Breaking News

Uncategorized

ಟಾಟಾ ಏಸ್ , ಗೂಡ್ಸ್ ವಾಹನದಕ್ಕೆ ಡಿಕ್ಕಿ : 12 ಜನರಿಗೆ ಗಾಯ

ಕಲಘಟಗಿ : ಟಾಟಾ ಏಸ್ ಹಾಗೂ 407 ಗೂಡ್ಸ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 12 ಜನರಿಗೆ ಗಾಯಗಳಾಗಿರುವ ಘಟನೆ ಕಲಘಟಗಿ ತಾಲೂಕಿನ ಶೀಗಿಗಟ್ಟಿ ಬಳಿ ಇಂದು ನಡೆದಿದೆ . ಟಾಟಾ ಏಸ್ ವಾಹನದಲ್ಲಿ ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ 12 ಜನರು ಅಪಘಾತದಲ್ಲಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಗಾಯಾಳುಗಳು ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದವರು ಎಂದು ತಿಳಿದು ಬಂದಿದ್ದು , ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ …

Read More »

ಧಾರವಾಡ: ಇಸ್ಲಾಮಿಕ್ ಜಿಹಾದಿಗಳ ಅನಾಚಾರ ವಿರುದ್ಧ ಬಜರಂಗದಳ ಪ್ರತಿಭಟನೆ

BIG TV NEWS Subscribe like share

Read More »

ಅವಳಿ ನಗರ ಪೊಲೀಸರಿಗೆ ಅನ್ಯಾಯ ಆಗಿದೆ ಎಂದು ದ್ವನಿ ಎತ್ತಿದ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡರು

BIG TV NEWS Subscribe like share

Read More »

ಕಲಘಗಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳು ಅಬಕಾರಿ ಪೊಲೀಸರ ವಶಕ್ಕೆ; ಆರೋಪಿ ವಿರುದ್ಧ ಪ್ರಕರಣ ದಾಖಲು

ಧಾರವಾಡ: ಜೂನ್ 14 ರಂದು ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಿಂದ ಶಿಂಗನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಮಾರುತಿ ಗಂಗಪ್ಪ ಕಿಳ್ಳಿಕ್ಯಾತರಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಬೆಳೆಸಿದ್ದ 5.5 ಅಡಿ ಯಿಂದ 8 ಅಡಿ ಎತ್ತರದ 4 ಹಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಮಾರುತಿ ಗಂಗಪ್ಪ ಕಿಳ್ಳಿಕ್ಯಾತರನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದ್ದು, ಆತನ ವಿರುದ್ಧ ಕಲಘಟಗಿ ವಲಯದ ಅಬಕಾರಿ ನಿರೀಕ್ಷಕ ಅಮೀತ ಬೆಳ್ಳುಬ್ಬಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ …

Read More »

ಬಾಲಕಿ ಮೇಲೆ ಅತ್ಯಾಚಾರ : 20 ವರ್ಷ ಜೈಲು ಶಿಕ್ಷೆ, 80 ಸಾವಿರ ದಂಡ

ಮಂಡ್ಯ: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 80 ಸಾವಿರ ದಂಡ ವಿಧಿಸಿ ಮಂಡ್ಯ ಎಡಿಜೆ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ. ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ 03 ಜುಲೈ 2020ರ ರಾತ್ರಿ 10 ಗಂಟೆಗೆ ಕೃತ್ಯ ನಡೆದಿತ್ತು. ಅಶೋಕ್ ಶಿಕ್ಷೆಗೆ ಒಳಪಟ್ಟ ಅಪರಾಧಿ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಮಠವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಪರಾಧಿ ಅಶೋಕ್, ಅಪ್ಪ-ಅಮ್ಮ ಇಲ್ಲದೆ …

Read More »

