ಮಂಗಳೂರು: ದಾವಣಗೆರೆಯಿಂದ ₹1.15 ಕೋಟಿ ನಗದು ಹಣದೊಂದಿಗೆ ಮಂಗಳೂರಿಗೆ ಬಂದಿದ್ದ ಸತ್ಯನಾರಾಯಣ ಎಂಬವರನ್ನು ಕಾರಿನಲ್ಲಿ ಅಪಹರಿಸಿ, ಹಣ ಹಾಗೂ ಎರಡು ಮೊಬೈಲ್ಗಳನ್ನು ದರೋಡೆ ಮಾಡಿರುವ ಘಟನೆ ನಡೆದಿದೆ. ಅ.28ರಂದು ಬೆಳಿಗ್ಗೆ ಲಾಲ್ಬಾಗ್ನ ರಾಮಕೃಷ್ಣ ಹಾಸ್ಟೆಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಕಪ್ಪು ಕಾರಿನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಅವರನ್ನು ಬಲವಂತವಾಗಿ ಅಪಹರಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿ, ಹಣವಿದ್ದ ಎರಡು ಬ್ಯಾಗ್ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಕಾವೂರು ಬಳಿಯ ನಿರ್ಜನ …
Read More »ಆನ್ಲೈನ್ ಆಯಪ್ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!
ಮಂಗಳೂರು: ಆನ್ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ವಿವಿಧ ಸಾಲದ ಆಯಪ್ಗಳಿಂದ ₹2 ಲಕ್ಷ ಸಾಲ ಪಡೆದು, ಬಡ್ಡಿ ಸೇರಿ ₹2.15 ಲಕ್ಷ ಮರುಪಾವತಿಸಿದ್ದರು. ಸಾಲ ತೀರಿಸಿದ ಬಳಿಕವೂ ವಂಚಕರು ಆಕೆಯ ಖಾತೆಗೆ ₹5 ಸಾವಿರ, ₹10 ಸಾವಿರ ಹಾಗೂ ₹30 ಸಾವಿರ ವರ್ಗಾಯಿಸಿ, ಬಡ್ಡಿ ಸಮೇತ ಹಣ …
Read More »ಮಂಗಳೂರು: ದಾವಣಗೆರೆಯ ವ್ಯಕ್ತಿ ಅಪಹರಿಸಿ ₹1.15 ಕೋಟಿ ದರೋಡೆ, ಎಫ್ಐಆರ್ ದಾಖಲು
ಮಂಗಳೂರು: ದಾವಣಗೆರೆಯಿಂದ ₹1.15 ಕೋಟಿ ಹಣದೊಂದಿಗೆ ಮಂಗಳೂರಿಗೆ ಬಂದಿದ್ದ ಸತ್ಯನಾರಾಯಣ ಎಂಬವರನ್ನು ಅಪಹರಿಸಿ, ಹಣ ಹಾಗೂ ಎರಡು ಮೊಬೈಲ್ಗಳನ್ನು ದರೋಡೆ ಮಾಡಿರುವ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.28ರಂದು ಬೆಳಿಗ್ಗೆ ಲಾಲ್ಬಾಗ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮುಖಕ್ಕೆ ಮುಸುಕು ಧರಿಸಿದ್ದ ನಾಲ್ವರು ಕಪ್ಪು ಕಾರಿನಲ್ಲಿ ಸತ್ಯನಾರಾಯಣ ಅವರನ್ನು ಅಪಹರಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿ, ಅವರ ಬಳಿಯಿದ್ದ ಹಣದ ಬ್ಯಾಗ್ಗಳು ಹಾಗೂ ಮೊಬೈಲ್ಗಳನ್ನು ಕಸಿದುಕೊಂಡಿದ್ದಾರೆ. …
Read More »ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ, ಓರ್ವನಿಗೆ ಮೂರು ವರ್ಷ ಶಿಕ್ಷೆ
ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ರಾಕೇಶ್ (26) ಎಂಬ ಯುವಕನನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ಓರ್ವನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2019ರ ಜನವರಿ 2ರಂದು ಸುನೀಲ್ ಕುಮಾರ್ ತನ್ನ ಸ್ನೇಹಿತರಾದ ಪ್ರವೀಣ್, ಪ್ರೀತಮ್ ಹಾಗೂ ರೋಹಿತ್ ಜೊತೆ ಸೇರಿ ರಾಕೇಶ್ ಹತ್ಯೆಗೆ ಸಂಚು ರೂಪಿಸಿದ್ದ. ಬಳಿಕ ತಲವಾರಿನಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ …
Read More »ರಾಯಚೂರು: ಸಾಲಕ್ಕೆ ಸಿಗರೇಟ್ ಕೊಡಲ್ಲ ಎಂದ ಅಂಗಡಿ ಮಾಲೀಕ, ನಡುರಸ್ತೆಯಲ್ಲೇ ಕೊಚ್ಚಿ ಕೊಂ* ಹಂತಕ!
