ಸಾಲದ ಹಣ ವಾಪಸ್ ನೀಡುವುದಾಗಿ ನಂಬಿಸಿ 70 ವರ್ಷದ ವೃದ್ಧೆ ರೆಡ್ಡಮ್ಮ ಅವರನ್ನು ಕರೆಸಿಕೊಂಡು ಭೀಕರವಾಗಿ ಹತ್ಯೆ ಮಾಡಿದ ಘಟನೆ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ತಿಮ್ಮರಾಜು ಮತ್ತು ಮುನಿರಾಜು ಎಂಬ ಆರೋಪಿಗಳು ಮೇ 17ರಂದು ವೃದ್ಧೆಯನ್ನು ಕೊಲೆ ಮಾಡಿ, ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಚಾರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದರು ಎನ್ನಲಾಗಿದೆ. ವೃದ್ಧೆ ನಾಪತ್ತೆ ಪ್ರಕರಣದ ತನಿಖೆ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ …
Read More »6 ಸಾವಿರ ಕೊಟ್ರೆ ಒಂದು ವಿಷಯ ಪಾಸ್: ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮತ್ತೊಂದು ಕಳ್ಳಾಟ ಬಯಲು
ಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಹಣ ಪಡೆದು ಉತ್ತೀರ್ಣಗೊಳಿಸುವ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ವಿಶ್ವವಿದ್ಯಾಲಯದ ಕೆಲ ಸಿಬ್ಬಂದಿಯೇ ಈ ಅಕ್ರಮದಲ್ಲಿ ಭಾಗಿಯಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಒಂದು ವಿಷಯಕ್ಕೆ ₹6 ಸಾವಿರ ನಿಗದಿ ಮಾಡಿ ಹಣ ಪಡೆದರೆ ಫೇಲ್ ಆದ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ರೀತಿ ಹಲವು ವರ್ಷಗಳಿಂದ ದಂಧೆ ನಡೆಯುತ್ತಿದ್ದು, ಹಲವರು ಹಣ ನೀಡಿ ಉತ್ತೀರ್ಣರಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. …
Read More »ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನ ಸಾಗಾಟ: ಬೆಂಗಳೂರು ಏರ್ ಪೋರ್ಟ್ ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ಜಪ್ತಿ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ₹1.37 ಕೋಟಿ ಮೌಲ್ಯದ 899.50 ಗ್ರಾಂ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಬಂದ ಪ್ರಯಾಣಿಕನ ಬಳಿ 4 ಕ್ಯಾಪ್ಸುಲ್ಗಳಲ್ಲಿ ಅಡಗಿಸಿ ಚಿನ್ನ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬ್ಯಾಂಕಾಕ್ನಿಂದ ಆಗಮಿಸಿದ್ದ ಪ್ರಯಾಣಿಕನ ಬಳಿ ₹1.75 ಕೋಟಿ ಮೌಲ್ಯದ ಗಾಂಜಾ ಪತ್ತೆಯಾಗಿದ್ದು, ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ …
Read More »ಶಿವಮೊಗ್ಗ : ಜೈಲಲ್ಲಿದ್ದಾಗ ನೋಡಲು ಬಂದಿಲ್ಲವೆಂದು ಪತ್ನಿಗೆ ಬೆದರಿಸಲು ಕಳುಹಿಸಿದ್ದ ಬುರ್ಖಾಧಾರಿಗಳಿಗೆ ಹಿಗ್ಗಾಮುಗ್ಗಾ ಥಳಿತ!
