ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವಿಷ ಸೇವಿಸಿದ್ದ ವಿವಾಹಿತ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಾವನ್ನಪ್ಪಿದ ಮಹಿಳೆಯನ್ನ ಪೂಜಾ ಎಂದು (30) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ತೀರ್ಥಹಳ್ಳಿಯ ಕೋಣಂದೂರು ಸಮೀಪದ ಶಂಕರಳ್ಳಿ ಈಶ್ವರಪ್ಪನವರ ಮಗಳಾದ ಪೂಜಾಳನ್ನ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ನಿವಾಸಿ ಶರತ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.
Read More »ಉ.ಪ್ರ.: ಮೊಹಮ್ಮದ್ ಎಂಬುದನ್ನು ತಪ್ಪಾಗಿ ಬರೆದು ಸಿಕ್ಕಿಬಿದ್ದ ನಾಲ್ವರು!
ಉತ್ತರಪ್ರದೇಶದ ಅಲಿಘಡದಲ್ಲಿ ದೇಗುಲ ಗೋಡೆಗಳ ಮೇಲೆ ” ಐ ಲವ್ ಮೊಹಮದ್ ’ ಎಂದು ಬರೆದ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ . ಇನ್ನೊರ್ವ ತಲೆ ಮರೆಸಿಕೊಂಡಿದ್ದಾನೆ . ಆರೋಪಿಗಳೆಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದು , ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಕ್ತಿಗಳನ್ನು ಸಿಲುಕಿ ಸಲು ಈ ಷಡ್ಯಂತ್ರ ನಡೆಸಲಾಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ .
Read More »ಸೌದಿ ಅರೇಬಿಯಾ: ಪೊಲೀಸರು, ಸುಲಿಗೆ ಗ್ಯಾಂಗ್ ನಡುವಿನ ಗುಂಡಿನ ಚಕಮಕಿಯಲ್ಲಿ ಭಾರತೀಯ ಯುವಕ ಮೃತ್ಯು..
ಸೌದಿ ಅರೇಬಿಯಾದ ಜಿದ್ದಾದಲ್ಲಿ ಅ.16ರಂದು ಪೊಲೀಸರು ಹಾಗೂ ಸುಲಿಗೆ ಗ್ಯಾಂಗ್ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಜಾರ್ಖಂಡ್ ಮೂಲದ ಯುವಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.ಮೃತ ಯುವಕನನ್ನು ವಿಜಯ್ ಕುಮಾರ್ ಮಹತೊ (26) ಎಂದು ಗುರುತಿಸಲಾಗಿದ್ದು, ಈತ ಗಿರಿಧ್ ಜಿಲ್ಲೆಯ ದುಮ್ರಿ ತಾಲೂಕಿನ ಮಧ್ ಗೋಪಾಲಿ ಪಂಚಾಯ್ತಿ ವ್ಯಾಪ್ರಿಯ ಧೂದ್ ಪಾನಿಯಾ ಗ್ರಾಮದವನು.ಯುವಕನ ಮೃತದೇಹವನ್ನು ಭಾರತಕ್ಕೆ ಮರಳಿಸಲು ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಜಾರ್ಖಂಡ್ ಕಾರ್ಮಿಕ ಇಲಾಖೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ …
Read More »ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ ವೇಳೆ 10 ಹೆಚ್ಚು ಜನರಿಗೆ ಗಾಯ!
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.ಶಿವಮೊಗ್ಗ ತಾಲೂಕು ಹಾಗೂ ಶಿಕಾರಿಪುರದಲ್ಲಿ ವಾರದ ಹಿಂದೆ ಹೋರಿ ಬೆದರಿಸುವ ಸ್ಪರ್ಧೆ ನಡೆದಿತ್ತು. ಈ ವೇಳೆ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಶಿವಮೊಗ್ಗ ತಾಲೂಕಿನ ರಾಮನಕೊಪ್ಪ ಹಾಗೂ ದೊಡ್ಡಕೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಈ ಘಟನೆ ನಡೆದಿದೆ.
Read More »ಮಾಟ-ಮಂತ್ರದ ವಿಚಾರವಾಗಿ ಕಲಹ, ಪತ್ನಿ ಮೇಲೆ ಬಿಸಿ ಬಿಸಿ ಫಿಶ್ ಕರಿ ಎರಚಿದ ಪತಿ
ಮಾಟಮಂತ್ರದ ವಿಚಾರವಾಗಿ ಪತಿ–ಪತ್ನಿ ನಡುವೆ ವಾಗ್ವಾದ ನಡೆದಿದೆ. ಪತಿ ಕೋಪದಲ್ಲಿ ಪತ್ನಿಯ ಮೇಲೆ ಬಿಸಿಬಿಸಿಫಿಶ್ ಕರಿಎರಚಿರುವ ಘಟನೆ ಕೇರಳದ ಕೊಲ್ಲಂನಲ್ಲಿ ವರದಿಯಾಗಿದೆ. ಚಡಯಮಂಗಲಂ ಸಮೀಪದ ವೈಕ್ಕಲ್ನ ಸಂತ್ರಸ್ತೆ ರೆಜಿಲಾ ಗಫೂರ್ (36) ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
Read More »ತನ್ನ ತಮ್ಮನ ಜೊತೆ ಮಲಗಲೊಪ್ಪದ ಹೆಂಡತಿಯನ್ನು 10 ದಿನ ರೂಂನಲ್ಲಿ ಕೂಡಿಹಾಕಿದ ಗಂಡ!
ಗಂಡ ತನ್ನ ತಮ್ಮನ ಜೊತೆ ಲೈಂಗಿಕ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದ. ಆದರೆ ಮೈದುನನ ಜೊತೆ ಮಲಗಲು ಆಕೆ ಒಪ್ಪಿರಲಿಲ್ಲ. ಆಕೆಯ ಗಂಡನ ಅಪ್ಪ-ಅಮ್ಮ ಕೂಡ ಸೊಸೆ ತಮ್ಮ ಕಿರಿಯ ಮಗನ ಜೊತೆ ಸಂಬಂಧ ಹೊಂದಬೇಕೆಂದು ಬಯಸಿದ್ದರು.ಇದಕ್ಕೆ ಆಕೆ ಒಪ್ಪದಿದ್ದಾಗ ಪುಟ್ಟ ಮಗುವಿನ ಜೊತೆ ಆಕೆಯನ್ನು 10 ದಿನ ರೂಂನಲ್ಲಿ ಕೂಡಿಹಾಕಲಾಗಿದೆ.ಆ ರೂಂನಲ್ಲಿ ಅವರಿಗೆ ಆಹಾರ, ನೀರು, ಕರೆಂಟ್, ಟಾಯ್ಲೆಟ್ ಯಾವ ಸೌಲಭ್ಯವನ್ನೂ ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಲಾಗಿತ್ತು.
Read More »ಮಂಗಳಮುಖಿಯರ ಅಟ್ಟಹಾಸ: ಜೊತೆಗಾತಿಯ ತಲೆಬೋಳಿಸಿ ಮನಸೋ ಇಚ್ಛೆ ಹಲ್ಲೆ!
ಮಂಗಳಮುಖಿಯರ ಗ್ಯಾಂಗ್ ತಮ್ಮ ಜೊತೆಗಾತಿಯನ್ನು ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪುಂಡಾಟ ಮೆರೆದಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ವಿರಾಟ್ ನಗರದಲ್ಲಿ ನಡೆದಿದೆ. ಸುಕನ್ಯಾ ಎಂಬ ಮಂಗಳಮುಖಿಯ ತಲೆಬೋಳಿಸಿ ಹಲ್ಲೆ ಮಾಡಿ ವಿಕೃತಿ ಮರೆದಿದೆ.ತಮ್ಮ ಟೀಂ ಬಿಟ್ಟು ಬೇರೊಂದು ತಂಡ ಜೊತೆಗೆ ಹೋಗಿದ್ದಕ್ಕೆ ಆಕ್ರೋಶಗೊಂಡ ಪ್ರೀತಿ, ಚಿನ್ನಿ ಮಂಗಳಮುಖಿಯರ ತಂಡ ಸುಕನ್ಯಾಳನ್ನ ಕೆಆರ್ ಪುರದಿಂದ ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಬಂದು ಬೊಮ್ಮನಹಳ್ಳಿಗೆ ಕರೆದೊಯ್ದು ಹಲ್ಲೆ ಮಾಡಿದೆ.
Read More »ಪತ್ನಿಯ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ
ಕೊಪ್ಪಳ :ಪತ್ನಿಯೊಡನೆ ಜಗಳವಾಡಿ ಹಣ ನೀಡುವಂತೆ ಪೀಡಿಸಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.ಪಟ್ಟಣದ ಇಂದಿರಾ ನಗರದ ನಿವಾಸಿಯಾಗಿದ್ದ ರಾಮಣ್ಣ ಆರೋಪಿಯಾಗಿದ್ದು, ಆತ ಕುಡಿತದ ಚಟಕ್ಕೆ ಬಿದ್ದು ತನ್ನ ಪತ್ನಿ ದ್ಯಾವಮ್ಮ(ಜ್ಯೋತಿ)ಗೆ ಹಣ ನೀಡುವಂತೆ ಪೀಡಿಸಿ ಬಳಿಕ ಹತ್ಯೆಗೈದಿದ್ದ ಎನ್ನಲಾಗಿದೆ.
Read More »ಯಾದಗಿರಿ: ಡಿಸಿ ಹೆಸರಲ್ಲಿ ವೈದ್ಯಾಧಿಕಾರಿಗೆ ₹50 ಸಾವಿರ ವಂಚನೆ
ವಾಟ್ಸ್ಆಯಪ್ನಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಫೋಟೊ ಬಳಸಿಕೊಂಡು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯೊಬ್ಬರಿಂದ ₹50 ಸಾವಿರ ಪಡೆದು ವಂಚಿಸಿರುವ ಬಗ್ಗೆ ‘ಸೆನ್’ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಡಿ.ಕಟ್ಟಿಮನಿ ವಂಚನೆಗೆ ಒಳಗಾದವರು.ಹಲೊ ಜ್ಯೋತಿ, ಕೆಲಸ ಹೇಗೆ ನಡೆಯುತ್ತಿದೆ’ ಎಂದು ವಂಚಕರು ವಾಟ್ಸ್ಆಯಪ್ನಲ್ಲಿ ಇಂಗ್ಲಿಷ್ನಲ್ಲಿ ಸಂದೇಶ ಕಳುಹಿಸಿದ್ದರು. ಜಿಲ್ಲಾಧಿಕಾರಿಯೇ ಮೆಸೇಜ್ ಕಳುಹಿಸಿದ್ದಾಗಿ ನಂಬಿದ ಜ್ಯೋತಿ, ‘ಯಾವುದೇ ತೊಂದರೆ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದರು.ಕೆಲ ನಿಮಿಷದ ಬಳಿಕ ಇಂಟರ್ನೆಟ್ ಬ್ಯಾಂಕಿಂಗ್ನಿಂದ …
Read More »ಬೆಂಗಳೂರು: ಮಕ್ಕಳತ್ತ ಪಟಾಕಿ ಎಸೆದಿದ್ದ ಇಬ್ಬರ ವಿರುದ್ಧ ಎಫ್ಐಆರ್
ಮಕ್ಕಳ ಕಡೆಗೆ ಪಟಾಕಿ ಎಸೆದು, ಕೈ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೇವಿನಗರ ನಿವಾಸಿ ರಾಜೇಶ್ವರಿ ಕಂದಪ್ಪನವರ ದೂರಿನ ಮೇರೆಗೆ ಹಿರಾನಂದನಿ ನಿವಾಸಿಗಳಾದ ದೀಪಾಂಕ್ಸು ಶಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಕ್ಟೋಬರ್ 22ರಂದು ರಾತ್ರಿ ಮಕ್ಕಳು ಪಟಾಕಿ ಸಿಡಿಸುತ್ತಿದ್ದ ವೇಳೆ ಫ್ಲ್ಯಾಟ್ ಸಂಖ್ಯೆ ಎ-904 ನಿವಾಸಿ ದೀಪಾಂಕ್ಸು ಶಾ ಬಂದು ಅವರತ್ತ ಪಟಾಕಿ ಎಸೆದಿದ್ದಾರೆ. ಆಗ ಬೆಂಕಿ ಕಿಡಿ ತಾಗಿ ಮಗನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