ರಾಯಚೂರು: ಸಾಲವಾಗಿ ಸಿಗರೇಟ್ ನೀಡದ ವಿಚಾರಕ್ಕೆ ಟೀ ಸ್ಟಾಲ್ ಮಾಲೀಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಗರದ ಎಲ್ಬಿಎಸ್ ನಗರದಲ್ಲಿ ನಡೆದಿದೆ. ಮೃತರನ್ನು ನರಸಿಂಹಯ್ಯ ಶೆಟ್ಟಿ (40) ಎಂದು ಗುರುತಿಸಲಾಗಿದೆ. ಎಲ್ಬಿಎಸ್ ನಗರ ಸರ್ಕಲ್ನಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ಅವರು, ಅಂಗಡಿ ಬಳಿ ಕಸ ಸ್ವಚ್ಛಗೊಳಿಸುತ್ತಿದ್ದ ವೇಳೆ ಆರೋಪಿ ತಿಲಕ್ ಸಿಂಗ್ ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಸಿಗರೇಟ್ಗೆ ಹಣ ಕೇಳಿದ್ದಕ್ಕೆ ಆಕ್ರೋಶಗೊಂಡ ಆರೋಪಿ, ನರಸಿಂಹಯ್ಯ ಶೆಟ್ಟಿ ಮೇಲೆ …
Read More »ಕಾಸರಗೋಡು : ಲಾಡ್ಜ್ ನಲ್ಲಿ ಎಂಡಿಎಂಎ ಮಾದಕ ದ್ರವ್ಯ ಸಹಿತ ಇಬ್ಬರು ಪೊಲೀಸರ ವಶಕ್ಕೆ!
ಕಾಸರಗೋಡು: ಲಾಡ್ಜ್ವೊಂದರಲ್ಲಿ ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಯುವತಿ ಹಾಗೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶೆರೀಫಾ (35) ಮತ್ತು ಮುಹಮ್ಮದ್ ರಾಫಿ (31) ಎಂದು ಗುರುತಿಸಲಾಗಿದೆ. ಕಾಸರಗೋಡು ಟೌನ್ ಸಬ್ಇನ್ಸ್ಪೆಕ್ಟರ್ ಪಿ.ವಿ. ಮನು ನೇತೃತ್ವದಲ್ಲಿ ಜಿಲ್ಲಾ ಮಾದಕ ದ್ರವ್ಯ ನಿರೋಧಕ ವಿಶೇಷ ಕಾರ್ಯಪಡೆ ಹಾಗೂ ನಾರ್ಕೋಟಿಕ್ಸ್ ಸೆಲ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Read More »ಅತ್ಯಾಚಾರ ಎಸೆಗಿದವರ ಮೇಲೆ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!
ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ ಕೊಲೆಗೆ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ಹಾಗೂ ಆಕೆಯ ಸ್ನೇಹಿತರು ಸೇರಿ ಮಹೇಂದ್ರ ಮತ್ತು ತರುಣ್ ಅವರನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾರೆ. ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದು, ಒಬ್ಬನನ್ನು ಕೊಲೆ ಮಾಡಿ ಮತ್ತೊಬ್ಬನಿಂದ ಡೆತ್ನೋಟ್ ಬರೆಸಿ ಆತ್ಮಹತ್ಯೆಯಂತೆ ಬಿಂಬಿಸಲು ಸಂಚು ರೂಪಿಸಿದ್ದರು …
Read More »ಸ್ನೇಹಿತನ ಗರ್ಲ್ಫ್ರೆಂಡ್ ರೇಪ್ ಮಾಡಿದವನಿಗೆ ಬುದ್ದಿಕಲಿಸಲು ಹೋಗಿ 11 ಮಂದಿ ಅಂದರ್
ಬೆಂಗಳೂರು: ಸ್ನೇಹಿತನ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಮಹೇಂದ್ರ ಹಾಗೂ ಆತನ ಸ್ನೇಹಿತ ತರುಣ್ನನ್ನು ಅಪಹರಿಸಿದ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಸೇರಿದಂತೆ 11 ಮಂದಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರದ ವಿಷಯ ತಿಳಿದ ಬಳಿಕ ಯುವತಿ ಹಾಗೂ ಆಕೆಯ ಸ್ನೇಹಿತರು ಸೇರಿ ಅ.28ರಂದು ಇಬ್ಬರನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾರೆ. ಬಳಿಕ ಮಹೇಂದ್ರನ ತಂದೆಗೆ ಕರೆ ಮಾಡಿ ₹10 ಲಕ್ಷ ಹಣಕ್ಕೆ ಬೇಡಿಕೆ …
Read More »ಹಳೇ ದ್ವೇಷ: ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದ ಬಾಲಕ!
ಬೆಂಗಳೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಬಾಲಕರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದಲ್ಲಿ 16 ವರ್ಷದ ಬಾಲಕನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಸಂದ್ರದಲ್ಲಿ ಅ.21ರಂದು ಘಟನೆ ನಡೆದಿದೆ. ಒಂದು ತಿಂಗಳ ಹಿಂದೆ ನಡೆದ ಸಣ್ಣ ಗಲಾಟೆಯ ದ್ವೇಷದಿಂದ ಆರೋಪಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿದ್ದಾನೆ. ಜಗಳ ಬಿಡಿಸಲು ಬಂದ ಸ್ನೇಹಿತನಿಗೂ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು …
Read More »ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ
ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ ನಾಗರತ್ನ (42) ಹಾಗೂ ಹೇಮಂತ್ (41) ಎಂಬವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿ ಆಪ್ ಮೂಲಕ ಪರಿಚಯವಾದ ನಾಗರತ್ನಳ ಮದುವೆ ಪ್ರಸ್ತಾಪವನ್ನು ಪ್ರದೀಪ್ ನಿರಾಕರಿಸಿದ್ದರು. ಬಳಿಕ ತನ್ನ ಕಷ್ಟಗಳನ್ನು ಹೇಳಿಕೊಂಡು 2024ರ ಜನವರಿಯಿಂದ 2026ರ ಜನವರಿವರೆಗೆ ಹಂತ ಹಂತವಾಗಿ ಹಣ ಪಡೆದಿದ್ದಾಳೆ. ಹಣ ವಾಪಸ್ ಕೇಳಿದಾಗ ಅಕ್ರಮ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