ಶಿವಮೊಗ್ಗ: ಮಹಿಳೆಗೆ ಬೆದರಿಕೆ ಹಾಕಲು ಬುರ್ಖಾ ಧರಿಸಿ ಬಂದಿದ್ದ ನಾಲ್ವರಲ್ಲಿ ಮೂವರನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗದ ಕೆ.ಆರ್. ಪುರಂ ರಸ್ತೆಯಲ್ಲಿ ನಡೆದಿದೆ. ಬಂಧಿತರನ್ನು ಬೊಮ್ಮನಕಟ್ಟೆಯ ಅಸ್ಲಾಂ, ಮಹೇಶ್ ಹಾಗೂ ದರ್ಶನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಮಹಿಳೆಯನ್ನು ಹೆದರಿಸುವ ಉದ್ದೇಶದಿಂದ ಇವರು ಬಂದಿದ್ದರು ಎನ್ನಲಾಗಿದೆ. ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಯೊಬ್ಬ ತನ್ನ ಪತ್ನಿಗೆ ಬೆದರಿಕೆ ಹಾಕಲು ಜೈಲಿನಿಂದಲೇ ಸೂಚನೆ ನೀಡಿದ್ದಾನೆ ಎಂಬ ಆರೋಪ …
Read More »ಕೋರ್ಟ್ ಎದುರೇ ರೌಡಿಶೀಟರ್ ಕೊಲೆ – ಹತ್ತು ಮಂದಿ ಆರೋಪಿಗಳು ಅರೆಸ್ಟ್!
ಹಾಸನ: ನಟೋರಿಯಸ್ ರೌಡಿಶೀಟರ್ ಆವಲಹಳ್ಳಿ ಮಂಜೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಪೊಲೀಸರು 10 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಜೂನ್ 7ರ ತಡರಾತ್ರಿ ಹಾಸನ ಜಿಲ್ಲಾ ನ್ಯಾಯಾಲಯದ ಎದುರು ಮಂಜೇಶ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಮಂಜೇಶ್ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ಹಳೆಯ ದ್ವೇಷ ಹಾಗೂ ಗ್ಯಾಂಗ್ವಾರ್ ಹಿನ್ನೆಲೆ ಕುರಿತು …
Read More »ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಬೆಂಗಳೂರು ಮಹಿಳೆ:ಕಾರು ಹರಿದು ವ್ಯಕ್ತಿ ದುರ್ಮರಣ
ರಾಣೆಬೆನ್ನೂರು: ಮಹಿಳೆಯೊಬ್ಬರು ಕಾರು ನಿಲ್ಲಿಸುವಾಗ ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಪರಿಣಾಮ ಎದುರಿಗಿದ್ದ ವ್ಯಕ್ತಿ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ತಾಲೂಕಿನ ಚೌಡಯ್ಯ ದಾನಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಅಜ್ಜಪ್ಪ ಶಿವಪ್ಪ ಕಳಸಣ್ಣನವರ (40) ಮೃತ ದುರ್ದೈವಿ. ಬೆಂಗಳೂರಿನ ಸುಜಾತಾ ಕೆ.ಎಂ.ಕಾರು ಹಾಯಿಸಿದ ಮಹಿಳೆ. ಅಜ್ಜಪ್ಪ ವಿದ್ಯುತ್ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದ. ಸುಜಾತಾಳ ಜಮೀನಿನಲ್ಲಿ ವಿದ್ಯುತ್ ಪರಿವರ್ತಕದ ಕೆಲಸವಿದ್ದ ಕಾರಣ ಅವರ ಜಮೀನಿನ …
Read More »ಹಲ್ಲೆ, ಜಾತಿ ನಿಂದನೆ ನಾಲ್ವರ ವಿರುದ್ಧ ಎಐಆರ್
ಕನಕಪುರ: ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿ, ಮಳವಳ್ಳಿ ತಾಲೂಕು ನಿಡಗಟ್ಟು ಗ್ರಾಮದ ಸಿದ್ದರಾಜು ಎಂಬುವವರ ಮೇಲಿನ ದೈಹಿಕ ಹಲ್ಲೆ ಹಾಗೂ ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹೋಬಳಿಯ ಹರಿಹರ ಗ್ರಾಮದ ಕೆಂಚೇಗೌಡ ಮತ್ತವರ ಮಕ್ಕಳಾದ ಕೃಷ್ಣ, ಲೋಕೇಶ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಭಾನುವಾರ ಮಹದೇಶ್ವರಸ್ವಾಮಿ ದೇವಾಲಯ ಉದ್ಘಾಟನೆ ಸಮಾರಂಭ ಹಿನ್ನೆಲೆಯಲ್ಲಿ ಸೀರಿಯಲ್ ಸೆಟ್ ಬಿಡಲು ಹಾಗೂ ದ್ವಾರಬಾಗಿಲು …
