Breaking News

World

Et ullamcorper sollicitudin elit odio consequat mauris, wisi velit tortor semper vel feugiat dui, ultricies lacus. Congue mattis luctus, quam orci mi semper

ಶಿವನ ದರ್ಶನಕ್ಕೆ ಹೋದವರು ಶಿವನ ಪಾದ ಸೇರಿದರು

ನುಪಾಡಾ(ಒಡಿಶಾ): ಮಹಾಶಿವರಾತ್ರಿ ಅಂಗವಾಗಿ ಶಿವನ ದರ್ಶನ ಪಡೆದುಕೊಂಡು ವಾಪಸ್​ ಬರುತ್ತಿದ್ದ ವೇಳೆ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು ಆರು ಮಂದಿ ಭಕ್ತರು ದುರ್ಮರಣಕ್ಕೀಡಾಗಿದ ಘಟನೆ ಒಡಿಶಾದ ನುಪಾಡಾದಲ್ಲಿ ಈ ದುರ್ಘಟನೆ ನಡೆದಿದೆ. ಇಂದು ಮಧ್ಯಾಹ್ನ ನುಪಾಡಾದ ನೃಸಿಂಹನಾಥ ದೇವಸ್ಥಾನದಿಂದ ವಾಪಸ್​ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಛತ್ತೀಸ್​ಗಢದವರಾಗಿರುವ ಇವರು ಶಿವರಾತ್ರಿ ಅಂಗವಾಗಿ ಪಕ್ಕದ ರಾಜ್ಯದ …

Read More »

ಉಕ್ರೇನ್ ನಲ್ಲಿ ಬಂಧನವಾಗಿರುವ ಭಾರತೀಯರಿಗೆ ಧೈರ್ಯ ತುಂಬಿದ ಸಿಂಧಿಯಾ

ಬುಕಾರೆಸ್ಟ್: ಯುದ್ಧಪೀಡಿತ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವುದನ್ನು ಕಾರ್ಯಕ್ಕೆ ಕೇಂದ್ರ ಸರ್ಕಾರ ವೇಗ ನೀಡಿದೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಭೇಟಿಯಾಗಿ ಧೈರ್ಯ ತುಂಬಿದ ಕೇಂದ್ರ ಸಚಿವ ಸಿಂಧಿಯಾ ಅದರಂತೆ ರೊಮೇನಿಯಾದ ಬುಕಾರೆಸ್ಟ್​ ತಲುಪಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಲ್ಲಿನ ಭಾರತೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅಲ್ಲದೇ, ಶೀಘ್ರವೇ ತಮ್ಮನ್ನು ತಾಯ್ನಾಡಿಗೆ ಕರೆದೊಯ್ಯಲಾಗುವುದು ಎಂದು ಧೈರ್ಯ ತುಂಬಿದರು.

Read More »

ಪ್ರಧಾನಿ ವಿರುದ್ಧ ಆರೋಪ ಮಾಡಿದ ಡಿಕೆಶಿ

ಕೀವ್ : ಉಕ್ರೇನ್‌ನಲ್ಲಿ ನವೀನ್ ಸಾವಿನ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ತೆರಳಿದ್ದಾರೆ. ನಮ್ಮಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜುಗಳಿದ್ದರೂ ಬೇಡಿಕೆ ಹೆಚ್ಚಾಗಿರುವುದರಿಂದ ನಮ್ಮ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ವಿಶ್ವದ ಇತರೆ ದೇಶಗಳು ತಮ್ಮ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಂಡಿದ್ದರೆ, ನಮ್ಮ ದೇಶದ ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ. ಕೇಂದ್ರ ಸರ್ಕಾರ ನಿನ್ನೆಯಷ್ಟೇ …

Read More »

ಬಿಜೆಪಿಗೆ 300ಕ್ಕಿಂತಲೂ ಅಧಿಕ ಸ್ಥಾನಗಳು ಲಭಿಸಲಿವೆ : ಆದಿತ್ಯನಾಥ್‌

ಇಂಫಾಲ್‌/ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 300ಕ್ಕಿಂತಲೂ ಅಧಿಕ ಸ್ಥಾನಗಳು ಲಭಿಸಲಿವೆ. ನಾನು ಭಗವಾಧಾರಿ. ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ದಿನವೂ ರಾಜ್ಯ ಸರ್ಕಾರಕ್ಕೆ ಪರೀಕ್ಷೆಯೇ ಆಗಿದೆ. ಹಿಂದಿನ ಅವಧಿಯಲ್ಲಿನ ನಮ್ಮ ಸಾಧನೆಯನ್ನು ಸುಧಾರಿಸಲು ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ. ಸದ್ಯ ಐದು ಹಂತಗಳ ಚುನಾವಣೆಗಳು ಮುಕ್ತಾಯವಾಗಿವೆ. ಅದರಲ್ಲಿ 225 ಕ್ಷೇತ್ರಗಳಲ್ಲಿ ಬಿಜೆಪಿಯೇ ಜಯಸಾಧಿಸಲಿದೆ …

Read More »

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆ ಮಾಡಲು ಸಂಚು

ಕೀವ್ : ರಷ್ಯಾದ 400 ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಹತ್ಯೆ ಮಾಡಲು ಆದೇಶಿಸಿದ್ದು, ಇದರಿಂದಾಗಿ ಅವರು ರಷ್ಯಾ ಸೈನಿಕರು ಹುಡುಕುತ್ತಿದ್ದಾರೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ. 400ಕ್ಕೂ ಹೆಚ್ಚು ಸೈನಿಕರನ್ನು ರಷ್ಯಾ ಆಫ್ರಿಕಾದಿಂದ ಕರೆಸಿಕೊಂಡಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಅವರ ಸರ್ಕಾರದ ಅಧಿಕಾರಿಗಳನ್ನು ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅಧ್ಯಕ್ಷ ಪುಟಿನ್ ಅವರ ಮಿತ್ರರ ಬಳಗದಲ್ಲಿ ಒಬ್ಬರಿಂದ ನಡೆಸಲ್ಪಡುವ ವ್ಯಾಗ್ನರ್ ಗ್ರೂಪ್ ಕಂಪನಿಯು ಐದು ವಾರಗಳ …

Read More »

ಯುದ್ದ ಪೀಡಿತ ಉಕ್ರೇನ್‌ಗೆ $ 350 ಮಿಲಿಯನ್ ಮಿಲಿಟರಿ ಉಪಕರಣ ಯುಎಸ್

ನ್ಯೂಯಾರ್ಕ್: ರಷ್ಯಾದ ‘ಕ್ರೂರ ಮತ್ತು ಅಪ್ರಚೋದಿತ ಆಕ್ರಮಣ’ ದ ವಿರುದ್ಧ ಹೋರಾಡಲು ಯುನೈಟೆಡ್ ಸ್ಟೇಟ್ಸ್ (US)ಉಕ್ರೇನ್‌ಗೆ $ 350 ಮಿಲಿಯನ್ ನ ಹೆಚ್ಚುವರಿ ಮಿಲಿಟರಿ ಉಪಕರಣಗಳನ್ನು ನೀಡುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಶನಿವಾರ ಘೋಷಿಸಿದರು. ‘ಈ ಪ್ಯಾಕೇಜ್ ಉಕ್ರೇನ್ ಈಗ ಎದುರಿಸುತ್ತಿರುವ ಶಸ್ತ್ರಸಜ್ಜಿತ, ವಾಯುಗಾಮಿ ಮತ್ತು ಇತರ ಬೆದರಿಕೆಗಳನ್ನು ಪರಿಹರಿಸಲು ಸಹಾಯ ಮಾಡಲು ಮತ್ತಷ್ಟು ಮಾರಕ ರಕ್ಷಣಾತ್ಮಕ ಸಹಾಯವನ್ನು ಒಳಗೊಂಡಿರುತ್ತದೆ’ ಎಂದು ಬ್ಲಿಂಕನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಳೆದ ಕೆಲ …

Read More »

ಉಕ್ರೇನ್ ಗೆ ಸಲಹೆ‌ ನೀಡಿದ ಮೋದಿ

ಕೀವ್: ಉಕ್ರೇನ್‌ನಲ್ಲಿ ರಷ್ಯಾ ಯುದ್ಧದಿಂದಾಗಿ ಆಗಿರುವ ಪ್ರಾಣಹಾನಿ ಆಸ್ತಿಪಾಸ್ತಿ ನಷ್ಟದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಮಂತ್ರಿ ಸಚಿವಾಲಯ ಮಾಹಿತಿ ನೀಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು ಈ ವೇಳೆ ಅಧ್ಯಕ್ಷ ಝೆಲೆನ್ಸ್ಕಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ವಿವರವಾಗಿ ತಿಳಿಸಿದರು. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಹೊರತಾಗಿ ಶಾಂತಿ ಮಾತುಕತೆ …

Read More »

ಭಾರತಕ್ಕೆ ಧನ್ಯವಾದ ತಿಳಿಸಿದ ರಷ್ಯಾ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾವನ್ನು ಖಂಡಿಸುವ ನಿರ್ಣಯವನ್ನು ಬೆಂಬಲಿಸದ ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ರಷ್ಯಾ ಧನ್ಯವಾದ ಹೇಳಿದೆ. ಈ ಕರಡನ್ನು ಬೆಂಬಲಿಸದವರಿಗೆ ನಾವು ಧನ್ಯವಾದ ಹೇಳುತ್ತೇವೆ ಎಂದು ವಿಶ್ವಸಂಸ್ಥೆಯ ( ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಹೇಳಿದ್ದಾರೆ. ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾವನ್ನು ಖಂಡಿಸುವ ನಿರ್ಣಯದ ಮೇಲೆ ಮತದಾನದಿಂದ ದೂರ ಉಳಿದಿವೆ. 11 …

Read More »

12 ರಿಂದ 18 ವಯಸ್ಸಿನ ಮಕ್ಕಳಿಗೆ ಕಾರ್ಬೆವಾಕ್ಸ್‌ ಕೋವಿಡ್​ ಲಸಿಕೆಗೆ DCGI ಅನುಮೋದನೆ

ಚೆನ್ನೈ (ತಮಿಳುನಾಡು): 12 ರಿಂದ 18 ವಯಸ್ಸಿನ ಮಕ್ಕಳಿಗೆ ನೀಡಲು ಕಾರ್ಬೆವಾಕ್ಸ್‌ ಕೋವಿಡ್​ ಲಸಿಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಈಗಾಗಲೇ ಅನುಮೋದನೆ ನೀಡಿದೆ. ತಮಿಳುನಾಡಿನ 12-15 ವಯಸ್ಸಿನ ಮಕ್ಕಳಿಗೆ ನೀಡಲು 3.89 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ರಾಜ್ಯ ಸ್ವೀಕರಿಸಿದೆ. ಕೇಂದ್ರ ಸರ್ಕಾರವು ರಾಜ್ಯದಲ್ಲಿ 12-18 ವರ್ಷದ ಮಕ್ಕಳಿಗೆ 21.66 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ನಿಗದಿಪಡಿಸಿದ್ದು, 3.89 ಲಕ್ಷ ಡೋಸ್ ಸಿಕ್ಕಿದೆ. ಕೇಂದ್ರವು ಮಾರ್ಗಸೂಚಿಗಳನ್ನು …

Read More »

ಉಕ್ರೇನ್‌ನೊಂದಿಗೆ ಮಾತುಕತೆ ನಡೆಸಲು ರಷ್ಯಾ ಸಿದ್ದ

ಮಾಸ್ಕೊ: ಉಕ್ರೇನ್‌ನೊಂದಿಗೆ ಮಾತುಕತೆ ನಡೆಸಲು ಬೆಲರೂಸ್‌ ರಾಜಧಾನಿ ಮಿನ್‌ಸ್ಕ್‌ಗೆ ನಿಯೋಗವನ್ನು ಕಳುಹಿಸಲು ರಷ್ಯಾ ಸಿದ್ಧವಾಗಿದೆ ಎಂದು ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ. ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ನಿಯೋಗವನ್ನು ಕಳುಹಿಸಲು ರಷ್ಯಾ ಸಿದ್ಧವಾಗಿದೆ ಎಂದು ಪೆಸ್ಕೋವ್ ರಷ್ಯಾದ ಸುದ್ದಿ ಸಂಸ್ಥೆಗಳಿಗೆ ತಿಳಿಸಿದರು.

Read More »