ಬೆಂಗಳೂರಿನಲ್ಲಿ ʼ ಪ್ರಧಾನಿ ಮೋದಿ ಮೆಗಾ ರೋಡ್‌ ಶೋ ಗೆ ಸಕಲ ʼ ಸಿದ್ಧತೆ

ಬೆಂಗಳೂರು : ಪ್ರಧಾನಿ ಮೋದಿ ರಾಜ್ಯ ಪ್ರವಾಸ ಹಿನ್ನೆಲೆ ಬೆಂಗಳೂರಿನಲ್ಲಿ ʼ ಪ್ರಧಾನಿ ಮೋದಿ ಮೆಗಾ ರೋಡ್‌ ಶೋ ಗೆ ಸಕಲ ʼ ಸಿದ್ಧತೆ ನಡೆಸಲಾಗುತ್ತಿದೆ. ಜೂನ್‌ 20ರಂದು ಬೆಂಗಳೂರು ಉತ್ತರ ಹಾಗೂ ದಕ್ಷಿಣದಲ್ಲಿ ಮೋದಿ ರೋಡ್‌ ಶೋ ನಡೆಯಲಿದೆ. ಒಟ್ಟು 12 ಕಿಲೋ ಮೀಟರ್‌ ಗಳಷ್ಟುದೂರ ರೋಡ್‌ ಕ್ರಮಿಸಲಿದ್ದಾರೆ. ಹೀಗಾಗಿ ಬೆಂಗಳೂರು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವಸೇರಿದಂತೆ ಬಿಜಿಪಿ ಮುಖಂಡರಿಂದ ಭಾರೀ ಸಿದ್ಧತೆ ನಡೆಯುತ್ತಿದೆ.

Read More »

ರಾಜ್ಯಕ್ಕೆ ಮೋದಿ ಭೇಟಿ‌ ಹಿನ್ನಲೆ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ

ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20 ಹಾಗೂ 21 ರಂದು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದು, ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರಿಂದ ನರೇಂದ್ರ ಮೋದಿಯವರ ಈ ಭೇಟಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಭಾರಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

Read More »

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಆತ್ಮಹತ್ಯೆಗೆ ಶರಣು

ಬೆಂಗಳೂರು:  ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಗೋದ್ರೇಜ್ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಬಿದ್ದು ವೈದ್ಯನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ವಿಕ್ಟೋರಿಯಾ ಆಸ್ಪತ್ರೆಯ 31 ವರ್ಷದ ವೈದ್ಯ ಪೃಥ್ವಿರಾಜ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ದುರ್ಘಟನೆಗೆ ಈಡಾಗಿದ್ದಾರೆ. ದುರಂತದ ನಡೆದ ಗೋದ್ರೇಜ್ ಅಪಾರ್ಟ್ಮೆಂಟ್ ನ 11ನೆ ಮಹಡಿಗೆ ಮತ್ತು ಪೃಥ್ವಿರಾಜ್‌ ಬಿದ್ದಿದ್ದ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಗೋದ್ರೆಜ್ ಅಪಾರ್ಟ್ …

Read More »

ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧಿ​ಸು​ವುದು ಖಚಿತ : ಯಡಿ​ಯೂ​ರಪ್ಪ

ತುಮ​ಕೂ​ರು: ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧಿ​ಸು​ವುದು ಖಚಿತ. ಆದರೆ ಕ್ಷೇತ್ರ ಯಾವು​ದೆಂದು ನಿರ್ಧಾ​ರ​ವಾ​ಗಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಬಿ.ಎಸ್‌.ಯಡಿ​ಯೂ​ರಪ್ಪ ತಿಳಿ​ಸಿ​ದ್ದಾರೆ. ಅವರು ತುಮ​ಕೂ​ರಿ​ನಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ ಗುಬ್ಬಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬು​ದರ ಬಗ್ಗೆ ಖಚಿ​ತತೆ ಇಲ್ಲ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭವಾಗಿದ್ದು ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನು ಗೆದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬುದು ನಮ್ಮ ದೃಷ್ಟಿ. ಆ ದೃಷ್ಟಿಯಿಂದ ರಾಜ್ಯಪ್ರವಾಸ ಪ್ರಾರಂಭವಾಗಿದೆ ಎಂದರು. ವಾರಕ್ಕೊಂದು ಜಿಲ್ಲೆಗೆ …

Read More »

ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿಗೆ ಭರ್ಜರಿ ಗೆಲುವು

ಬೆಳಗಾವಿ: ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ 34,693 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು. ಕೊನೆಯ ಸುತ್ತಿನಲ್ಲಿ ನಿರಾಣಿ ಅವರಿಗೆ 44.815 ಮತ ಬಂದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುನೀಲ ಸಂಕ 10,122 ಮತ ಗಳಿಸಿದರು. ಮೂರನೇ ಸ್ಥಾನದಲ್ಲಿರುವ ದೀಪಿಕಾ ಅವರಿಗೆ 453 ಮತ ಮಾತ್ರ ಬಂದಿವೆ. ಎಲ್ಲ 65,992 ಮತಗಳ ಎಣಿಕೆ ಮುಗಿಯಲು ತಡರಾತ್ರಿ 12.20 ಆಯಿತು. 9,006 ಮತಗಳು ಅಸಿಂಧುವಾಗಿವೆ.

Read More »