದ 31 ವರ್ಷದ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ, ಮೈಸೂರಿನ ನಂಜನಗೂಡಿನಲ್ಲಿ ಡ್ರಗ್ಸ್ ಪೆಡ್ಲರ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ನೂರಾರು ಯುವಕರಿಗೆ ಕೃಷಿ ಸ್ಪೂರ್ತಿಯಾಗಿದ್ದ ಈತ ಡ್ರಗ್ಸ್ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ನಂಜನಗೂಡಿನ ಕುರಿಹುಂಡಿ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಬಾಳೆ ಬೆಳೆದಿದ್ದ ಧನೇಶ್, ಬಾಳೆ ಗೊನೆಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಾಟ ಮಾಡುತ್ತಿದ್ದ. ಕಾರ್ಯಾಚರಣೆ ನಡೆಸಿದ ಕೇರಳ ಪೊಲೀಸರು 720 ಗ್ರಾಂ ಎಂಡಿಎಂಎ ಹಾಗೂ 800 ಎಂಎಲ್ ಹ್ಯಾಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಅಪರಿಚಿತರಿಗೆ ಜಮೀನು ಗುತ್ತಿಗೆ ನೀಡುವ ಮುನ್ನ ರೈತರು ಎಚ್ಚರಿಕೆ ವಹಿಸಬೇಕು ಎಂದು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ಮನವಿ ಮಾಡಿದ್ದಾರೆ.

Share News

About BigTv News

Check Also

ಲೇಡಿಸ್ ಹಾಸ್ಟೆಲ್​​​​​​​​​​​​​​​​​​​​​​​​​​​​​​​​​​​​​ ಈತನ ಟಾರ್ಗೆಟ್: ವಿದ್ಯಾರ್ಥಿನಿಯರ ಮುಂದೆ ಅಪರಿಚಿತನಿಂದ ಅಸಭ್ಯ ವರ್ತನೆ

ಹಾವೇರಿ: ಅಪರಿಚಿತ ವ್ಯಕ್ತಿಯೊಬ್ಬ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ಕೆರಿಮತ್ತಿಹಳ್ಳಿ ಬಳಿಯ ಸ್ನಾತಕೋತ್ತರ …

Leave a Reply

Your email address will not be published. Required fields are marked *