Read More »ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಸಂಘರ್ಷ
ಕುಂದಾಣ(ದೇವನಹಳ್ಳಿ): ತಾಲ್ಲೂಕಿನ ಕುಂದಾಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ತಡರಾತ್ರಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಸಂಘರ್ಷ ಸಂಭವಿಸಿ, ಎಂಟಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಒಂದು ವಿದ್ಯಾರ್ಥಿಗಳ ಗುಂಪು ಬೆಲ್ಟ್ ಗಳಿಂದಮತ್ತೊಂದು ಗುಂಪಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ವಸತಿ ನಿಲಯದಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಮಾತು ಕೇಳುತ್ತಿಲ್ಲ. ಬಟ್ಟೆ ಒಗೆದು ಕೊಡುತ್ತಿಲ್ಲ ಹಾಗೂ ಹೋಂವರ್ಕ್ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಇತರ ವಿದ್ಯಾರ್ಥಿಗಳ ವಸತಿ ಕೊಠಡಿಗಳಿಗೆ ನುಗ್ಗಿ …
Read More »16 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ: ತಂದೆಗೆ 20 ವರ್ಷ ಜೈಲು
ಬೆಂಗಳೂರುದಲ್ಲಿ 16 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ತಂದೆ ಮನೋಜ್ ವಿಶ್ವಕರ್ಮಗೆ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2023ರಲ್ಲಿ ಬಾಲಕಿ ಮನೆಗೆ ಒಬ್ಬಳೇ ಬಂದಿದ್ದ ವೇಳೆ ಆರೋಪಿ ಮದ್ಯಪಾನ ಮಾಡಿ ಬಂದು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಬಾಲಕಿ ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. …
Read More »ಲಂಚ ವಸೂಲಿ, ಸಿಪಿಐ ಉದಯರವಿ ಅಮಾನತು
ಬಳ್ಳಾರಿ: ಕಬ್ಬಿಣದ ಅದಿರು ಅಕ್ರಮ ದಾಸ್ತಾನಿಗೆ ನೆರವಾಗಿದ್ದು, ಕೆರೆಯ ಮಣ್ಣು ಸಾಗಿಸುತ್ತಿದ್ದ ದಂಧೆಕೋರರಿಂದ ಲಂಚ ವಸೂಲಿ ಮಾಡಿದ ಆರೋಪದಡಿ ಬಳ್ಳಾರಿ ಗ್ರಾಮೀಣ ವೃತ್ತ ಸಿಪಿಐ ಉದಯ ರವಿ ಅವರನ್ನು ಅಮಾನತು ಮಾಡಲಾಗಿದೆ. ತಾಲೂಕಿನ ಹಲಕುಂದಿ ಗ್ರಾಮದ ಬಳಿ ಅಕ್ರಮ ಅದಿರು ದಾಸ್ತಾನು ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಮುಚ್ಚಿಹಾಕಲು ಉದಯರವಿ ಯತ್ನಿಸಿದ್ದರು. ಕೊಳಗಲ್ ಗ್ರಾಮದ ಕೆರೆಯ ಮಣ್ಣನ್ನು ಇಟ್ಟಂಗಿ ಭಟ್ಟಿಗಳಿಗೆ ಅಕ್ರಮವಾಗಿ ಸಾಗಿಸಲು ಟ್ರಾೃಕ್ಟರ್ ಮಾಲೀಕರಿಂದ ಹಣ ಪಡೆದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





