Breaking News

ಬೆಣ್ಣೆಹಳ್ಳದಿಂದ ಭಾರಿ ಹಾನಿಯಾಗುತ್ತೀದ್ದು, ಅದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು: ಕೋನರಡ್ಡಿ

ನವಲಗುಂದ: ತಾಲೂಕಿನ ಬೆಣ್ಣೆಹಳ್ಳ ಅಕ್ಕಪಕ್ಕ ಇರುವ ಗ್ರಾಮಗಳ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಈರುಳ್ಳಿ, ಗೋವಿನಜೋಳ, ಮೆಣಸಿನಕಾಯಿ ಬೆಳೆ ಹಾನಿ ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಬೆಣ್ಣೆಹಳ್ಳದ ಅಗಲೀಕರಣ ಮಾಡಿ ಗ್ರಾಮಗಳಿಗೆ ನೀರು ನುಗ್ಗದಂತೆ ಈ ವರ್ಷವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.

ತಾಲೂಕಿನ ಗುಡಿಸಾಗರ, ನಾಗನೂರ, ಸೊಟಕನಾಳ, ಕಡದಳ್ಳಿ, ಅರಹಟ್ಟಿ ಹಾಗೂ ತಡಹಾಳ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ತಡಹಾಳ ಹತ್ತಿರ ಪ್ರತಿ ವರ್ಷ ಬೆಣ್ಣೆಹಳ್ಳದಿಂದ ಆಗುವ ತೊಂದರೆ ಬಗ್ಗೆ ಪರಿಶೀಲನೆ ಮಾಡಿ ಮಾತನಾಡಿದ ಅವರು ಪ್ರತಿ ವರ್ಷ ಮಳೆಗಾಲದಲ್ಲಿ ಬೆಣ್ಣೆಹಳ್ಳ ಹಾಗೂ ಗುಡಿಸಾಗರ ಹತ್ತಿರ ಇರುವ ಗುಂಡಿಗೇನಹಳ್ಳ, ನಾಗನೂರ ಸೊಟಕನಾಳ ಮಧ್ಯ ಇರುವ ಪೂಜಾರಿ ಗರ್ಸ ಹಳ್ಳ ಹಾಗೂ ಇತರೇ ಉಪಹಳ್ಳಗಳಲ್ಲಿ ಕಂಟಿ ಬೆಳೆದು ಕೆಲವು ಕಡೆ ಮಣ್ಣಿನಿಂದ ರಾಡಿ ಬಿಟ್ಟು ಅದು ದೊಡ್ಡ ಗುಡ್ಡೆಗಳಾಗಿ ಕಂಟಿ ಬೆಳೆದು ನೀರು ಹರಿವು ಕಡಿಮೆಯಾಗಿ ಹಳ್ಳದ ಹರಿವನ್ನು ಬಿಟ್ಟು ಬೇರೆ ಬೇರೆ ಕಡೆ ಹರಿದು ರೈತರ ಜಮೀನು ಹಾಗೂ ಗ್ರಾಮಗಳಲ್ಲಿ ನೀರು ನುಗ್ಗಿ ಹಾಳಾಗುತ್ತಾ ಬಂದಿದೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *