ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ವಿಜಯಪುರ ವಿಶೇಷ ಪೋಕ್ಸೋ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ ₹1.15 ಲಕ್ಷ ದಂಡ ವಿಧಿಸಿದೆ. ಬಬಲೇಶ್ವರ ಠಾಣೆ ವ್ಯಾಪ್ತಿಯ ಕಾತ್ರಾಳ ಗ್ರಾಮದ ಹಣಮಂತ ಭೀಮಪ್ಪ ಕೊಕಟನೂರ ಎಂಬಾತ 2025ರ ಜುಲೈ 25ರಂದು, ರಾತ್ರಿ ಬಹಿರ್ದೆಸೆಗೆ ಹೋಗಿದ್ದ ಬಾಲಕಿಯೊಬ್ಬಳಿಗೆ ಚಾಕಲೇಟ್ ಕೊಡಿಸುವುದಾಗಿ ಪುಸಲಾಯಿಸಿ, ಬೈಕಿನಲ್ಲಿ ಊರಿನ ಹೊರವಲಯದ ಹೊಲವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಈ ಕುರಿತು ಬಬಲೇಶ್ವರ …
Read More »ಕೋಮುದ್ವೇಷ ಪ್ರಚೋದಿಸುವ ವಿಡಿಯೋ ಶೇರ್ ಮಾಡಿದ ಯುವಕ ಅರೆಸ್ಟ್
ಮಂಗಳೂರು, ಮಾರ್ಚ್ 23: ಸಾಮಾಜಿಕ ಜಾಲತಾಣದಲ್ಲಿ 2025ರ ಅಕ್ಟೋಬರ್ ತಿಂಗಳಲ್ಲಿ ಫೇಸ್ಬುಕ್ ನಲ್ಲಿ “ನಝೀರ ಮಂಗಳೂರು” ಎಂಬ ಫೇಸ್ ಬುಕ್ ಖಾತೆಯಿಂದ ಎಐ ತಂತ್ರಾಶದಲ್ಲಿ ತಿರುಚಿದ ವಿಡಿಯೋವನ್ನು ಶೇರ್ ಮಾಡಿ ಸಮಾಜದಲ್ಲಿ ಕೋಮುದ್ವೇಷ ಹುಟ್ಟುಹಾಕಲು ಪ್ರಚೋದಿಸಿದ್ದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಬಡಗಬೆಳ್ಳೂರು ಗ್ರಾಮದ ಕೋಳ್ತಮಜಲು ನಿವಾಸಿ ಮಹಮ್ಮದ್ ರಫೀಕ್ (38) ಎಂಬಾತ “ನಝೀರ ಮಂಗಳೂರು” ಖಾತೆಯಿಂದ ವಿಡಿಯೋ ಶೇರ್ ಮಾಡಿದ್ದು ದೃಢಪಟ್ಟಿತ್ತು. ಈ ಬಗ್ಗೆ ಕಂಕನಾಡಿ ನಗರ …
Read More »ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್: ಮುತ್ತಪ್ಪ ರೈ ಪುತ್ರನಿಗೆ ನೋಟಿಸ್, ವಿಚಾರಣೆಗೆ ಬರುವಂತೆ ಸೂಚನೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ Cubbon Park ಟ್ರಾಫಿಕ್ ಪೊಲೀಸರು ನೋಟಿಸ್ ನೀಡಿದ್ದಾರೆ. ಶನಿವಾರ ಮುಂಜಾನೆ ಸುಮಾರು 2:30ರ ವೇಳೆಗೆ ಲ್ಯಾಂಬೋರ್ಗಿನಿ ಕಾರಿನಲ್ಲಿ ಡ್ರಿಫ್ಟಿಂಗ್ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ರಿಕ್ಕಿ ರೈ “ನಾನು ಕಾರು ಚಾಲನೆ ಮಾಡಿಲ್ಲ” ಎಂದು ಹೇಳಿದ್ದರು. ಆದರೆ Anil Kumble Circle …
Read More »ಬೆಂಗಳೂರಿನಲ್ಲಿ ೯ ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ
ಬೆಂಗಳೂರು ನಗರದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಂದಾಜು ೯ ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಾಯಿಗಳ ಆಹಾರದ ಪ್ಯಾಕೆಟ್ಗಳಲ್ಲಿ ಅಡಗಿಸಿ ರಾಜಧಾನಿ ಎಕ್ಸ್ಪ್ರೆಸ್ ಮೂಲಕ ದೆಹಲಿಯಿಂದ ಬೆಂಗಳೂರಿಗೆ ಈ ಮಾದಕ ವಸ್ತುಗಳನ್ನು ತರುತ್ತಿದ್ದಾಗ ಈ ಕ್ರಮ ಕೈಗೊಳ್ಳಲಾಗಿದೆ. ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಮುಖ್ಯ ಆರೋಪಿ ಸೇರಿದಂತೆ ಆತನ ಸಂಪರ್ಕದಲ್ಲಿದ್ದ ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಆರೋಪಿಯ ಮನೆಯಿಂದ ೭೦ …
Read More »ಮಂಡ್ಯ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಗ್ರಾಮಸ್ಥರಿಂದ ದೂರು
ಮಂಡ್ಯ: ಯುಗಾದಿ ಹಬ್ಬದ ದಿನ ಪಚ್ಚಿ ಆಟವಾಡುತ್ತಿದ್ದ ನೂರಾರು ಮಂದಿ ಮೇಲೆ ದಾಳಿ ನಡೆಸಿದ್ದೂ ಅಲ್ಲದೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಮಂಡ್ಯ ಗ್ರಾಮಾಂತರ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮಸ್ಥರು ದೂರು ನೀಡಿದ್ದಾರೆ.ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಕೆ.ಸಿ.ಗಿರೀಶ್ ಎಂಬಾತನ ಮೇಲೆ ಯುಗಾದಿ ಹಬ್ಬದ ದಿನವಾದ ಮಾರ್ಚ್.19ರ ಗುರುವಾರ ಸಂಜೆ ಮಂಡ್ಯ ಗ್ರಾಮಾಂತರ ಠಾಣೆ ಪಿಎಸ್ಐ ರಸೂಲ್ ಸಾಬ್ …
Read More »ಚಂಡೀಗಢ : ಪಾಕ್ ಮೂಲದ ಪೆಡ್ಲರ್ಗಳ ಬಂಧನ, 5 ಕೆಜಿ ಡ್ರಗ್ಸ್ ವಶ
ಚಂಡೀಗಢ, ಮಾ. 23 (ಪಿಟಿಐ) ಅಮೃತಸರದಲ್ಲಿರುವ ಪಂಜಾಬ್ ಪೊಲೀಸರ ಕೌಂಟರ್-ಇಂಟೆಲಿಜೆನ್ಸ್ ಘಟಕವು ಪಾಕ್ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದೆ. ಮಾದಕವಸ್ತು ಕಳ್ಳಸಾಗಣೆ ಮಾಡುವುದನ್ನು ಭೇದಿಸಿ 5 ಕೆಜಿ ಹೆರಾಯಿನ್ ಹೊಂದಿರುವ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರ ಮತ್ತು ಗಡಿಯಾಚೆಗಿನ ಸರಕುಗಳನ್ನು ಸಂಘಟಿಸುವ ವಿದೇಶಿ ಮೂಲದ ಹ್ಯಾಂಡ್ಲರ್ ಜೊತೆಗಿನ ಸಂಪರ್ಕವು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಡಿಜಿಪಿ ಗೌರವ್ ಯಾದವ್ ಎಕ್ಸ್ …
Read More »ಅಡುಗೆ ಅನಿಲದ ಅಭಾವ, ಶಾಲೆಯಲ್ಲಿದ್ದ ಆರು ಸಿಲಿಂಡರ್ ಕದ್ದ ಖದೀಮರು!
ಬೀದರ್ : ಇತ್ತೀಚಿನ ದಿನಗಳಲ್ಲಿ ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪೂರೈಕೆ ಅಡಚಣೆಯಿಂದ ಅನೇಕ ಹೋಟೆಲ್ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಈ ಪರಿಸ್ಥಿತಿಯನ್ನೇ ದುರುಪಯೋಗಪಡಿಸಿಕೊಂಡ ಕಳ್ಳರು ಹಗಲಲ್ಲೇ ಸಿಲಿಂಡರ್ ಕಳವು ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಅಡುಗೆಮನೆಯ ಬೀಗ ಮುರಿದು 6 ಸಿಲಿಂಡರ್ಗಳನ್ನು ಅಪಹರಿಸಲಾಗಿದೆ. ಅಡುಗೆಗಾಗಿ ಸಂಗ್ರಹಿಸಿದ್ದ ಸಿಲಿಂಡರ್ಗಳನ್ನು ಕಳ್ಳರು …
Read More »ಪತ್ನಿ ಜೊತೆ ಅಕ್ರಮ ಸಂಬಂಧ ಆರೋಪ : ಪ್ರಶ್ನಿಸಿದ ಪತಿಯ ಹತ್ಯೆಗೈದ ಪ್ರಿಯಕರ !
ಯಾದಗಿರಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರವನ್ನು ಪ್ರಶ್ನಿಸಿದ ಪತಿಯನ್ನು ಪ್ರಿಯಕರನೇ ಹತ್ಯೆ ಮಾಡಿದ ಘಟನೆ ತಾಲೂಕಿನ ಹೊಸಹಳ್ಳಿ ಸಮೀಪ ಬೆಳಕಿಗೆ ಬಂದಿದೆ. ತಾಲೂಕಿನ ಚಾಮನಹಳ್ಳಿ ತಾಂಡದ ನಿವಾಸಿ ಸಾಗರ್ ರಾಠೋಡ್ (30) ಹತ್ಯೆಗೆ ಒಳಗಾದ ವ್ಯಕ್ತಿ. ಅದೇ ತಾಂಡದ ರೆಡ್ಡಿ ರಾಠೋಡ್ ಆರೋಪಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಒಂದು ವರ್ಷದಿಂದ ಸಾಗರ್ ಪತ್ನಿಯೊಂದಿಗೆ ರೆಡ್ಡಿ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದ್ದು, ಈ …
Read More »ಗಾಂಜಾ ಸೇವನೆ; ವ್ಯಕ್ತಿ ಬಂಧನ
ಭಟ್ಕಳ: ತಾಲೂಕಿನ ವೆಂಕಟಾಪುರದ ಸಾರ್ವಜನಿಕ ರಸ್ತೆಯಲ್ಲಿ ಶನಿವಾರ (ಮಾ.21) ರಾತ್ರಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೊನ್ನಾವರ ತಾಲೂಕಿನ ನಾಕುದಾ ಮೊಹಲ್ಲಾ ನಿವಾಸಿ ಅಲಿ ಅಕ್ಬರ ಅಬ್ದುಲ್ ಖಾದೀರ (31) ಎಂದು ಗುರುತಿಸಲಾಗಿದೆ. ಈತನು ಶನಿವಾರ ರಾತ್ರಿ ವೆಂಕಟಾಪುರದ ಸಾರ್ವಜನಿಕ ರಸ್ತೆಯಲ್ಲಿ ತೂರಾಡುತ್ತಾ ಇರುವ ಕುರಿತು ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಆತ ತಾನು …
Read More »ಕಸದ ರಾಶಿಯಲ್ಲಿ ಪತ್ತೆಯಾಯ್ತು ಮಹಿಳೆಯ ಶವ: ಹಣಕಾಸಿನ ವಿಚಾರಕ್ಕೆ ಕೊಲೆ ಶಂಕೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಕ್ರೂರವಾಗಿ ಹತ್ಯೆಗೈದು ಶವವನ್ನು ಕಸದ ರಾಶಿಯಲ್ಲಿ ಎಸೆದಿರುವ ಘಟನೆ ಕೆಂಗೇರಿಯ ಮೈಲ್ಸಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಡೆದಿದೆ. ಮಹದೇಶ್ವರ ಬಡಾವಣೆಯ ನಿವಾಸಿ ಕೆಂಪಮ್ಮ (45) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯರು ಕಸದ ರಾಶಿಯಲ್ಲಿ ಶವ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯ ತಲೆಗೆ ಭಾರವಾದ ವಸ್ತುವಿನಿಂದ ಬಲವಾಗಿ ಹೊಡೆದು ಹತ್ಯೆ ಮಾಡಲಾಗಿದೆ ಎಂಬ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





