admin
March 5, 2022
Breaking News, World
ಮುಂಬೈ: ಬೀದಿ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿ ರಿಜ್ವಾನ್ ಶೇಖ್ (45) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಮನೆಯ ಮುಂದಿನ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಬೀದಿನಾಯಿಯನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಹೋಗುವುದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ನೋಡಿದ್ದರು. ಇದರಿಂದ ಅನುಮಾನಗೊಂಡ ಅವರು ಆತನನ್ನು ಗಮನಿಸುತ್ತಿದ್ದರು. ನಂತರ ಆ ಬೀದಿನಾಯಿ ತೀವ್ರ ನೋವಿನಿಂದ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದುದನ್ನು ನೋಡಿ ಅದನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. …
Read More »
admin
March 5, 2022
Breaking News, World
ಪಾಟ್ನಾ: ಮೂರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದು, 11ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ ಬಾಗಲಪುರದಲ್ಲಿ ನಡೆದಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ತತಾರ್ ಪುರ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಮೂರು ಅಂತಸ್ತಿನ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ.ಸ್ಫೋಟದ ತೀವ್ರತೆಗೆ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ನೆಲಸಮವಾಗಿದೆ.
Read More »
admin
March 4, 2022
Breaking News, World
ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ .52 ವರ್ಷದ ಮಾಜಿ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್ʼನ ಎರಡನೇ ಅತ್ಯಂತ ಪ್ರಭಾವಶಾಲಿ ವಿಕೆಟ್ ಟೇಕರ್ ಆಗಿದ್ದು, ಶ್ರೇಷ್ಠ ಬೌಲರ್ʼಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ‘ಶೇನ್ ತಮ್ಮ ವಿಲ್ಲಾದಲ್ಲಿ ಪ್ರತಿಕ್ರಿಯಿಸುತ್ತಿಲ್ಲ ಮತ್ತು ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನ ಪುನರುಜ್ಜೀವನಗೊಳಿಸಲಾಗಲಿಲ್ಲ’ ಎಂದು ವಾರ್ನ್ ಅವರ ಆಡಳಿತ ಮಂಡಳಿ ಹೇಳಿಕೆಯಲ್ಲಿ ದೃಢಪಡಿಸಿದೆ.
Read More »
admin
March 4, 2022
Breaking News, World
ಪೇಶಾವರ : ವಾಯವ್ಯ ಪಾಕಿಸ್ತಾನದ ಪ್ರಾಂತೀಯ ರಾಜಧಾನಿ ಪೇಶಾವರದ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದು, 56 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಇನ್ನು ಈ ಕುರಿತು ವರದಿ ಮಾಡಿದ್ದು, ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 30 ಸಾವು, 56 ಜನರು ಗಾಯಾಳುಗಳಾಗಿದ್ದಾರೆ ಎಂದಿದೆ.
Read More »
admin
March 4, 2022
Breaking News, World
ಕೀವ್ : ಉಕ್ರೇನ್- ರಷ್ಯಾ ಯುದ್ಧ ಮುಂದುವರೆದಿದ್ದು, ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಇನ್ನೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದ್ದು, ಸದ್ಯ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಮಾಹಿತಿ ನೀಡಿದ್ದಾರೆ. ರಷ್ಯಾದ ಗುಂಡಿನ ದಾಳಿಯಲ್‌ಇ ಕೀವ್ ನ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿದೆ.ತಕ್ಷಣವೇ ವಿದ್ಯಾರ್ಥಿಯನ್ನು ಕೀವ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜನರಲ್ ವಿ.ಕೆ.ಸಿಂಗ್ ಅವರು ಹೇಳಿದರು. ಪ್ರತಿಯೊಬ್ಬರೂ ಕೀವ್ ನಿಂದ ಹೊರಹೋಗಬೇಕೆಂದು ಭಾರತೀಯ …
Read More »
admin
March 3, 2022
Breaking News, World
ಬೆಳ್ತಂಗಡಿ: ಉಕ್ರೇನ್‌ನ ಕಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಬಂಕರ್ ನಲ್ಲಿ ಅಡಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದ್ದಾರೆ. ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಅವರು ಮೃತಪಟ್ಟ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದಾರೆ ಎಂದು ಅವರ ಮಾವ, ಉದ್ಯಮಿ ಆಬಿದ್ ಅಲಿ ಅವರು …
Read More »
admin
March 3, 2022
Breaking News, World
ತಿರುವನಂತಪುರಂ : ಉಕ್ರೇನ್ ಮತ್ತು ರಷ್ಯಾ ನಡುವಿನ ಸಮರವು ಪ್ರತಿ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದೆ. ಓದು, ಉದ್ಯೋಗ ಎಂದು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಲ್ಲಿ 3,500 ಕೇರಳಿಗರು ಸಿಲುಕಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿಳಿಸಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ಕೇರಳಿಗರ ತಕ್ಷಣದ ಸ್ಥಳಾಂತರಕ್ಕಾಗಿ ವಿದೇಶಾಂಗ ಸಚಿವಾಲಯವು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿವರಗಳನ್ನು ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸುಮಾರು 3,500 ಜನರು ಈಗಾಗಲೇ ನೋರ್ಕಾ ರೂಟ್ಸ್ …
Read More »
admin
March 3, 2022
Breaking News, World
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೊಲ್ಲಲು ಆಗಮಿಸಿದ್ದ ಚೆಚೆನ್ಯಾ ಮೂಲದ ಹಂತಕರ ಗುಂಪೊಂದನ್ನು ಸಂಪೂರ್ಣವಾಗಿ ನಾಶ ಮಾಡಿರುವುದಾಗಿ ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣ ಕೌನ್ಸಿಲ್‌ನ ಮುಖ್ಯಸ್ಥರಾದ ಒಲೆಕ್ಸಿಯ್ ಡ್ಯನಿಲೊವ್ ತಿಳಿಸಿದ್ದಾರೆ. ರಷ್ಯಾ ಗುಪ್ತಚರ ಇಲಾಖೆಯಲ್ಲಿರುವ, ಯುದ್ಧ ಮಾಡುವ ಮನಸ್ಸಿಲ್ಲದ ಅಧಿಕಾರಿಗಳು ಉಕ್ರೇನ್‌ನ ಅಧಿಕಾರಿಗಳಿಗೆ ಚೆಚೆನ್ಯಾದಿಂದ ಬಂದಿದ್ದ ಈ ಹಂತಕರ ಗುಂಪಿನ ಬಗ್ಗೆ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿಯನ್ನಾಧರಿಸಿ ಹಂತಕರ ಗುಂಪನ್ನು ನಾಶಗೈದಿರುವುದಾಗಿ ಒಲೆಕ್ಸಿಯ್ ತಿಳಿಸಿದ್ದಾರೆ.
Read More »
admin
March 2, 2022
Breaking News, World
ನವದೆಹಲಿ: ರಷ್ಯಾದ ಪಡೆಗಳ ಭಾರಿ ಶೆಲ್ ದಾಳಿಯ ನಡುವೆ, ಉಕ್ರೇನ್ ನ ಖಾರ್ಕಿವ್ ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಅವರ ಸುರಕ್ಷತೆಗಾಗಿ ತಕ್ಷಣವೇ ನಗರವನ್ನು ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸೂಚಿಸಲಾಗಿದೆ. ಖಾರ್ಕಿವ್ ನಲ್ಲಿರುವ ಎಲ್ಲಾ ಭಾರತೀಯರನ್ನು ತಕ್ಷಣವೇ ನಗರದಿಂದ ಹೊರಹೋಗುವಂತೆ ಎಂಇಎ ತಿಳಿಸಿದೆ.ರಾತ್ರಿ 9.30ರ ವೇಳೆಗೆ ರೈಲ್ವೆ ನಿಲ್ದಾಣಗಳನ್ನು ತಲುಪುವಂತೆ ರಾಯಭಾರ ಕಚೇರಿ ಸೂಚಿಸಿದೆ. ಈ ಮೂಲಕ ಉಕ್ರೇನ್ ನಲ್ಲಿರುವಂತ ಭಾರತೀಯರು ಕೂಡಲೇ ಖಾರ್ಕಿವ್ ನಿಂದ್ ಸ್ಥಳೀಯ ಕಾಲಮಾನ …
Read More »
admin
March 2, 2022
Breaking News, World
ಯುದ್ದಪೀಡಿತ ಉಕ್ರೇನ್ʼನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಜಾಬ್ ಮೂಲದ ಯುವಕ ಚಂದನ್ ಇಂದು ಪಾರ್ಶ್ವವಾಯು ನಿಂದ ಮೃತ ಪಟ್ಟಿದ್ದಾನೆ ಎನ್ನಲಾಗ್ತಿದೆ. ಚಂದನ್ ಜಿಂದಾಲ್ (22) ಅನ್ನೋ ಯುವಕ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೊವ್, ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿ, ವಿನ್ನಿಟ್ಸಿಯಾ ಉಕ್ರೇನ್ʼನಲ್ಲಿ ಅಧ್ಯಯನ ಮಾಡುತ್ತಿದ್ದನು. ಇನ್ನು ಚಂದನ್ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದು, ವಿನ್ನಿಟ್ಸಿಯಾದ ತುರ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೆದುಳಿನಲ್ಲಿ ಇಸ್ಚೆಮಿಯಾ ಸ್ಟ್ರೋಕ್ʼನಿಂದ ಬಳಲುತ್ತಿದ್ದ ಚಂದನ್‌ನನ್ನ ನಂತ್ರ ಐಸಿಯುಗೆ …
Read More »